27/09/2016
ಈ ಉಪನ್ಯಾಸದಲ್ಲಿ ನೀವು ಕೇಳುವ ವಿಷಯಗಳು 1. ಸಮಗ್ರ ಶ್ರೀ ಮಧ್ವವಿಜಯದ ಸಾರಾಂಶ ಹದಿನಾರುಸರ್ಗದ ಪಕ್ಷಿನೋಟ ಇಲ್ಲಿದೆ. ಮಧ್ವವಿಜಯದ ಅಗಾಧತೆಯ ಪರಿಚಯ ನಿಮಗಾಗುತ್ತದೆ. 2. ಮಧ್ವವಿಜಯದ ಪ್ರಾಮಾಣಿಕತೆ ನಾರಾಯಣಪಂಡಿತಾಚಾರ್ಯರು ಯಾವ ನಿಯಮಗಳನ್ನಿಟ್ಟು ಶ್ರೀ ಮಧ್ವವಿಜಯವನ್ನು ರಚಿಸಿದ್ದಾರೆ, ಮತ್ತು ಮಧ್ವವಿಜಯದ ಘಟನೆಗಳ ಪ್ರಾಮಾಣಿಕತೆಯ ಕುರಿತು ಅವರು ತಮ್ಮ ಭಾವಪ್ರಕಾಶಿಕೆಯಲ್ಲಿ ತಿಳಿಸಿರುವ ಮಹತ್ತ್ವದ ವಿಷಯವನ್ನು — ಪ್ರತಿಯೊಬ್ಬ ಇತಿಹಾಸಕಾರನೂ ತಿಳಿಯಬೇಕಾದ ವಿಷಯವನ್ನು — ಇಲ್ಲಿ ಸವಿಸ್ತರವಾಗಿ ಕೇಳುತ್ತಿರಿ. ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಅದೆಂತಹ ಅದ್ಭುತ ಇತಿಹಾಸ ಪ್ರಜ್ಞೆಯನ್ನು ತಮ್ಮ ಶಿಷ್ಯರಲ್ಲಿ ಮೂಡಿಸಿದ್ದರು ಎಂದು ತಿಳಿದಾಗ ನಮಗೆ ಆಶ್ಚರ್ಯವಾಗದೇ ಇರುವದಿಲ್ಲ. ಮೊದಲನೆಯ ಸರ್ಗದಲ್ಲಿ ಎಷ್ಟು ಶ್ಲೋಕಗಳಿವೆ, ಆ ಶ್ಲೋಕಗಳಲ್ಲಿರುವ ವಿಷಯಗಳೇನು ಎನ್ನುವದರ ಪಕ್ಷಿನೋಟ ನಿಮಗಿಲ್ಲಿ ಸಿಗುತ್ತದೆ. ಶ್ರೀ ಮಧ್ವವಿಜಯದ ಮಾಹಾತ್ಮ್ಯ ಶ್ರವಣ ಅಷ್ಟು ಸುಲಭವಾಗಿ ದೊರೆಯುವದಲ್ಲ. ದೇವರು ಗುರುಗಳನ್ನು ಪ್ರಾರ್ಥಿಸಿ ಇದನ್ನು ಶ್ರವಣ ಮಾಡಿ. ನಿಮಗೆ ಪರಿಚಯವಿರುವ ಪ್ರತಿಯೊಬ್ಬ ಸಜ್ಜನನಿಗೂ ಇದನ್ನು ಕೇಳಿಸಿ. — ವಿಷ್ಣುದಾಸ ನಾಗೇಂದ್ರಾಚಾರ್ಯ
Play Time: 38:17
Size: 6.83 MB