Upanyasa - VNU054

GK-16 ಗಿರಿಜಾಕಲ್ಯಾಣ

21/07/2016


ಕನ್ಯಾದಾನ

ರುದ್ರದೇವರಿಗೆ ಕನ್ಯಾದಾನವನ್ನು ಮಾಡಲು ಸಿದ್ಧನಾದ ಹಿಮವಂತ ರುದ್ರದೇವರ ಗೋತ್ರ ಯಾವುದು ಎಂದು ಕೇಳುತ್ತಾನೆ. ರುದ್ರದೇವರಿಗೆ ಯಾವುದೇ ಗೋತ್ರವಿಲ್ಲ. ರುದ್ರದೇವರಿಗಷ್ಟೇ ಅಲ್ಲ, ಯಾವುದೇ ದೇವತೆಗಳಿಗೂ ಗೋತ್ರವಿರುವದಿಲ್ಲ. ಈ ಕುರಿತ ವಿವರಣೆಯನ್ನು ನಾವಿಲ್ಲಿ ಕೇಳುತ್ತೇವೆ. 

ಸಮಸ್ತ ದೇವತೆಗಳ ಸಮ್ಮುಖದಲ್ಲಿ, ಋಷಿಗಳ ವೇದಘೋಷದ ಮಧ್ಯದಲ್ಲಿ ಹಿಮವಂತ ಮೇನೆಯರು ತಮ್ಮ ಮಗಳಾದ ಗಿರಿಜೆಯನ್ನು ರುದ್ರದೇವರಿಗೆ ಪತ್ನಿಯನ್ನಾಗಿ ನೀಡುತ್ತಾರೆ. ದೇವತಾಸ್ತ್ರೀಯರು, ಋಷಿಪತ್ನಿಯರು ನೀರಾಜನವನ್ನು ಮಾಡುವ, ಋಷಿಗಳು ವೇದಘೋಷಗಳಿಂದ ವಧೂವರರನ್ನು ಆಶೀರ್ವದಿಸುವ, ದೇವತೆಗಳು ಗಿರಿಜಾಶಂಕರರಿಗೆ ಉಡುಗೊರೆಯನ್ನು ನೀಡಿ ಧನ್ಯರಾಗುವ ಪ್ರಸಂಗವನ್ನು ನಾವಿಲ್ಲಿ ಕೇಳುತ್ತೇವೆ. 

ಭೂತಚೇಷ್ಟೆ

ಊಟದ ಸಂದರ್ಭದಲ್ಲಿ ರುದ್ರದೇವರ ಭೃತ್ಯರಾದ ಭೂತಗಣಗಳು ಮಾಡುವ ವಿಚಿತ್ರ ಚೇಷ್ಟೆ, ರುದ್ರದೇವರು ತಮ್ಮ ವೀರಭದ್ರರೂಪದಿಂದ ಅವರನ್ನು ನಿಯಂತ್ರಿಸುವ ಪರಿ, ನಾವು ಇದರಿಂದ ಕಲಿಯಬೇಕಾದ ಪಾಠ ಇವನ್ನು ಈ ಭಾಗದಲ್ಲಿ ಕೇಳುತ್ತೇವೆ. 

ಬೀಗರೌತಣ

ರುದ್ರದೇವರಿಗೆ ಮಗಳನ್ನು ನೀಡಿ ಮದುವೆ ಮಾಡಿದ ಹಿಮವಂತನಿಗೆ, ಮತ್ತು ಅವನ ಬಂಧುಗಳಾದ ಸಕಲ ಪರ್ವತಾಭಿಮಾನಿದೇವತೆಗಳಿಗೆ ಗಂಡಿನ ಕಡೆಯವರಾಗಿ ಲಕ್ಷ್ಮೀನಾರಾಯಣರು, ಸರಸ್ವತೀಬ್ರಹ್ಮದೇವರು ಮಾಡುವ ಗೌರವದ ಕುರಿತು ನಾವಿಲ್ಲಿ ಕೇಳುತ್ತೇವೆ. 

ಕೈಲಾಸಪ್ರವೇಶ
ರುದ್ರದೇವರು ಪಾರ್ವತೀದೇವಿಯನ್ನು ಕರೆದುಕೊಂಡು ರುದ್ರದೇವರು ಕೈಲಾಸಕ್ಕೆ ಹೊರಡುವ ಘಟನೆಯನ್ನು ನಾವಿಲ್ಲಿ ಕೇಳುತ್ತೇವೆ. ಶ್ರೀ ವೇದವ್ಯಾಸದೇವರು ಈ ಸಂದರ್ಭದಲ್ಲಿ ಸಜ್ಜನರಿಗೆ ಮಾಡಿರುವ ಆದೇಶದ ಚಿಂತನೆಯೊಂದಿಗೆ. 

