02/10/2016
ವಾಸುದೇವನ ಲೀಲೆಗಳನ್ನು ಕಂಡು ಸಜ್ಜನರ ಮನಸ್ಸಿನಲ್ಲುಂಟಾಗುತ್ತಿದ್ದ ಸಂತೋಷ, ಆಚಾರ್ಯರು ಇನ್ನೂ ವ್ಯಕ್ತವಾಗಿ ಪ್ರಕಟವಾಗದಿದ್ದರೂ ಅವರ ಇರವೇ ಭೂಮಿಯ ಸಕಲ ಸಜ್ಜನರಿಗೆ ಸಂತೋಷ ನೀಡುತ್ತಿತ್ತು ಎಂಬ ಮಾತನ್ನು ಕೇಳುತ್ತೇವೆ. ವಾಸುದೇವ ಸಣ್ಣವಯಸ್ಸಿದ್ದಾಗ ಬಹಳ ಹೊತ್ತು ಕಾಲ ಕಳೆಯುತ್ತಿದ್ದದ್ದು ಕುಂಜಾರುಗಿರಿಯಲ್ಲಿ. ಸಾಕ್ಷಾತ್ ದುರ್ಗಾದೇವಿಯೇ ತನ್ನ ಪ್ರೇಮದ ಪುತ್ರನ ಜೊತೆ ಆಟವಾಡುತ್ತಿದ್ದ ಅಪೂರ್ವಪ್ರಸಂಗದ ವಿವರಣೆ ಇಲ್ಲಿದೆ. ಭಾರತೀದೇವಿಯ ಒಡೆಯನಿಗೆ ತಂದೆ ಅಕ್ಷರಾಭ್ಯಾಸ ಮಾಡಿಸಿದ್ದು, ಆ ಅಕ್ಷರಾಭ್ಯಾಸದ ಪ್ರಸಂಗದಲ್ಲಿ ವಾಸುದೇವ ತಂದೆಗೆ ಉಂಟುಮಾಡಿದ ವಿಸ್ಮಯವನ್ನು ಇಲ್ಲಿ ಕೇಳುತ್ತೇವೆ. ಮಕ್ಕಳು ಒಂದಷ್ಟು ಪ್ರತಿಭೆ ತೋರಿದ ತಕ್ಷಣ ಅವರನ್ನು ಪ್ರಸಿದ್ಧಿ ಮಾಡಲಿಕ್ಕೆ ಹೊರಡುವ ತಂದೆತಾಯಿಗಳು ಇಲ್ಲಿ ಕಲಿಯಬೇಕಾದ ಪಾಠ ಬಹಳಷ್ಟಿದೆ. ಮಕ್ಕಳನ್ನು ಬೆಳೆಸುವ ಕ್ರಮದ ಕುರಿತು, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪೋಷಿಸಬೇಕಾದ ಕಲೆಯ ಕುರಿತು ಇಲ್ಲಿ ಚಿಂತನೆಯಿದೆ. ಸಣ್ಣ ವಯಸ್ಸಿನಲ್ಲಿಯೇ ನಡೆದ ಮೊಟ್ಟ ಮೊದಲ ದಿಗ್ವಿಜಯದ ಕುರಿತು ನಾವಿಲ್ಲಿ ಕೇಳುತ್ತೇವೆ. ಶ್ರೀಮದ್ ಭಾಗವತಕ್ಕೆ ಒಬ್ಬ ವ್ಯಕ್ತಿ ಅಪದ್ಧವಾಗಿ ಅರ್ಥ ಹೇಳುತ್ತಿದ್ದಾಗ, ಸಣ್ಣ ವಯಸ್ಸಿನ ವಾಸುದೇವ ಎದ್ದುನಿಂತು ಅದನ್ನು ಖಂಡಿಸಿ ಪರಿಶುದ್ಧ ಅರ್ಥವನ್ನು ಹೇಳಿದ ಅಪೂರ್ವ ಘಟನೆಯನ್ನು ನಾವಿಲ್ಲಿ ಕೇಳುತ್ತೇವೆ. ಶ್ರೀ ಮಧ್ಯಗೇಹಾರ್ಯರು ಉಪನ್ಯಾಸ ಮಾಡುವಾಗ ಲಿಕುಚ ಎಂಬ ಶಬ್ದದ ಅರ್ಥವನ್ನು ಹೇಳಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದ ಘಟನೆಯನ್ನು ಕೇಳುವದರೊಂದಿಗೆ ಈ ಉಪನ್ಯಾಸ ಮುಕ್ತಾಯವಾಗುತ್ತದೆ.
Play Time: 61:04
Size: 11.14 MB