06/11/2016
ಸುರರು ಎಲ್ಲರು ಇವರ ಕರವ ಪಿಡಿವರೊ ತರಳರಂದದಿ ಹಿಂದೆ ತಿರುಗುತಿಪ್ಪರೊ || ೧೯ || ಗ್ರಹಗಳೆಲ್ಲವು ಇವರ್ಗೆ ಸಹಾಯ ಮಾಡುತ ಅಹೋರಾತ್ರಿಲಿ ಸುಖದ ನಿವಹ ಕೊಡುವವೊ || ೨೦ || ವ್ಯಾಧಿ ಬಾರದೊ ದೇಹ ಬಾಧೆ ತಟ್ಟದೊ ಆದಿದೇವನ ಸುಪ್ರಸಾದವಾಹುದೊ || ೨೧ || ಪತಿತಪಾಮರ ಮಂದಮತಿಯು ನಾ ಬಲು ತುತಿಸಲಾಪೆನೆ ಇವರ ಅತಿಶಯಂಗಳ || ೨೨ || ಕರುಣದಿಂದಲಿ ಎಮ್ಮ ಪೊರೆವನಲ್ಲದೆ ದುರಿತಕೋಟಿಯ ಬ್ಯಾಗ ತರಿವ ದಯದಲಿ || ೨೩ || ಮಂದಮತಿಗಳು ಇವರ ಚೆಂದವರಿಯದೆ ನಿಂದೆ ಮಾಡಲು ಭವದಬಂಧ ತಪ್ಪದೊ || ೨೪ || ಇಂದಿರಾಪತಿ ಇವರ ಮುಂದೆ ಕುಣಿವನೊ ಅಂದವಚನವ ನಿಜಕೆ ತಂದು ಕೊಡುವನೊ || ೨೫ || ಉದಯ ಕಾಲದಿ ಈ ಪದವ ಪಠಿಸಲು ಮದಡನಾದರು ಜ್ಞಾನ ಉದಯವಾಹುದೊ || ೨೬ || ಸಟೆ ಇದಲ್ಲವೋ ವ್ಯಾಸವಿಠಲ ಬಲ್ಲನೊ ಪಠಿಸಬಹುದಿದು ಕೇಳಿ ಕುಟಿಲರಹಿತರು || ೨೭ || ಇಷ್ಟು ಪದ್ಯಗಳ ಅರ್ಥಾನುಸಂಧಾನ ಇಲ್ಲಿದೆ.
Play Time: 35:47
Size: 6.17 MB