(You can only view comments here. If you want to write a comment please download the app.)
Shantha.raghothamachar,Bangalore
1:06 PM , 18/09/2017
ಅಲ್ಪಮತಿ,ಅಲ್ಪಜ್ಞಾನ ನನ್ನದು ನಿಸ್ಸಂಶಯವಾಗಿ. ಸರಿಯಾಗಿ ತಿಳಿಯಬೇಕೆಂಬ ಕಾರಣಕ್ಕೆ ಪ್ರಶ್ನೆ ಮಾಡುತ್ತೇನೆ. ಅನುಗ್ರಹಮಾಡಿ ಉತ್ತರ ನೀಡಿ.ಸರ್ವಥಾ ಅಹಂಕಾರ ಇತ್ಯಾದಿ ಗಳಿಲ್ಲ.ಅನಂತ ನಮಸ್ಕಾರ ಗಳು. ನಿಮ್ಮ ಪ್ರವಚನದಶ್ರವಣದಿಂದ ನರನಾಡಿಗಳು ಶುದ್ಧವಾಗುತ್ತೀವೆ.
Shantha.raghothamachar,Bangalore
12:56 PM, 17/09/2017
ನಮಸ್ಕಾರಗಳು. ಮಧ್ವಾಚಾರ್ಯರು ತಿಂದ ಬಾಳೆ ಹಣ್ಣಿನ ಸಂಖ್ಯೆ ಬೇರೆ ಬೇರೆ ಕಡೆ ಬೇರೆ ಬೇರೆ ಇದೆ ಇದನ್ನು ಸಮನ್ವಯ ಮಾಡಿಕೊಳ್ಳುವ ದು ಹೇಗೆ? ಮೂನ್ನೂರುಕೊಡಹಾಲು ಮೂರು ಸಾವಿರ ಹಣ್ಣು ಮೆದ್ದು ಎಂದು ವಾದಿರಾಜರು ಅವತಾರ ತ್ರಯಹಾಡಿನಲ್ಲಿ ಹೇಳಿ ದ್ದಾರೆ.
Vishnudasa Nagendracharya
ಇನ್ನೂರಕ್ಕಿಂತ ಹೆಚ್ಚು ಬಾಳೆಹಣ್ಣುಗಳ ಪ್ರಸಂಗ ನಡೆದದ್ದು ದಕ್ಷಿಣದೇಶದ ಯಾತ್ರೆಯಲ್ಲಿ, ವಿಷ್ಣುಮಂಗಲದ ಸಮೀಪದಲ್ಲ.
ಮುನ್ನೂರು ಕೊಡದ ಹಾಲು, ಸಾವಿರಾರು ಬಾಳೆಹಣ್ಣುಗಳ ಪ್ರಸಂಗ ನಡೆದದ್ದು ಗೋವೆಯಲ್ಲಿ. ಎರಡನೆಯ ಬದರೀಯಾತ್ರೆಯನ್ನು ಮುಗಿಸಿಕೊಂಡು ಬರುವಾಗ. ಇದರ ಉಲ್ಲೇಖ ಹತ್ತನೆಯ ಸರ್ಗದಲ್ಲಿ ಬರುತ್ತದೆ.