ಫಲಶ್ರುತಿ
ಗಿರಿಜಾಕಲ್ಯಾಣದ ಶ್ರವಣ ಕೀರ್ತನಗಳಿಂದ ಉಂಟಾಗುವ ಫಲಗಳನ್ನು ಶ್ರೀ ಪುರಂದರದಾಸರ ಪತ್ನಿಯ ವಚನದ ಅನುಸಂಧಾನದೊಂದಿಗೆ ಚಿಂತಿಸಿ ಸಮಗ್ರ ಸಜ್ಜನಸಮುದಾಯಕ್ಕೆ ಮಂಗಳವುಂಟಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿಕೊಂಡು ಈ ಗಿರಿಜಾಕಲ್ಯಾಣದ ಸಂಪೂರ್ಣ ಉಪನ್ಯಾಸವನ್ನು ಗುರ್ವಂತರ್ಗತ, ಸಮಸ್ತದೇವತಾಂತರ್ಗತ, ಪಾರ್ವತೀಪತಿರುದ್ರಾಂತರ್ಗತ, ಭಾರತೀಪತಿಮುಖ್ಯಪ್ರಾಣಾಂತರ್ಗತ ಶ್ರೀವಿಷ್ಣುನಾಮಕನಾದ ಭಗವಂತನಿಗೆ ಸಮರ್ಪಿಸಲಾಗಿದೆ. 

ಗಿರಿಜಾಕಲ್ಯಾಣವನ್ನು ಶ್ರದ್ಧೆಯಿಂದ ಕೇಳಿದ ಎಲ್ಲರಿಗೂ ಶುಭವಾಗಲಿ, ನಿಮ್ಮ ಮನಸ್ಸಿನ ಅಭೀಷ್ಟ ಪೂರ್ಣವಾಗಲಿ ಎಂದು ಪಾರ್ವತೀಶ, ಭಾರತೀಶ, ಲಕ್ಷ್ಮೀಶರನ್ನು ಪ್ರಾರ್ಥಿಸುತ್ತೇನೆ. 

— ವಿಷ್ಣುದಾಸ ನಾಗೇಂದ್ರಾಚಾರ್ಯ

Play Time: 55 Minuts 19 Seconds

Size: 9.65 MB


Download Upanyasa Share to facebook View Comments
4169 Views

Comments

(You can only view comments here. If you want to write a comment please download the app.)
 • Bharati upadhya,Dharwad

  4:48 PM , 30/03/2020

  🙏🙏
 • Veena aralikatti,Hosapete

  11:16 PM, 04/04/2019

  Tumba chennagi heliddiri dhanyavadagalu acharyare
 • Rayabhagi Anand,Chennai

  9:40 PM , 04/03/2019

  Dhanyavadagalu Acharyare
 • Ushasri,Chennai

  8:35 AM , 16/10/2018

  Dhanyavadagalu achare
 • Ushasri,Chennai

  8:35 AM , 16/10/2018

  Dhanyavadagalu achare
 • Ushasri,Chennai

  8:35 AM , 16/10/2018

  Dhanyavadagalu achare
 • Ushasri,Chennai

  8:35 AM , 16/10/2018

  Dhanyavadagalu achare
 • Vishwanandini User,

  3:42 PM , 15/09/2018

  Dhanyavadagalu
 • PRASANNA KUMAR N S,Bangalore

  7:31 PM , 16/02/2018

  ದೇವತೆಗಳಿಗೇ ಗೋತ್ರವಿರುವುದಿಲ್ಲ.
  ಇನ್ನು ದೇವರಿಗೆ ಹೇಗೆ ಹೇಳುತ್ತೇವೆ ಅನ್ನೋ ಗೊಂದಲ.

  Vishnudasa Nagendracharya

  ಉಪನ್ಯಾಸದಲ್ಲಿಯೇ ವಿವರಿಸಿದ್ದೇನೆ. 
  
  ದೇವರಿಗೆ ದೇವತೆಗಳಿಗೆ ಗೋತ್ರವಿರುವದಿಲ್ಲ. 
  
  ಆದರೆ ಅವತಾರ ಮಾಡಿ ಬಂದಾಗ ಅವರಿಗೆ ಗೋತ್ರವಿರುತ್ತದೆ. ಅವತಾರ ಮಾಡಿ ಬಂದಾಗ ಮನುಷ್ಯಧರ್ಮಗಳನ್ನು ಅನುಸರಿಸುತ್ತಾರೆ. 
  
  ಭಗವಂತ ವೇದವ್ಯಾಸದೇವರಾಗಿ ಅವತರಿಸಿದಾಗ ವಸಿಷ್ಠಗೋತ್ರದವನು. ಪರಶುರಾಮನಾದಾಗ ಭಾರ್ಗವಗೋತ್ರದವನು. 
  
  ಹಾಗೆಯೇ ದೇವತೆಗಳೂ ಸಹ. 
  
  
  
  
 • PRASANNA KUMAR N S,Bangalore

  7:26 PM , 16/02/2018

  ಗುರುಗಳ ಕಾರುಣ್ಯಕ್ಕೆ ಅನಂತ ವಂದನೆಗಳು.
  ಸಾಂಖ್ಯಾನಸ ಗೋತ್ರ ಅಂತ ಗಾಯತ್ರಿ ಜಪದ ಸಂದರ್ಭದಲ್ಲಿ ಹೇಳುತ್ತೇವೆ.
  ದೇವತೆಗಳಿಗೆ ಗೋತ್ರವಿರುವುದಿಲ್ಲ ಅಂತ ತಿಳಿದಾಗ ಮೇಲಿನ ವಿಚಾರದಲ್ಲಿ ಗೊಂದಲವಾಗಿದೆ.
  ದಯವಿಟ್ಟು ಪರಿಹರಿಸಿ ಗುರುಗಳೆ.