Upanyasa - VNU203

MV03 ಗುರುದೇವತಾವಂದನೆ

28/09/2016

ಶ್ರೀಮಧ್ವವಿಜಯದ ಮೂರನೆಯ ಉಪನ್ಯಾಸ 

ಶ್ರೀಮದಾಚಾರ್ಯರ ರಮಣೀಯತೆ

ಶ್ರೀ ನಾರಾಯಣಪಂಡಿತಾಚಾರ್ಯರು ಶ್ರೀ ಮಧ್ವವಿಜಯಗ್ರಂಥವನ್ನು ಆರಂಭಿಸಿರುವದು ಕಾಂತಾಯ ಎಂಬ ಶಬ್ದದಿಂದ. ಪಂಡಿತಾಚಾರ್ಯರು ಅದೇ ಶಬ್ದವನ್ನು ಬಳಸಲು ಕಾರಣ ಮತ್ತು ಆ ಶಬ್ದದಿಂದ ಅವರು ತಿಳಿಸಿರುವ ಅಪೂರ್ವ ಪ್ರಮೇಯವನ್ನು ಇಲ್ಲಿ ಕೇಳುತ್ತೀರಿ.

ಮಂಗಳಾಚಾರಣೆ

ಶ್ರೀ ಮಧ್ವವಿಜಯದ ಸೊಬಗಿರುವದು ಅದರ ಶ್ಲೇಷದಲ್ಲಿ. ಒಂದೇ ಶಬ್ದದಿಂದ ಎರಡು ಮೂರು ಅರ್ಥಗಳನ್ನು ಹೊರಡಿಸುವ ಶ್ರೀ ನಾರಾಯಣಪಂಡಿತಾಚಾರ್ಯರ ಕೌಶಲ ಅಸದೃಶವಾದದ್ದು. ಪರಮಾತ್ಮನಿಗೆ ವಂದಿಸಿ ಪರಮಾತ್ಮನ ಶ್ರೀಕೃಷ್ಣ ಮತ್ತು ಶ್ರೀ ವೇದವ್ಯಾಸ ರೂಪಗಳನ್ನು ಅವರು ವಂದಿಸಿರುವ ಶ್ಲೋಕಗಳ ವಿವರಣೆ ಇಲ್ಲಿದೆ.
ಮಧ್ವವಿಜಯ ಶ್ರೀಮದಾಚಾರ್ಯರ ಕೀರ್ತಿಯನ್ನು ಕೀರ್ತನ ಮಾಡಲಿಕ್ಕೆ ಹೊರಟ ಗ್ರಂಥ. ಪಂಡಿತಾಚಾರ್ಯರು ಆರಂಭದಲ್ಲಿಯೇ ಶ್ರೀಮದಾಚಾರ್ಯರ ಕೀರ್ತಿಯ ಸರ್ವಶ್ರೇಷ್ಠತೆಯನ್ನು ನಮಗೆ ಮನಗಾಣಿಸುತ್ತಾರೆ, 
ಆಚಾರ್ಯರಂತೆ ಆಚಾರ್ಯರ ಕೀರ್ತಿಯೂ ಪರಮಾದ್ಭುತವಾದದ್ದು ಎನ್ನುವದನ್ನು ದಿವ್ಯವಾಗಿ ನಿರೂಪಿಸಿದ್ದಾರೆ. ಅದರ ವಿವರಣೆಯನ್ನೂ ಈ ಉಪನ್ಯಾಸದಲ್ಲಿ ಕೇಳು್ತತೀರಿ.

ಶ್ರೀ ನಾರಾಯಣಪಂಡಿತಾಚಾರ್ಯರಿಗೆ ತತ್ವೋಪದೇಶ ಮಾಡಿದ ಗುರುಗಳು ಅವರ ತಂದೆ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು. ಪಂಡಿತಾಚಾರ್ಯುರು ಅತ್ಯಂತ ಭಕ್ತಿಯಿಂದ ತಮ್ಮ ಗುರುಗಳಿಗೆ ನಮಸ್ಕರಿಸುತ್ತಾರೆ. ಶ್ರೀ ತ್ರಿವಿಕ್ರಮಪಂಡಿತಾಚಾರ್ಯರಿಗೆ ಮಾಧ್ವಪರಂಪರೆಯಲ್ಲಿ ಇರುವ ಮಹೋನ್ನತಸ್ಥಾನದ ಚಿಂತನೆಯೊಂದಿಗೆ ಪಂಡಿತಾಚಾರ್ಯರ ಶ್ಲೋಕದ ಅನುವಾದ ಇಲ್ಲಿದೆ.

ಆ ನಂತರ ಶ್ರೀ ಮಧ್ವವಿಜಯದ ವಿಷಯ, ಅದರಿಂದುಂಟಾಗುವ ಫಲಗಳ ಕುರಿತು ಶ್ರೀ ನಾರಾಯಣ ಪಂಡಿತಾಚಾರ್ಯರು ಮಾತನಾಡುತ್ತಾರೆ. ಆಚಾರ್ಯರ ಚರಿತ್ರೆಯ ಅಗಾಧತೆಯನ್ನು ನಮಗೆ ಅದ್ಭುತವಾದ ಕ್ರಮದಲ್ಲಿ ಮನದಟ್ಟು ಮಾಡಿಸುತ್ತಾರೆ. ಮೈ ಪುಳಕಗೊಳ್ಳುವ ಅವರ ದಿವ್ಯವಾಣಿಗಳ ಅನುವಾದ ಇಲ್ಲಿದೆ.
ಹೀಗೆ ಶ್ರೀಮಧ್ವವಿಜಯದ ಮೊದಲನೆಯ ಸರ್ಗದ ಮೊದಲ ಎಂಟು ಶ್ಲೋಕಗಳ ಅನುವಾದವನ್ನು ನಿನ್ನೆಯ ಮತ್ತು ಇಂದಿನ ಉಪನ್ಯಾಸದಲ್ಲಿ ಕೇಳಿರುತ್ತೀರಿ.

