Upanyasa - VNU052

GK-14 ಮದುವೆಗೆ ಬಂದ ಮಹಾದೇವ

21/07/2016

ಮದುವೆಯ ದಿಬ್ಬಣ

ರುದ್ರದೇವರ ಮದುವೆಗಾಗಿ ಪರಮಾತ್ಮ, ಬ್ರಹ್ಮದೇವರು, ಇಂದ್ರಾದಿ ಸಮಸ್ತದೇವತೆಗಳು, ಋಷಿಗಳು ಋಷಿಪತ್ನಿಯರು ಎಲ್ಲರೂ ಸೇರುತ್ತಾರೆ. ರುದ್ರದೇವರು ಮದುವೆ ಹೇಗೆ ನಡೆಯಬೇಕು ಎಂದು ಪರಮಾತ್ಮನನ್ನು ಕೇಳುತ್ತಾರೆ. ಗೃಹ್ಯಸೂತ್ರಗಳು ತಿಳಿಸಿದಂತೆ ಮದುವೆ ನಡೆಯಲಿ ಎಂದು ಪರಮಾತ್ಮ ಆದೇಶಿಸುತ್ತಾನೆ. ಬ್ರಹ್ಮದೇವರು, ಕಶ್ಯಪರು ನಾಂದೀಸ್ಥಾಪನ, ಮಂಟಪರಚನೆ ಮಂತಾದ ಕ್ರಿಯೆಗಳನ್ನು ಆರಂಭಿಸುತ್ತಾರೆ. ರುದ್ರದೇವರಿಗೆ ಶಾಸ್ತ್ರೋಕ್ತವಾದ ರೀತಿಯಲ್ಲಿ ಅಭ್ಯಂಜನ ನಡೆಯುತ್ತದೆ. 

ಆ ಬಳಿಕ ದೇವತೆಗಳ ಸಮೇತರಾಗಿ ರುದ್ರದೇವರು ಹಿಮಾಲಯನ ಮನೆಗೆ ಹೊರಟು ನಿಲ್ಲುತ್ತಾರೆ. ರುದ್ರದೇವರ ಭೃತ್ಯರಾದ ಭೂತಗಣಗಳು, ಆ ಗಣಗಳಿಗೆ ನಾಯಿಕೆಯಾದ ಚಂಡಿ ಕಲಶಗಿತ್ತಿಯಾಗಿ ಮುಂಭಾಗದಲ್ಲಿ ನಡೆಯುತ್ತಾಳೆ. ಭೂತ, ಪ್ರೇತ, ಪಿಶಾಚ, ಶಾಕಿನಿಯರ ಮೆರವಣಿಗೆಯ ಸಂಭ್ರಮವನ್ನು ಕೇಳಿ ಅನಂದಿಸಿ. 

ಮದುವೆಯ ಮಂಟಪ

ಇತ್ತ ಗಿರಿರಾಜನೂ ಸಹ ಮನೆಯಲ್ಲಿ ನಾಂದೀಸ್ಥಾಪನಾದಿ ಕಾರ್ಯಗಳನ್ನು ಗರ್ಗಾಚಾರ್ಯರ ಮುಖಾಂತರ ಆರಂಭಿಸುತ್ತಾನೆ. ದೇವತಾಸ್ತ್ರೀಯರು ತಾಯಿ ಪಾರ್ವತಿಗೆ ಅಭ್ಯಂಜನ ಅಲಂಕಾರಗಳನ್ನು ಮಾಡುತ್ತಾರೆ. 

ಹಿಮವಂತ ವಿಶ್ವಕರ್ಮನನ್ನು ಕರೆಯಿಸಿ ಸಭೆಯನ್ನು ನಿರ್ಮಾಣ ಮಾಡಿಸುತ್ತಾನೆ. ಮೂರ್ಲೋಕಗಳಲ್ಲಿಯೇ ಅಚ್ಚರಿನ್ನುಂಟುಮಾಡುವ ಅದ್ಭುತ ಸಭೆಯ ನಿರ್ಮಾಣವಾಗುತ್ತದೆ. ಮದುವೆಗೆ ಬರಲಿರುವ ಪ್ರತಿಯೊಬ್ಬರ ಪ್ರತಿಕೃತಿಯನ್ನು ನಿರ್ಮಾಣ ಮಾಡಿರುತ್ತಾನೆ, ವಿಶ್ವಕರ್ಮ. ಯಾವುದು ಜೀವಂತ, ಯಾವುದು ಕೃತ್ರಿಮ ಎಂದು ತಿಳಿಯಲಿಕ್ಕಾಗದಷ್ಟು ಅದ್ಭುತವಾದ ರೀತಿಯಲ್ಲಿ ವಿವಾಹಮಂಟಪ ನಿರ್ಮಾಣವಾಗುತ್ತದೆ. 

ಎದುರುಗೊಳ್ಳುವ ಶಾಸ್ತ್ರ

ಗಂಡಿನವರ ದಿಬ್ಬಣ ಹಿಮವಂತನ ಮನೆಯ ಸಮೀಪಕ್ಕೆ ಬರುತ್ತಿದ್ದಂತೆ ನಾರದರು ಹಿಮವಂತನ ಬಳಿ ಬಂದು ಗಂಡಿನವರು ಬಂದ ವಿಷಯವನ್ನು ತಿಳಿಸುತ್ತಾರೆ. ಮೇನಾ ಹಿಮವಂತರು ಸಮಸ್ತ  ಪರ್ವತಾಭಿಮಾನಿಗಳ ಸಮೇತರಾಗಿ ಬಂದು ರುದ್ರದೇವರನ್ನು ಎದುರುಗೊಳ್ಳುವ ಸಂಭ್ರಮದ ವಿಷಯವನ್ನು ನಾವಿಲ್ಲಿ ಕೇಳುತ್ತೇವೆ. 

ಬಂದ ಎಲ್ಲ ದೇವತೆಗಳಿಗೂ, ಋಷಿಗಳಿಗೂ, ಭೂತ, ಪ್ರೇತ, ಪಿಶಾಚಗಳಿಗೂ ವಿಶ್ವಕರ್ಮ ಅವರವರಿಗೆ ಯೋಗ್ಯವಾದ ಮನೆಗಳನ್ನು ನಿರ್ಮಾಣ ಮಾಡಿಕೊಡುತ್ತಾನೆ. ರುದ್ರದೇವರು ತಮಗಾಗಿ ಸಿದ್ಧಪಡಿಸಿದ್ದ ಅದ್ಭುತವಾದ ಗೃಹಕ್ಕೆ ಬಂದ ನಂತರ ಮೇನಾದೇವಿ ತನ್ನ ಭಾವೀ ಅಳಿಯನಿಗೆ ಆರತಿ ಮಾಡಿದ ಮಂಗಳಪ್ರಸಂಗದ ವಿವರಣೆಯೊಂದಿಗೆ ಈ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ

Play Time: 49 Minuts 48 Seconds

Size: 8.70 MB


Download Upanyasa Share to facebook View Comments
3214 Views

Comments

(You can only view comments here. If you want to write a comment please download the app.)
  • No Comment