Upanyasa - VNU053

GK-15 ಅಕ್ಷತಾರೋಪಣ

21/07/2016

ರುದ್ರದೇವರ ಸೌಂದರ್ಯ

ಪಾರ್ವತೀದೇವಿಯ ತಾಯಿಯಾದ ಮೇನಾದೇವಿಗೆ ಮನಸ್ಸಿನಲ್ಲೊಂದು ಸಂಶಯವಿರುತ್ತದೆ. ನನ್ನ ಮಗಳ ಸೌಂದರ್ಯಕ್ಕೆ ಶಿವಶಂಕರ ಸಾಟಿಯಾಗಬಲ್ಲನೇ ಎಂದು. ತನ್ನ ಮನೆಗೆ ಆಗಮಿಸಿದ ಅಳಿಯನಿಗೆ ಆರತಿ ಮಾಡಿ ಆ ಪರಮಶಿವನ ಸೌಂದರ್ಯವನ್ನು ಕಂಡು ಮಾತಿಲ್ಲದೇ ನಿಲ್ಲುತ್ತಾಳೆ, ಮೇನಾದೇವಿ. ತನ್ನ ಮಗಳ ಸೌಂದರ್ಯಕ್ಕಿಂತಲೂ ಮಿಗಿಲಾದ ಸೌಂದರ್ಯ ಅಳಿಯನದು ಎಂದು ಸಂತಸಪಡುತ್ತಾಳೆ ಆ ತಾಯಿ. 

ಬನ್ನಂಜೆಯ ದುರ್ವಾದದ ಖಂಡನೆ 

ಹೆಣ್ಣುಮಕ್ಕಳು ಬ್ಲೌಸ್ ಧರಿಸುವದು ಪ್ರಾಚೀನ ಸಂಪ್ರದಾಯವಲ್ಲ ಎನ್ನುವದು ಬನ್ನಂಜೆಯ ನೀಚ ದುರ್ವಾದಗಳಲ್ಲೊಂದು. ವೇದವ್ಯಾಸದೇವರು ಸ್ಕಂದಪುರಾಣದ ವಾಕ್ಯಗಳಿಂದ ಬನ್ನಂಜೆಯ ಈ ನೀಚದುರ್ವಾದವನ್ನು ಈ ಸಂದರ್ಭದಲ್ಲಿ ಖಂಡಿಸಲಾಗಿದೆ. 

ಮನುಷ್ಯಸ್ತ್ರೀಯರು blouse ಧರಿಸಬಹುದು, ದೇವತೆಗಳು ಧರಿಸಲಿಕ್ಕಿಲ್ಲ ಎಂಬ ಮತ್ತೊಂದು ತುಚ್ಛದುರ್ವಾದವನ್ನೂ ಸಹ ಇಲ್ಲಿ ಖಂಡಿಸಲಾಗಿದೆ. ಪಾರ್ವತೀದೇವಿ ಕಂಚುಕಧಾರಣೆಯನ್ನು ಮಾಡುತ್ತಿದ್ದಳು ಎಂಬ ತತ್ವದ ನಿರೂಪಣೆಯ ಸಂದರ್ಭದಲ್ಲಿ. 

ಗರ್ಗಾಚಾರ್ಯರು ಅಕ್ಷತಾರೋಪಣಕ್ಕಾಗಿ ರುದ್ರದೇವರನ್ನು ಕರೆತರಲು ಹಿಮವಂತನಿಗೆ ತಿಳಿಸುತ್ತಾರೆ. ಸಕಲ ಪರ್ವತಾಭಿಮಾನಿದೇವತೆಗಳು ಸಪತ್ನೀಕರಾಗಿ ಮಂಗಳದ್ರವ್ಯಗಳನ್ನು ಕೈಯಲ್ಲಿ ಹಿಡಿದು ಬರುತ್ತಾರೆ. 

ಆದರೆ, ರುದ್ರದೇವರ ಸಮೀಪದಲ್ಲಿ ಭಯಂಕರರೂಪದ, ಭಯಂಕರ ಅಲಂಕಾರಗಳ ಚಂಡೀ ಮುಂತಾದ ಭೂತಗಣಗಳಿರುತ್ತಾರೆ. ಆಗ ಶ್ರೀಹರಿ ರುದ್ರದೇವರ ಬಳಿ ಬಂದು ಚಂಡಿ ಮುಂತಾದವರನ್ನು ಒಳಗೆ ಹೋಗಲು ತಿಳಿಸುತ್ತಾನೆ. 

ರುದ್ರದೇವರು ಯಾಕಾಗಿ ಭೂತಗಣಗಳನ್ನು ತಮ್ಮ ಮದುವೆಗೆ ಕರೆದುಕೊಂಡು ಬಂದಿದ್ದರು ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವನ್ನು ಪಡೆಯುತ್ತೇವೆ. ನಮ್ಮ ಜೀವನದಲ್ಲಿ ನಾವು ಕಲಿಯಬೇಕಾದ ಶ್ರೇಷ್ಠವಾದ ಪಾಠದೊಂದಿಗೆ. 

ಅಕ್ಷತಾರೋಪಣ

ಸಕಲಋಷಿಗಳ, ಸಮಸ್ತದೇವತೆಗಳ ಸಮೇತನಾಗಿ,   ಸರಸ್ವತೀ-ಬ್ರಹ್ಮರ  ಲಕ್ಷ್ಮಿ-ನಾರಾಯಣರ ಮಧ್ಯದಲ್ಲಿ ರುದ್ರದೇವರು ಮಂಟಪಕ್ಕೆ ನಡೆದು ಬರುತ್ತಾರೆ. ಪರಮಾದ್ಭುತವಾದ ಸನ್ನಿವೇಶದ ಮಧ್ಯದಲ್ಲಿ ಗೌರೀಶಂಕರರು ಪರಸ್ಪರ ಅಕ್ಷತಾರೋಪಣೆ ಮಾಡಿಕೊಳ್ಳುತ್ತಾರೆ. ಕೇಳಿಯೇ ಆನಂದಿಸಬೇಕಾದ ಪರಮಪವಿತ್ರಭಾಗ.

ಅಕ್ಷತಾರೋಪಣೆಯ ನಂತರ ಸ್ವಯಂ ಲಕ್ಷ್ಮೀದೇವಿ ಸರಸ್ವತೀದೇವಿಯರು ಪಾರ್ವತೀಪರಮೇಶ್ವರರಿಗೆ ಆರತಿಯನ್ನು ಮಾಡುವ ಮಂಗಳಮಯ ಸನ್ನಿವೇಶದ ಚಿತ್ರಣದೊಂದಿಗೆ ಈ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ. 

Play Time: 47 Minuts 26 Seconds

Size: 8.30 MB


Download Upanyasa Share to facebook View Comments
1782 Views

Comments

(You can only view comments here. If you want to write a comment please download the app.)
  • Guruprasad um,Bangalore

    11:11 AM, 04/03/2019

    L