Upanyasa - VNU056

ಮಂಗಳಾಚರಣ ಸಂಧಿ, ಪದ್ಯ 03-06

21/07/2016

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಪದ್ಯಗಳು. 


ನಿರುಪಮಾನಂದಾತ್ಮಭವ ನಿ
ರ್ಜರಸಭಾಸಂಸೇವ್ಯ ಋಜುಗಣ-
ದರಸೆ ಸತ್ತ್ವ ಪ್ರಚುರ ವಾಣೀಮುಖಸರೋಜೇನ |
ಗರುಡಶೇಷಶಶಾಂಕದಳಶೇ-
ಖರರ ಜನಕ ಜಗದ್ಗುರುವೇ ತ್ವ-
ಚ್ಚರಣಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯ || ೩ ||

ಆರು ಮೂರೆರಡೊಂದು ಸಾವಿರ-
ಮೂರೆರಡು ಶತಶ್ವಾಸ ಜಪಗಳ-
ಮೂರುವಿಧ ಜೀವರೊಳಗಬ್ಜಜಕಲ್ಪಪರಿಯಂತ |
ತಾ ರಚಿಸಿ ಸಾತ್ತ್ವರಿಗೆ ಸುಖ ಸಂ-
ಸಾರ ಮಿಶ್ರರಿಗಧಮಜನರಿಗ-
ಪಾರ ದುಃಖಗಳೀವ ಗುರು ಪವಮಾನ ಸಲಹೆಮ್ಮ || ೪ ||

ಚತುರವದನನ ರಾಣಿ ಅತಿರೋ-
ಹಿತ ವಿಮಲ ವಿಜ್ಞಾನಿ ನಿಗಮ-
ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ |
ನತಿಸಿ ಬೇಡುವೆ ಜನನಿ ಲಕ್ಷ್ಮೀ-
ಪತಿಯ ಗುಣಗಳ ತುತಿಪುದಕೆ ಸ-
ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ || ೫ ||

ಕೃತಿರಮಣ ಪ್ರದ್ಯುಮ್ನನಂದನೆ-
ಚತುರವಿಶಂತಿ ತತ್ತ್ವಪತಿ ದೇ-
ವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ |
ಸತತ ಹರಿಯಲಿ ಗುರುಗಳಲಿ ಸ-
ದ್ರತಿಯ ಪಾಲಿಸಿ ಭಾಗವತ ಭಾ-
ರತಪುರಾಣರಹಸ್ಯ ತತ್ತ್ವಗಳರುಹು ಕರುಣದಲಿ || ೬ ||

Play Time: 46 Minuts 14 Seconds

Size: 8.00 MB


Download Upanyasa Share to facebook View Comments
3228 Views

Comments

(You can only view comments here. If you want to write a comment please download the app.)
  • Latha narayan,Bangalore

    5:39 PM , 18/10/2017

    Meaning

    Vishnudasa Nagendracharya

    Press Download button to download the audio.