ಗಣಪತಿಯ ಪೂಜೆಯನ್ನು ಮಾಡಬೇಕಾದರೆ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತ ಉಪನ್ಯಾಸ. ಗಣಪತಿಯ ಪೂಜಾಕ್ರಮದ ಕುರಿತ ಉಪನ್ಯಾಸ ಮುಂದಿನದು. ಅದನ್ನು ಕೇಳುವದಕ್ಕಿಂತ ಮಂಚೆ ಇದನ್ನು ಕೇಳಿ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಿ.
(You can only view comments here. If you want to write a comment please download the app.)
Nagappa Mukund Prabhu,Ankola
8:17 PM , 21/08/2020
ಆಚಾರ್ಯರೇ. ನಾವು ನಿತ್ಯ ಭಗವಂತನ ಪೂಜೆ ಮಾಡೋವಾಗ ಮೊದಲು ಗಣಪತಿಯ ಪೂಜೆ ಮಾಡಬೇಕಾ? ಅಥವಾ ಭಗವಂತನ ಪೂಜೆ ಮುಗಿದ ಮೇಲೆ ಗಣಪತಿಯ ಪೂಜೆ ಮಾಡಬೇಕಾ?
Vishnudasa Nagendracharya
ನಾವು ಯಾವುದೇ ಶುಭಕಾರ್ಯವನ್ನು ಆರಂಭಿಸುವಾಗಲೂ ಮೊದಲು ಗಣಪತಿಗೆ ಪೂಜೆಯಾಗಲೇಬೇಕು.
ನಿತ್ಯ ದೇವರ ಪೂಜೆಯಲ್ಲಿ ಗಣಪತಿಯ ಸ್ಮರಣೆ ಪ್ರಾರ್ಥನೆ ಮಾಡಿಯೇ ದೇವರ ಪೂಜೆ ಆರಂಭಿಸಬೇಕು.
ಬೇರೆ ಸಂದರ್ಭಗಳಲ್ಲಿ ಗಣಪತಿ ಪೂಜೆಗೂ, ನಿತ್ಯ ದೇವರ ಪೂಜೆಯಲ್ಲಿ ಗಣಪತಿಪೂಜೆಗೂ ವ್ಯತ್ಯಾಸವಿದೆ.
ಬೇರೆ ಸಂದರ್ಭಗಳಲ್ಲಿ ಗಣಪತಿಯ ಪೂಜೆಯಲ್ಲಿ ಗಣಪತಿಗೆ ಅರ್ಘ್ಯ ಪಾದ್ಯ ನೈವೇದ್ಯ ಎಲ್ಲವೂ ಉಂಟು.
ನಿತ್ಯ ದೇವರ ಪೂಜೆಯ ಮೊದಲು ಗಣಪತಿಯ ಪ್ರಾರ್ಥನೆ ಸ್ಮರಣೆಗಳೇ ಪೂಜೆ. ನೈವೇದ್ಯಾದಿಗಳಿಲ್ಲ.
ದೇವರಿಗೆ ಷೋಡಶೋಪಚಾರ ಪೂಜೆಯಾದ ಬಳಿಕ ಸಕಲ ದೇವತೆಗಳಿಗೂ ತಾರತಮ್ಯಾನುಸರವಾಗಿ ನೈವೇದ್ಯಾದಿಗಳನ್ನು ಮಾಡಬೇಕು.
ಸಕ್ಕರೆಯನ್ನು ಪಂಚಾಮೃತದಲ್ಲಿ ಬಳಸಬೇಕು ಎಂದು ಸ್ವಯಂ ಶ್ರೀಮಟ್ಟೀಕಾಕೃತ್ಪಾದರು ಪದ್ಯಮಾಲಾ ಗ್ರಂಥದಲ್ಲಿ ತಿಳಿಸಿದ್ದಾರೆ — ಪಯೋ ದಧಿ ಘೃತಂ ಕ್ಷೌದ್ರಂ ಶರ್ಕರಾ ಪಂಚಮಾಮೃತಮ್ ಎಂದು.
