Upanyasa - VNU189

ಪ್ರಭಾತಪಂಚಕಮ್ 01/05

10/07/2016

ನಮಗೆ ನಾವು ಸುಪ್ರಭಾತವನ್ನು ಹೇಳಿಕೊಳ್ಳಬೇಕು ಎಂದು ಆದೇಶಿಸಿದವರು ಶ್ರೀ ವೇದವ್ಯಾಸದೇವರು. ಆ ಮಹಾಧರ್ಮವನ್ನು ಆಚರಿಸಿ ತೋರಿದವರು ರುದ್ರದೇವರು. ಈ ಸತ್ಸಂಪ್ರದಾಯವನ್ನರಿತ ನಮ್ಮ ಶ್ರೀಮದ್ ವ್ಯಾಸರಾಜಸಂಸ್ಥಾನದ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದರು ಇಡಿಯ ಮಾಧ್ವಪರಂಪರೆಯಲ್ಲಿಯೇ ಅತ್ಯಪೂರ್ವವಾದ ಒಂದು ಪ್ರಭಾತಪಂಚಕವನ್ನು ಬರೆದು ನೀಡಿದ್ದಾರೆ. ಅದ್ಭುತಾರ್ಥಗರ್ಭಿತವಾಗ ಆ ಸ್ತೋತ್ರದ ಮೊದಲ ಶ್ಲೋಕದ ಅನುವಾದ ಇಲ್ಲಿದೆ. ಪರಮಾತ್ಮನ ದಶಾವತಾರಗಳಲ್ಲಿ ನಾವು ಮಾಡಬೇಕಾದ ಪ್ರಾರ್ಥನೆಯ ಚಿಂತನೆಯೊಂದಿಗೆ. 

।। ಅಥ ಶ್ರೀ ಪ್ರಭಾತಪಂಚಕಸ್ತೋತ್ರಮ್ ।।

ಶ್ರೀಮತ್ಸ್ಯಕೂರ್ಮಾಖ್ಯವರಾಹದೇವಾಃ
ನೃಕೇಸರೀ ವಾಮನಜಾಮದಗ್ನ್ಯೌ ।
ಶ್ರೀರಾಮಕೃಷ್ಣಾವಪಿ ಬುದ್ಧಕಲ್ಕೀ
ಕುರ್ವಂತು ಸರ್ವೇ ಮಮ ಸುಪ್ರಭಾತಮ್ ।। 1 ।।

ಶ್ರೀರಂಗನಾಥೋ ವರಸುಂದರೇಶಃ
ಶ್ರೀಮುಷ್ಣಕೋಲೋ ವರದರ್ಷಭಶ್ಚ । 
ಶ್ರೀವೇಂಕಟೇಶೋ ವರಪೂರುಷೋsಸೌ
ಕುರ್ವಂತು ಸರ್ವೇ ಮಮ ಸುಪ್ರಭಾತಮ್ ।। 2 ।।

ಭಾಗೀರಥೀ ಪಾಪವಿನಾಶನಾಖ್ಯಾ
ಕಲಿಂದಕನ್ಯಾಪಿ ಸರಸ್ವತೀ ಚ ।  
ಕವೇರಕನ್ಯಾಪಿ ಸುತೀರ್ಥಸಂಘಃ 
ಕುರ್ವಂತು ಸರ್ವೇ ಮಮ ಸುಪ್ರಭಾತಮ್ ।। 3 ।।

ಶ್ರೀಕೃಷ್ಣ ನಾರಾಯಣ ವಾಸುದೇವ
ಗೋವಿಂದ ಗೋಪಾಲಕ ಮಾಧವೇತಿ I
ಸಂಕೀರ್ತನೋದ್ಭೂತಶುಭಪ್ರಸಂಗಂ
ಕುರ್ವಂತು ಸರ್ವೇ ಮಮ ಸುಪ್ರಭಾತಮ್ ।। 4 ।।

