Upanyasa - VNU057

ಮಂಗಳಾಚರಣ ಸಂಧಿ, ಪದ್ಯ 07-10

21/07/2016

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಪದ್ಯಗಳು. 

ವೇದಪೀಠ ವಿರಿಂಚಿ ಭವ ಶ-
ಕ್ರಾದಿ ಸುರ ವಿಜ್ಞಾನದಾಯಕ-
ಮೋದ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ |
ಛೇದ ಭೇದ ವಿಷಾದ ಕುಟಿಲಾಂ-
ತಾದಿ ಮಧ್ಯ ವಿದೂರ ಆದಾ-
ನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ || ೭ ||

ಕ್ಷಿತಿಯೊಳಗೆ ಮಣಿಮಂತ ಮೊದಲಾ-
ದತಿ ದುರಾತ್ಮರು ಒಂದಧಿಕ ವಿಂ-
ಶತಿ ಕುಭಾಷ್ಯವ ರಚಿಸೆ ನಡುಮನೆಯೆಂಬ ಬ್ರಾಹ್ಮಣನ |
ಸತಿಯ ಜಠರದೊಳವತರಿಸಿ ಭಾ-
ರತಿ ರಮಣ ಮಧ್ವಾಭಿಧಾನದಿ
ಚತುರದಶ ಲೋಕದಲಿ ಮೆರೆದಪ್ರತಿಮಗೊಂದಿಸುವೆ || ೮ ||

ಪಂಚ ಭೇದಾತ್ಮಕ ಪ್ರಪಂಚಕೆ
ಪಂಚರೂಪಾತ್ಮಕನೆ ದೈವಕ-
ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ |
ಪಂಚವಿಂಶತಿ ತತ್ತ್ವ ತರತಮ
ಪಂಚಿಕೆಗಳನು ಪೇಳ್ದ ಭಾವಿ ವಿ-
ರಿಂಚಿಯೆನಿಪಾನಂದತೀರ್ಥರ ನೆನೆವೆನನುದಿನವು || ೯ ||

ವಾಮದೇವ ವಿರಿಂಚಿತನಯ ಉ-
ಮಾ ಮನೋಹರ ಉಗ್ರ ಧೂರ್ಜಟಿ-
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ |
ಕಾಮಹರ ಕೈಲಾಸ ಮಂದಿರ-
ಸೋಮಸೂರ್ಯಾನಲ ವಿಲೋಚನ-
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ || ೧೦ ||

Play Time: 34 Minuts 13 Seconds

Size: 5.94 MB


Download Upanyasa Share to facebook View Comments
3058 Views

Comments

(You can only view comments here. If you want to write a comment please download the app.)
  • No Comment