ಶರ್ಕರಾ ಎನ್ನುವ ಶಬ್ದಕ್ಕೆ ಪುಟ್ಟ ಪುಟ್ಟ ಕಲ್ಲುಗಳು ಎಂದರ್ಥ. ಕಬ್ಬಿನ ಹಾಲನ್ನು ಪುಟ್ಟಪುಟ್ಟ ಕಲ್ಲಿನ ಆಕಾರಕ್ಕೆ ತಲುಪಿಸಿದಾಗ ಅದನ್ನು ಶರ್ಕರಾ ಎನ್ನುತ್ತಾರೆ.
ಬಿಳಿಯ ಕಬ್ಬಿನ ಸಕ್ಕರೆ ಹಿತಕಾರಿ, ಕ್ಷಯಕ್ಕೆ ಮತ್ತು ಅಪಸ್ಮಾರಕ್ಕೆ ಔಷಧಿ, ಬಿದಿರುಕಬ್ಬಿನ ಸಕ್ಕರೆ ಸಿಹಿ ಕಡಿಮೆ, ಕರಿಕಬ್ಬಿನ ಸಕ್ಕರೆ ಶ್ರಮವನ್ನು ಕಡಿ ಮಾಡುತ್ತದೆ, ತೃಪ್ತಿ ನೀಡುತ್ತದೆ ಮತ್ತು ವೀರ್ಯವರ್ಧನೆ ಮಾಡುತ್ತದೆ, ಸ್ವಲ್ಪ ಶೀತಕಾರಿ, ಮತ್ತು ಕೆಂಪು ಕಬ್ಬಿನ ಸಕ್ಕರೆ ಪಿತ್ತವನ್ನು ಕಡಿಮೆ ಮಾಡುತ್ತದೆ, ಎಂದು ಆಯುರ್ವೇದದಲ್ಲಿ ತಿಳಿಸಿದ್ದಾರೆ.
ಹೀಗಾಗಿ ಸಕ್ಕರೆ ಎನ್ನುವದು ಪ್ರಾಚೀನ ಕಾಲದಿಂದ ಇರುವ ವಸ್ತು.
ಅವಶ್ಯವಾಗಿ ಪಂಚಾಮೃತದಲ್ಲಿ ಬಳಸಬೇಕು.
ಇವತ್ತಿನ ಕಾಲದಲ್ಲಿ ಎಲ್ಲ ವಸ್ತುಗಳ ನಿರ್ಮಾಣದಲ್ಲಿಯೂ ಮೋಸವಿದೆ. ಇವತ್ತು ಬಳಕೆಯಲ್ಲಿರುವ ಎಣ್ಣೆ ತುಪ್ಪಗಳು ದೇಹಕ್ಕೆ ಅತ್ಯಂತ ಅಪಾಯಕಾರಿ. ಶುದ್ಧಿಯಂತೂ ಇಲ್ಲವೇ ಇಲ್ಲ. ಪ್ರಾಚೀನ ಪದ್ದತಿಯಂತೆ ಸಕ್ಕರೆಯನ್ನು ನಿರ್ಮಾಣ ಮಾಡಿ ದೇವರಿಗೆ ಸಮರ್ಪಿಸಬೇಕು.
ರುದ್ರದೇವರಿಂದ ಆರಂಭಿಸಿ ಯಾವುದೇ ದೇವತೆಯ ನೈವೇದ್ಯವನ್ನು ಸ್ವೀಕರಿಸಬಾರದು.
