Upanyasa - VNU201

MV01 ತತ್ವಶಾಸ್ತ್ರದ ಇತಿಹಾಸ

27/09/2016

ಸಮಗ್ರ ಮಧ್ವವಿಜಯಕ್ಕೊಂದು ಉಪೋದ್ಘಾತ ರೂಪವಾದ ಉಪನ್ಯಾಸವಿದು. 

ಇದರಲ್ಲಿ ಸೃಷ್ಟಿಯ ಆರಂಭದಿಂದ ಶ್ರೀಮದಾಚಾರ್ಯರ ಕಾಲದವರೆಗೆ ತತ್ವಶಾಸ್ತ್ರ ಬೆಳೆದು ಬಂದ ಬಗೆಯನ್ನು — ತತ್ವಶಾಸ್ತ್ರದ ಇತಿಹಾಸವನ್ನು — ತಿಳಿಸಲಾಗಿದೆ. ವೇದ-ಭಾರತ-ಪುರಾಣಗಳು ದರ್ಶನಗಳು, ಶ್ರೀಮದಾಚಾರ್ಯರ ಸಿದ್ಧಾಂತ ಇವೆಲ್ಲದರ ಕುರಿತು ನೀವಿಲ್ಲಿ ಕೇಳುತ್ತೀರಿ.

ಶ್ರೀಮಧ್ವವಿಜಯಕ್ಕೆ ನಮ್ಮ ಮಾಧ್ವಪರಂಪರೆಯಲ್ಲಿ ಇರುವ ಮಹೋನ್ನತ ಸ್ಥಾನವನ್ನು ತಿಳಿಸಿ ಶ್ರೀ ಮಧ್ವವಿಜಯದ ಅಧ್ಯಯನ ನಿರ್ವಿಘ್ನವಾಗಿ ಸಾಗಿದರೆ ಮಾತ್ರ ಶ್ರೀಮಧ್ವಶಾಸ್ತ್ರದ ಅಧ್ಯಯನ ನಿರ್ವಿಘ್ನವಾಗಿ ನಡೆಯಲು ಸಾಧ್ಯ, ಆಚಾರ್ಯರ ಅನುಗ್ರಹವನ್ನು ಪಡೆಯಲು ಸಾಧ್ಯ ಎನ್ನು ವ ತತ್ವವನ್ನು ಶ್ರೀರಾಘವೇಂದ್ರಸ್ವಾಮಿಗಳ ಚರಿತ್ರೆಯಿಂದ ಪ್ರತಿಪಾದಿಸಲಾಗಿದೆ. ರಾಯರ ಮೇಲೆ ಮಧ್ವವಿಜಯ ಮಾಡಿರುವ ಮಹತ್ತರ ಅನುಗ್ರಹವನ್ನು ನಾವು ತಿಳಿದಾಗ ಅದರ ಕುರಿತು ಇರುವ ಗೌರವ ನೂರ್ಮಡಿಯಾಗುವದರಲ್ಲಿ ಸಂಶಯವಿಲ್ಲ.

ಶ್ರೀಮಧ್ವವಿಜಯ ಮೋಕ್ಷಪ್ರದವಾದ ಗ್ರಂಥ ಎನ್ನುವದನ್ನು ಶ್ರೀನಾರಾಯಣಪಂಡಿತಾಚಾರ್ಯರ ವಚನದಿಂದಲೇ ಸಮರ್ಥಿಸಿ, ಇದರ ಶ್ರವಣದಿಂದ ಸಕಲ ಆಪತ್ತುಗಳೂ ಪರಿಹಾರವಾಗುತ್ತವೆ, ಸಕಲ ಅಭೀಷ್ಟಗಳೂ ಪೂರ್ಣವಾಗುತ್ತವೆ ಎನ್ನುವ ತತ್ವವನ್ನು ನಮ್ಮ ಪ್ರಾಚೀನ ಗುರುಪರಂಪರೆಯ ವಚನಗಳನ್ನೇ ನೀಡಿ ತಿಳಿಸಲಾಗಿದೆ.
ಆ ನಂತರ ಗ್ರಂಥಕರ್ತೃಗಳಾದ ಶ್ರೀ ನಾರಾಯಣಪಂಡಿತಾಚಾರ್ಯರನ್ನು ಹೇಗೆ ಸ್ತೋತ್ರ ಮಾಡಬೇಕು, ಏನು ಪ್ರಾರ್ಥನೆ ಮಾಡಬೇಕು, ಮತ್ತು ಶ್ರೀ ಮಧ್ವವಿಜಯವನ್ನು ಶ್ರವಣಮಾಡುವ ಬಗೆ ಹೇಗೆ ಎನ್ನುವದನ್ನು ಈ ಉಪನ್ಯಾಸದಲ್ಲಿ ವಿಸ್ತೃತವಾಗಿ ತಿಳಿಸಿಹೇಳಲಾಗಿದೆ.

