Upanyasa - VNU064

ಗಣಪತಿಸಂಧಿ, ಪದ್ಯ 01

03/08/2016

ಪ್ರಥಮ ಪದ್ಯದ ವಿವರಣೆ

Play Time: 34 Minuts 29 Seconds

Size: 5.99 MB


Download Upanyasa Share to facebook View Comments
3276 Views

Comments

(You can only view comments here. If you want to write a comment please download the app.)
 • Dilip Gopalakrishna,San Diego

  6:12 AM , 10/04/2020

  ಶ್ರೀ ವಿಘ್ನೇಶ್ವರ ಸ್ತೋತ್ರ ಸಂಧಿಯನ್ನು ದಾಸರು ಇನ್ನಿತರ ತಾರತಮ್ಯ-ಸಂಬಂಧಿ ಸಂಧಿಗಳ (ಬೃಹತ್, ಆರೋಹಣ, ಅವರೋಹಣ, ಅನುಕ್ರಮಣಿಕಾ, ಅಣು, ದೈತ್ಯ) ನಡುವೆ 28ನೆಯದಾಗಿ ಇರಿಸಿದುದರ ಸ್ವಾರಸ್ಯವೇನು? ವಿಘ್ನನಿವಾರಕನ ಸ್ತೋತ್ರವನ್ನು ಮೊದಲನೆಯ ಸಂಧಿಯಲ್ಲೇ ಮಾಡಲಿಲ್ಲವೇಕೆ?

  Vishnudasa Nagendracharya

  ಶ್ರೀ ಜಗನ್ನಾಥದಾಸಾರ್ಯರು ಶ್ರೀಮದ್ ಹರಿಕಥಾಮೃತಸಾರವನ್ನು ರಚಿಸುವ ಸಂದರ್ಭದಲ್ಲಿ ಮಧ್ಯದಲ್ಲಿ ತುಂಬ ವಿಘ್ನ ಬಂದೊದಗುತ್ತದೆ. ಆಗ ಅವರಿಗೆ ಗಣಪತಿಯ ಸ್ತೋತ್ರ ಮಾಡುವಂತೆ ಸ್ವಪ್ನ ಸೂಚನೆಯಾಗುತ್ತದೆ. ಗಣಪತಿಸಂಧಿಯನ್ನು ರಚಿಸಿದ ನಂತರ ಗ್ರಂಥ ನಿರ್ವಿಘ್ನವಾಗಿ ಸಮಾಪ್ತವಾಗುತ್ತದೆ. 
  
  ಆರಂಭದಲ್ಲಿ ಮಂಗಲಾಚರಣೆ ಮಾಡಿಯೇ ಇದ್ದರು. ಅದರ ಫಲವಾಗಿಯೇ ಹರಿಕಥಾಮೃತಸಾರ ನಿರ್ವಿಘ್ನವಾಗಿ ಸಮಾಪ್ತವಾಯಿತು. ಆದರೆ, ಸತ್ಕರ್ಮಗಳಿಗೆ ವಿಘ್ನಗಳು ಅಧಿಕ. ಅದರಲ್ಲಿಯೂ ಕಲಿಯುಗದಲ್ಲಿ ಅತ್ಯಧಿಕ. ಆದ್ದರಿಂದ ಆ ರೀತಿಯಾದ ವಿಘ್ನಗಳು ಬಂದಾಗ ಈ ರೀತಿ ಸ್ತೋತ್ರ, ನಮಸ್ಕಾರಾದಿ ಸೇವೆಗಳಿಂದ ವಿಘ್ನಗಳನ್ನು ಪರಿಹರಿಸಿಕೊಳ್ಳಬೇಕು ಎನ್ನುವದನ್ನು ದಾಸಾರ್ಯರು ತೋರಿಸಿಕೊಟ್ಟಿದ್ದಾರೆ. 
 • Vikram Shenoy,Doha

  5:34 PM , 08/10/2019

  ಅತೀ ಕಡಿಮೆ ಜನರಿಗೆ ಈ ಶುದ್ಧ ಜ್ಞಾನದ ಪರಿಚಯ. ಕೋಟಿ ಕೋಟಿ ನಮನ ಆಚಾರ್ಯರಿಗೆ!
 • Venkatesh,Hubli

  6:52 PM , 16/09/2019

  Acharyarige anantha namaskaragalu...nimma upanyasa keluvudu namma anantha janmada punya..
 • Jayashree karunakar,Bangalore

  4:28 PM , 12/06/2017

  ಇಲ್ಲಿ ಅಹಂಕಾರ ಎಂದರೇನು ತತ್ವ ಎಂದರೇನು ಗುರುಗಳೆ

  Vishnudasa Nagendracharya

  ಸ್ಥೂಲವಾಗಿ ತಿಳಿಸುವದಾದರೆ ಬ್ರಹ್ಮಾಂಡದ ಉತ್ಪತ್ತಿಗೆ ಬೇಕಾದ ಮೂಲಪದಾರ್ಥಗಳನ್ನು ತತ್ವ ಎಂದು ಕರೆಯುತ್ತಾರೆ. ಕಚ್ಚಾವಸ್ತುಗಳು ಎಂದು ತಿಳಿಯಬಹುದು. 
  
  ಇವು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಯೋಗಿಗಳ ಕಣ್ಣಿಗೆ ಮಾತ್ರ ಕಾಣುವಂತಹ ಪದಾರ್ಥಗಳು. 
  
  ನಮ್ಮಲ್ಲಿ “ನಾನು” ಎಂಬ ಪ್ರಜ್ಞೆ ಯಾವ ವಸ್ತುವಿನಿಂದ ಮೂಡಿ ಬರುತ್ತದೆಯೋ ಆ ತತ್ವಕ್ಕೆ ಅಹಂಕಾರ ತತ್ವ ಎನ್ನುತ್ತಾರೆ. ಶ್ರೀ ರುದ್ರದೇವರು ಇದನ್ನು ನಿಯಮಿಸುವ ದೇವತೆ.