ಗುರುಗಳ ಹಸ್ತೋದಕ ಬೇರೆ. ದೇವತೆಗಳ ನೈವೇದ್ಯ ಬೇರೆ. ಗುರುಗಳ ಹಸ್ತೋದಕ ತೇಜೋರೂಪದಲ್ಲಿರುವ ಗುರುಗಳ ಕಣ್ಣೋಟದಿಂದ ಪವಿತ್ರವಾಗಿರುತ್ತದೆ. ಅವರು ಅದನ್ನು ತಿಂದಿರುವದಿಲ್ಲ. ಹೀಗಾಗಿ ಸ್ವೀಕರಿಸಬೇಕು. ದೇವತೆಗಳಿಗೆ ಅರ್ಪಿಸಿದಾಗ ಆ ಪದಾರ್ಥವನ್ನು ಅವರು ಸ್ವೀಕರಿಸುತ್ತಾರೆ. ಅದಕ್ಕಾಗಿ ನಾವು ಉಣ್ಣಬಾರದು.
ಉದಾಹರಣೆಗೆ - ಇಂದ್ರದೇವರಿಗೆ ಮತ್ತು ಪ್ರಹ್ಲಾದರಾಜರಿಗೆ ಮಾಡಿದ ನೈವೇದ್ಯವನ್ನು ಸರ್ವಥಾ ಸ್ವೀಕರಿಸಬಾರದು. ಅದೇ ಇಂದ್ರದೇವರ ಅವತಾರರಾದ ಟೀಕಾಕೃತ್ಪಾದರಿಗೆ ಮತ್ತು ಪ್ರಹ್ಲಾದರಾಜರ ಅವತಾರರಾದ ಶ್ರೀ ಚಂದ್ರಿಕಾಚಾರ್ಯರು ಮತ್ತು ಶ್ರೀ ಮಂತ್ರಾಲಯಪ್ರಭುಗಳಿಗೆ ಸಮರ್ಪಿಸಿದ್ದನ್ನು ನಾವು ಉಣ್ಣಬೇಕು. ಕಾರಣ, ಶ್ರೀವ್ಯಾಸರಾಜರಾಗಿ ಮತ್ತು ಶ್ರೀ ರಾಘವೇಂದ್ರತೀರ್ಥರಾಗಿ ಅವರು ತೇಜೋರೂಪದಲ್ಲಿದ್ದು ನಾವು ನೀಡುವ ಪದಾರ್ಥವನ್ನು ತಮ್ಮ ದೃಷ್ಟಿಯಿಂದ ಪವಿತ್ರ ಗೊಳಿಸಿರುತ್ತಾರೆ. ಉಂಡು ಉಚ್ಚಿಷ್ಟವಾಗಿರುವದಿಲ್ಲ.
ಶ್ರೀ ವಿದ್ಯಾವಾರಿಧಿತೀರ್ಥರು ಈ ತತ್ವವನ್ನು ತಿಳಿಸಿದ್ದಾರೆ - ಅಭುಕ್ತತ್ವಾದನುಚ್ಛಿಷ್ಟಮ್, ಅರ್ಪಿತತ್ವಾನ್ನಿವೇದಿತಮ್. ಅವರು ಉಂಡಿಲ್ಲವಾದ್ದರಿಂದ ಉಚ್ಚಿಷ್ಟವಲ್ಲ, ಸಮರ್ಪಿತವಾಗಿದೆಯಾದ್ದರಿಂದ ನಿವೇದಿತ. ಹೀಗಾಗಿ ಅವಶ್ಯವಾಗಿ ಗುರುಗಳ ಹಸ್ತೋದಕವನ್ನು ಸ್ವೀಕರಿಸಬೇಕು.
H Sudheendra,Bangaluru
8:25 PM , 23/08/2017
ರಾಯರ ಹೊಸ್ತೋದಕ ತೆಗೆದುಕೊಳ್ಳುವು
H Sudheendra,Bangaluru
8:22 PM , 23/08/2017
ಆಚಾರ್ಯರಿಗೆ ನಮಸ್ಕಾರಗಳು
ಪರಶುಕ್ಲ ತ್ರಯರಯರನ್ನ ಬಿಟ್ಟು ಉಳಿದ ದೇವತೆಗಳ ನೆವಿದ್ಯ ತೆಗೆದುಕೊಳ್ಳ ಬಾರದೆoದು ತಿಳಿಸಿದ್ದೀರಿ. ಆದರೆ ಇತ್ತೀಚೆ ಗೆ