Play Time: 1:11:31

Size: 12.48 MB


Download Upanyasa Share to facebook View Comments
10015 Views

Comments

(You can only view comments here. If you want to write a comment please download the app.)
 • Jyothi Gayathri,Harihar

  7:21 AM , 16/02/2021

  ಶ್ರೀ ಗುರುಭ್ಯೋ ನಮಃ 🙏🙏🙏🙏🙏
 • Saritha,MANGALORE

  8:00 PM , 12/12/2020

  Gurugalige koti pranamagalu adbutha pravachana Madwavijaya hesaru matra kelidde  e mokshpradavada grantha dha bagge adbuthavagi vivarisiddiri dhanyavadagalu
 • Kengal venkatesha achar,Sindhanur

  8:12 PM , 17/07/2020

  ಮಾನವನಾಗಿ ಹುಟ್ಟಿದ ಮೇಲೆ ಮನುಷ್ಯ ಭಗವಂತನ ಚಿಂತನೆ ಮಾಡಬೇಕು ಎಂದು ತಿಳಿಸಿಕೊಟ್ಟ ಗುರುಗಳಿಗೆ ನಮಸ್ಕಾರಗಳು
 • Vishwnath MJoshi,Bengaluru

  6:25 AM , 06/10/2019

  I am listening this madhwavijaya for the second time.
 • ಸುದರ್ಶನ ಶ್ರೀ. ಲ.,ಬೆಂಗಳೂರು

  6:34 AM , 30/05/2018

  ಗುರುಗಳೆ🙏
  ಶ್ರೀ ಮಧ್ವವಿಜಯದ ಶ್ರವಣೋತ್ಸವ ನಿರ್ವಿಘ್ನವಾಗಿ ಸಾಗಲಿ ಎಂದು ಅನುಗ್ರಹಿಸಿ 🙏🙏🙏😊
 • R hanumantha rao,Bangalore

  7:32 PM , 14/11/2017

  Namaskra Sri gurugalege
  Dayamadi pata help kodi
 • R sharada,Davanagere

  10:36 PM, 07/11/2017

  Nimege anantha koti pranamgalu gurugale bhala channgi arthavaguva hage heillddere tumba hrudayadinda dhannyavadagalu nimege
 • PRASANNA KUMAR N S,Bangalore

  4:03 PM , 02/11/2017

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು,
  
  ಸಂಸ್ಕೃತದ ಗಂಧವೇ ಇಲ್ಲದ ನಮಗೆ ಅತ್ಯಂತ 
  
  ರುಚಿಯ ಹಣ್ಣುಗಳ ರಸಗಳನ್ನು ಹಿಂಡಿ ಹಿಂಡಿ 
  
  ಉಣಬಡಿಸತ್ತಿರುವ ನಿಮ್ಮ ಔದಾರ್ಯಕ್ಕೆ 
  
  ಚಿರರುಣಿಗಳಾಗಿದ್ದೇವೆ.
  
  ನಿಮ್ಮ ಒಂದೊಂದು ಉಪನ್ಯಾಸವೂ ಎದೆ 
  
  ತುಂಬಿ ಆನಂದ ಬಾಷ್ಪ ಬರಿಸುತ್ತೆ.
  
  ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ.

  Vishnudasa Nagendracharya

  ದೇವರು ಗುರುಗಳು ಪರಮಾನುಗ್ರಹ ಮಾಡಿ ಮಾಡಿಸುತ್ತಿರುವ ಕಾರ್ಯ. 
 • PRASANNA KUMAR N S,Bangalore

  9:28 AM , 03/11/2017

  *ಉಣಬಡಿಸುತ್ತಿರುವ
 • PRASANNA KUMAR N S,Bangalore

  4:02 PM , 02/11/2017

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು,
  
  ಸಂಸ್ಕೃತದ ಗಂಧವೇ ಇಲ್ಲದ ನಮಗೆ ಅತ್ಯಂತ 
  
  ರುಚಿಯ ಹಣ್ಣುಗಳ ರಸಗಳನ್ನು ಹಿಂಡಿ ಹಿಂಡಿ 
  
  ಉಣಬಡಿಸತ್ತಿರುವ ನಿಮ್ಮ ಔದಾರ್ಯಕ್ಕೆ 
  
  ಚಿರರುಣಿಗಳಾಗಿದ್ದೇವೆ.
  
  ನಿಮ್ಮ ಒಂದೊಂದು ಉಪನ್ಯಾಸವೂ ಎದೆ 
  
  ತುಂಬಿ ಆನಂದ ಬಾಷ್ಪ ಬರಿಸುತ್ತೆ.
  
  ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ.
 • Shantha.raghothamachar,Bangalore

  4:06 PM , 07/09/2017

  ನುಗ್ರಹಿಸಿ ಆಸೀರ್ವದಿಸಿ ನಮಸ್ಕಾರ ಗಳು.

  Vishnudasa Nagendracharya

   ಶ್ರೀಮನ್ನಾರಾಯಣಪಂಡಿತಾಚಾರ್ಯರು ಸಮಸ್ತ ಗುರುಗಳು,  ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಮತ್ತು ಶ್ರೀಮದುಡುಪಿಯ ಶ್ರೀಕೃಷ್ಣ ಪರಮಾನುಗ್ರಹ ಮಾಡಿ ನಿಮ್ಮಿಂದ ಶ್ರವಣ ಮಾಡಿಸಲೆಂದು ಅವರಲ್ಲಿ ಪ್ರಾರ್ಥಿಸುತ್ತೇನೆ. 
 • Shantha.raghothamachar,Bangalore

  4:04 PM , 07/09/2017

  ಸಮಗ್ರ ಮಧ್ವವಿಜಯದ ಶ್ರವಣ ನಿರ್ವಿಘ್ನವಾಗಿ ಆಗಲೆಂದು ಅ