Upanyasa - VNU220

MV20 ವಾಸುದೇವನ ಆಲೋಚನೆ

02/10/2016

ಗುರುಕುಲದಿಂದ ವಾಸುದೇವ ಹಿಂತಿರುಗುವಾಗ ಎಲ್ಲ ದೇವತೆಗಳು ಅವತಾರಕಾರ್ಯವನ್ನು ಆರಂಭಿಸುವಂತೆ ವಾಸುದೇವನನ್ನು ಪ್ರಾರ್ಥಿಸುತ್ತಾರೆ. ಅವರಿಗೆ ಅಭಯವಿತ್ತ ವಾಸುದೇವ ಮನೆಗೆ ಹಿಂತಿರುಗಿ ಮುಂದೇನು ಮಾಡಬೇಕು ಎನ್ನುವದನ್ನು ಆಲೋಚಿಸುತ್ತಾನೆ. 

ನಾಲ್ಕನೆಯ ಸರ್ಗದ ಪೂರ್ಣ 54  ಶ್ಲೋಕಗಳಲ್ಲಿ ಬಂದಿರುವ ಎಲ್ಲ ವಿಷಯಗಳನ್ನು ಸಂಗ್ರಹ ಮಾಡಿ ತಿಳಿಸುವದರೊಂದಿಗೆ ಆರಂಭವಾಗುವ ಈ ಉಪನ್ಯಾಸದಲ್ಲಿ ವಾಸುದೇವನ ಆಲೋಚನಾವೈಖರಿಯ ಬಗ್ಗೆ ವಿಶದವಾಗಿ ಕೇಳುತ್ತೇವೆ. 

ನಾವು ಯಾವುದೇ ಕಾರ್ಯವನ್ನು ಮಾಡುವಾಗ ಹೇಗೆ ಆಲೋಚನೆ ಮಾಡಬೇಕು, ನಮ್ಮ ಆಲೋಚನೆಯ ಧಾಟಿ ಹೇಗಿರಬೇಕು ಎಂದೆಲ್ಲ ನಾವು ಈ ಸಂದರ್ಭದಲ್ಲಿ ಕಲಿಯುತ್ತೇವೆ. ನಾವು ನಮ್ಮ ಜೀವನದಲ್ಲಿ ಅತೀ ದೊಡ್ಡ ನಿರ್ಣಯಗಳನ್ನು ಕೈಗೊಳ್ಳಲೇ ಬೇಕಾಗುತ್ತಿರುತ್ತದೆ. ಆ ಸಂದರ್ಭಗಳಿಗೆ ನಾಲ್ಕನೆಯ ಸರ್ಗದ ಶ್ರೀ ನಾರಾಯಣಪಂಡಿತಾಚಾರ್ಯರ ಈ ವಚನಗಳು ವರದಾನ. ನೀವು ಯಾವುದೇ ಮಹತ್ತ್ವದ ನಿರ್ಣಯ ಕೈಗೊಳ್ಳುವ ಮುನ್ನ  ಈ “ವಾಸುದೇವನ ಆಲೋಚನೆ” ಎಂಬ ಉಪನ್ಯಾಸವನ್ನು ಆಲಿಸಿ. ಸಮಾಧಾನಚಿತ್ತದಿಂದ ಆಲೋಚನೆ ಮಾಡುವ ಶಕ್ತಿ ನಿಮಗೊದಗುತ್ತದೆ. ತೆಗೆದುಕೊಂಡ ನಿರ್ಣಯಗಳಿಂದ ನಮಗೆ ಎಂದಿಗೂ ಪಶ್ಚಾತ್ತಾಪ ಪರಿತಾಪಗಳುಂಟಾಗುವದಿಲ್ಲ. 

Play Time: 47:41

Size: 8.37 MB


Download Upanyasa Share to facebook View Comments
4068 Views

Comments

(You can only view comments here. If you want to write a comment please download the app.)
  • Vishwanandini User,Bangalore

    7:13 PM , 11/12/2018

    Gurugala karunyakke ananta vandanegalu.Anargha stotra ratnagalannu namma kivige beeluvante maduttiriviri.Karnamruta rasayana
  • Shantha.raghothamachar,Bangalore

    11:28 PM, 10/09/2017

    ನಮಸ್ಕಾರಗಳು.