ಶ್ರೀಮಧ್ವಭಾಷ್ಯಾಣಿ ಜಯಾರ್ಯಟೀಕಾಃ
ಶ್ರೀವ್ಯಾಸತೀರ್ಥಾರ್ಯನಿಬಂಧನಾನಿ 
ಶ್ರೀರಾಮಚಂದ್ರಾರ್ಯಕೃತಪ್ರಬಂಧಾಃ 
ಕುರ್ವಂತು ಸರ್ವೇ ಮಮ ಸುಪ್ರಭಾತಮ್ ।। 5 ।।

ಇತಿ ಪ್ರಭಾತಪ್ರಂಚಕಂ 
ಪ್ರತಿಪ್ರಭಾತಮಾದರಾತ್ ।
ಶುಭಂ ಪಠಂತಿ ಯೇ ನರಾ 
ವ್ರಜತಿ ತೇ ಶುಭಾಂ ಗತಿಮ್ ।। 6 ।।

ರಾಮಚಂದ್ರಾರ್ಯಶಿಷ್ಯೇಣ
ಲಕ್ಷ್ಮೀವಲ್ಲಭಭಿಕ್ಷುಣಾ
ಪ್ರಭಾತಪಂಚಕಸ್ತೋತ್ರಂ
ಕೃತಂ ಮಂಗಲಕಾರಕಮ್ ।। 7 ।।

।। ಇತಿ ಶ್ರೀ ಪ್ರಭಾತಪಂಚಕಸ್ತೋತ್ರಮ್ ।।

Play Time: 44 Minuts 38 Seconds

Size: 7.69 MB


Download Upanyasa Share to facebook View Comments
3464 Views

Comments

(You can only view comments here. If you want to write a comment please download the app.)
 • Vishwanandini User,canberra

  5:23 AM , 25/12/2018

  Paramadbhuta pravachan I never heard like this before satakoti namaskaragalu.
 • Vijaya,Tirupati

  9:07 AM , 30/12/2017

  ಇದು ಚಿಕ್ಕದಾಗಿರುವ ಉತ್ತಮ ಸ್ತೋತ್ರ
 • Narasimhamurthy t v.,Shivamogga

  8:20 PM , 17/10/2017

  ಸುಂದರವಾದ ವರ್ಣನೆ.
 • Narasimhamurthy t v.,Shivamogga

  4:13 PM , 02/10/2017

  ಉತ್ತಮವಾಗಿದೆ.ಅರ್ಥವಿವರಣೆಇದ್ದರೆ ಚೆನ್ನ.

  Vishnudasa Nagendracharya

  ಇಲ್ಲಿರುವ Download button ಒತ್ತಿದರೆ ಅರ್ಥವಿವರಣೆಯ ಉಪನ್ಯಾಸ ದೊರೆಯುತ್ತದೆ. ಐದು ಉಪನ್ಯಾಸಗಳಲ್ಲಿ ಪ್ರಭಾತಪಂಚಕದ ವಿವರಣೆಯಿದೆ. 
 • Jayashree Karunakar,Bangalore

  2:02 PM , 28/06/2017

  ಗುರುಗಳೆ ಮೊದಲ ಶ್ಲೋಕದಲ್ಲಿ ಭಗವಂತನ ಪರಶುರಾಮಹೆಸರನ್ನು ನೇರವಾಗಿ ತಿಳಿಸದೆ ಜಮದಗ್ನ್ಯೌ ಅಂತ ತಿಳಿಸಿದ್ದು ಯಾಕೆ.

  Vishnudasa Nagendracharya

  ಶ್ರೀಮುಷ್ಣ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಚಿದಂಬರದಿಂದ 40 ಕಿಮೀ ದೂರದಲ್ಲಿದೆ. 
  
  ಶ್ರೀಮುಷ್ಣ ಕೋಲು ಅಲ್ಲ, ಶ್ರೀಮುಷ್ಣ ಅಷ್ಟೆ. 
  
  ಈ ರೀತಿಯ ಪ್ರಶ್ನೆಗಳಿಗೆ ಇಂಟರ್ನೆಟ್ಟಿನಲ್ಲಿಯೇ ಸುಲಭವಾಗಿ ಉತ್ತರ ದೊರೆಯುತ್ತದೆ.