ಮುಂದಿನ ಉಪನ್ಯಾಸದಲ್ಲಿ ಸಮಗ್ರ ಶ್ರೀ ಹನುಮದವತಾರದ ಕಥೆಯನ್ನು ಶ್ರೀ ನಾರಾಯಣಪಂಡಿತಾಚಾರ್ಯರು ತಮ್ಮ ಅದ್ಭುತ ಕೌಶಲದಿಂದ ಸಂಗ್ರಹ ಮಾಡಿರುವದನ್ನು ಕೇಳುತ್ತೀರಿ.

ಶ್ರೀಮದಾಚಾರ್ಯರ ಚರಿತ್ರೆಯನ್ನು ನಂತರ ಕೇಳೋಣ, ನಾಳೆ ಕೇಳೋಣ ಎಂದು ಮುಂದೂಡಬೇಡಿ. ನಮ್ಮ ಬದುಕನ್ನೇ ಬದಲಿಸುವ, ನಮ್ಮ ಬದುಕಿನ ಬವಣೆಗಳನ್ನು ಕಳೆಯುವ, ನಮ್ಮ ಬದುಕಿಗೆ ಸಾರ್ಥಕತೆಯನ್ನು ನೀಡುವ ದಿವ್ಯ ಚರಿತ್ರೆ ನಮ್ಮ ಶ್ರೀಮದಾಚಾರ್ಯರ ಚರಿತ್ರೆ. ತಪ್ಪದೇ ಕೇಳಿ. ನಿಮ್ಮ ಎಲ್ಲ ಬಾಂಧವರಿಗೂ ಇದನ್ನು ಕೇಳಿಸಿ.

— ವಿಷ್ಣುದಾಸ ನಾಗೇಂದ್ರಾಚಾರ್ಯ

Play Time: 53:26

Size: 9.32 MB


Download Upanyasa Share to facebook View Comments
4697 Views

Comments

(You can only view comments here. If you want to write a comment please download the app.)
 • subramanya v bhat,mandya

  7:54 PM , 25/04/2020

  ಗುರುಗಳಿಗೆ ನಮಸ್ಕಾರ ದಯಮಾಡಿ ಮಂಗಲಾಚರಣೆಯ ಶ್ಲೋಕವನ್ನು ಹಾಕಿ ಗುರುಗಳೇ
 • Krishnamurthy Kulkarni,Bangalore

  12:14 PM, 19/04/2020

  ಆಚಾರ್ಯರಿಗೆ ನಮಸ್ಕಾರಗಳು, 
  
  ಬಹುಶಃ ಅಂದು ಶ್ರೀನಾರಾಯಣಪಂಡಿತಾಚಾರ್ಯರು ಸುಮಧ್ವ ವಿಜಯ ಗ್ರಂಥವನ್ನು ರಚಿಸದೇ ಹೋಗಿರದಿದ್ದರೆ , ಇಂದು ನಾವು ಜನಸಾಮಾನ್ಯರು ಅಲ್ಪಬುದ್ಧಿಯವರು ಶ್ರೀಮದಾಚಾರ್ಯರ ಹಿರಿಮೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ!!!! 
  
  ಬಹುಶಃ ಸಮುಧ್ವವಿಜಯ ಕಾವ್ಯವನ್ನು ತಕ್ಕಡಿಯ ಒಂದು ಬದಿಯಲ್ಲಿಟ್ಟು ಉಳಿದ ಎಲ್ಲ ಗ್ರಂಥಗಳನ್ನು ಇನ್ನೊಂದು ಬದಿಯಲ್ಲಿಟ್ಟರೆ ಸುಮಧ್ವವಿಜಯದ ವಿಜಯೋತ್ಸವದ್ದೇ ತೂಕ‌ ಹೆಚ್ಚಾಗ್ತದೆ. 
  
  ಮಾಧ್ವಜನ್ಮ ಅತ್ಯಂತ ಶ್ರೇಷ್ಠವಾದ ಜನ್ಮ. ಅದರಲ್ಲೂ ಸುಮಧ್ವವಿಜಯ ಪಾರಾಯಣ ಮಾಡಲು ಅತಿ ಶ್ರೇಷ್ಠವಾದ ಜನ್ಮ ಎತ್ತಿ ಬರಬೇಕು. ಇದು ನಮ್ಮ ಅಹೋಭಾಗ್ಯ.
 • Shantha.raghothamachar,Bangalore

  8:56 PM , 07/09/2017

  ನಮಸ್ಕಾರ ಗಳು. ಶ್ಲೇಷಾ ಅಂದರೆ ಶ್ಲೇಷಾ ಲಂಕಾರ ಅಲ್ವಾ? ಅಚ್ಚುತಪ್ರೇಕ್ಷರ ಬಗ್ಗೆ ತಿಳಿಯುವ ಅಪೇಕ್ಷೆ ಯಿದೆ ಆಚಾರ್ಯರೆ.