06/11/2016
Vijaya Kavacha 10 ಖೇದವಾಗದೊ ನಿಮಗೆ ಮೋದವಾಹುದೊ ಆದಿದೇವನ ಸುಪ್ರಸಾದವಾಹುದೊ || ೧೧ || ತಾಪ ತಡೆವನೊ ಬಂದ ಪಾಪ ಕಡಿವನೊ ಶ್ರೀಪತಿಯಪಾದ ಸಮೀಪವಿಡುವನೋ || ೧೨ || ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ ರಂಗನೊಲಿಯನೊ ಭಕ್ತಸಂಗದೊರೆಯದೇ || ೧೩ || ವೇದ ಓದಲು ಬರಿದೆ ವಾದಮಾಡಲು ಹಾದಿಯಾಗದೊ ಬುಧರ ಪಾದ ನಂಬದೆ || ೧೪ || ಲೆಕ್ಕವಿಲ್ಲದಾ ದೇಶ ತುಕ್ಕಿಬಂದರು ದುಃಖವಲ್ಲದೆ ಲೇಶ ಭಕುತಿ ದೊರೆಯದೊ || ೧೫ || ದಾನ ಮಾಡಲು ದಿವ್ಯಗಾನಪಾಡಲು ಜ್ಞಾನ ದೊರೆಯದೊ ಇವರ ಅಧೀನವಾಗದೆ || ೧೬ || ನಿಷ್ಠೆಯಾತಕೆ ಕಂಡ ಕಷ್ಟವ್ಯಾತಕೆ ದಿಟ್ಟಗುರುಗಳ ಪಾದ ಮುಟ್ಟಿಭಜಿಸಿರೊ || ೧೭ || ಪೂಜೆ ಮಾಡಲು ಕಂಡ ಗೋಜುಬೀಳಲು ಬೀಜಮಾತಿನ ಫಲಸಹಜ ದೊರೆಯದು || ೧೮ || ಇಷ್ಟು ಪದ್ಯಗಳ ಅರ್ಥಾನುಸಂಧಾನ ಇಲ್ಲಿದೆ.
Play Time: 27:07
Size: 4.68 MB