Upanyasa - VNU060

ಕರುಣಾಸಂಧಿ, ಪದ್ಯ 03-07

25/07/2016

ಶ್ರುತಿತತಿಗಳಭಿಮಾನಿ ಲಕುಮೀ-
ಸ್ತುತಿಗಳಿಗೆ ಗೋಚರಿಸದಪ್ರತಿ-
ಹತ ಮಹೈಶ್ವರ್ಯಾದ್ಯಖಿಳಸದ್ಗುಣಗಣಾಂಬೋಧಿ |
ಪ್ರತಿದಿವಸ ತನ್ನಂಘ್ರಿ ಸೇವಾ-
ರತ ಮಹಾತ್ಮರು ಮಾಡಿತಿಹ ಸಂ-
ಸ್ತುತಿಗೆ ವಶನಾಗುವನಿವನ ಕಾರುಣ್ಯಕೇನೆಂಬೆ || ೩ ||

ಮನವಚನಕತಿದೂರ ನೆನೆವರ-
ನನುಸರಿಸಿ ತಿರುಗುವನು ಜಾಹ್ನವಿ-
ಜನಕ ಜನರೊಳಗಿದ್ದು ಜನಿಸುವ ಜಗದುದರ ತಾನು |
ಘನ ಮಹಿಮ ಗಾಂಗೇಯನುತ ಗಾ-
ಯನವ ಕೇಳುತ ಗಗನ ಚರ ವಾಹನ-
ದಿವೌಕಸರೊಡನೆ ಚರಿಸುವ ಮನ ಮನೆಗಳಲ್ಲಿ || ೪ ||

ಮಲಗಿ ಪರಮಾದರದಿ ಪಾಡಲು-
ಕುಳಿತು ಕೇಳುವ ಕುಳಿತು ಪಾಡಲು-
ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ |
ಸುಲಭನೋ ಹರಿ ತನ್ನವರನರೆ-
ಘಳಿಗೆ ಬಿಟ್ಟಗಲನು ರಮಾಧವ |
ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ || ೫ ||

ಮನದೊಳಗೆ ತಾನಿದ್ದು ಮನವೆಂ-
ದೆನಿಸಿಕೊಂಬನು ಮನದ ವೃತ್ತಿಗ-
ಳನುಸರಿಸಿ ಭೋಗಗಳನೀವನು ತ್ರಿವಿಧ ಚೇತನಕೆ |
ಮನವನಿತ್ತರೆ ತನ್ನನೀವನು-
ತನುವ ದಂಡಿಸಿ ದಿನದಿನದಿ ಸಾ-
ಧನವ ಮಾಳ್ಪರಿಗಿತ್ತಪನು ಸ್ವರ್ಗಾದಿಭೋಗಗಳ || ೬ ||


ಪರಮ ಸತ್ಪುರುಷಾರ್ಥ ರೂಪನು-
ಹರಿಯೆ ಲೋಕಕೆ ಎಂದು ಪರಮಾ-
ದರದಿ ಸದುಪಾಸನೆಯ ಗೈವರಿಗಿತ್ತಪನು ತನ್ನ |
ಮರೆದು ಧರ್ಮಾರ್ಥಗಳ ಕಾಮಿಸು-
ವರಿಗೆ ನಗುತತಿ ಶೀಘ್ರದಿಂದಲಿ-
ಸುರಪತನಯ ಸುಯೋಧನಿರಿಗಿತ್ತಂತೆ ಕೊಡುತಿಪ್ಪ || ೭ ||

Play Time: 35 Minuts 03 Seconds

Size: 6.07 MB


Download Upanyasa Share to facebook View Comments
2231 Views

Comments

(You can only view comments here. If you want to write a comment please download the app.)
  • Jayashree karunakar,Bangalore

    1:56 PM , 17/05/2017

    Guruji vandanegalu 
    What  a beautiful message you  have  given for who want to engage in Spiritual path. Feeling  to listen again and again. Very  beautiful sir