Upanyasa - VNU249

MV49 ಮೂರು ವಿದ್ವತ್ಸಭೆಗಳು

02/10/2016

ಹೀಗೆ ಪರಮಾದ್ಭುತವಾದ ಕ್ರಮದಲ್ಲಿ ಶ್ರೀಮದಾಚಾರ್ಯರು ವೇದವ್ಯಾಖ್ಯಾನ ಮತ್ತು ವಿಷ್ಣುಸಹಸ್ರನಾಮಕ್ಕೆ ಅರ್ಥವನ್ನು ಹೇಳಿದ ಬಳಿಕ ಮತ್ತೊಂದು ವಿದ್ವತ್ಸಭೆಗೆ ಆಗಮಿಸುತ್ತಾರೆ. ಆಚಾರ್ಯರನ್ನು ಗೆಲ್ಲಲು ಸಾಧ್ಯವಿಲ್ಲ, ಸೋತರೆ ನಮ್ಮ ಪ್ರಾಂತಕ್ಕೇ ಅವಮಾನ ಎಂದು ಆಲೋಚಿಸಿದ ಆಲ್ಲಿನ ಪ್ರಾಂತದ ಪಂಡಿತರು ಮತ್ತೊಂದು ಪ್ರಾಂತದ ಪಂಡಿತನನ್ನು ಆಚಾರ್ಯರೊಡನೆ ವಾದ ಮಾಡಲು ಹುರುದುಂಬಿಸುತ್ತಾರೆ. 

ಆದರೆ, ಆಚಾರ್ಯರ ಜ್ಞಾನಪ್ರಖರತೆಯಲ್ಲಿ ಆ ಪಂಡಿತ ಪತಂಗದಂತೆ ಸುಟ್ಟು ಹೋದಾಗ, ಆಚಾರ್ಯರು ಆ ಪಂಡಿತರ ದುಷ್ಟಬುದ್ಧಿಯನ್ನು ಅದ್ಭುತವಾದ ರೀತಿಯಲ್ಲಿ ತಿದ್ದುತ್ತಾರೆ. ವಾದಕ್ಕೆ ಹಿಂಜರಿಯುವ, ಪಲಾಯನ ಮಾಡುವ ಪಂಡಿತರಿಗೆ ತುಂಬ ತೀಕ್ಷ್ಣವಾಗಿ ಬುದ್ಧಿ ಹೇಳಿದ ಪ್ರಸಂಗವನ್ನು ನಾವಿಲ್ಲಿ ಕೇಳುತ್ತೇವೆ. 

ಆ ನಂತರ ಮತ್ತೊಂದು ವಿದ್ವತ್ಸಭೆಯಲ್ಲಿ ಆಚಾರ್ಯರು ವೇದವ್ಯಾಖ್ಯಾನ ಮಾಡುವ ಪ್ರಸಂಗ. ಆಗ ಅಪಾಲಾ ಎನ್ನುವ ಶಬ್ದಕ್ಕೆ ಆಚಾರ್ಯರು ಹೇಳಿದ ಅರ್ಥವನ್ನು ಅಲ್ಲಿನ ಪಂಡಿತರು ಒಪ್ಪುವದಿಲ್ಲ. ತುಂಬ ಪೂರ್ವಾಗ್ರಹದಿಂದ ವರ್ತಿಸುತ್ತಾರೆ. ಆಗ ಆಚಾರ್ಯರು, ಇಂಥ ದಿವಸ, ಇಂಥ ಒಬ್ಬ ಪಂಡಿತರು ನಿಮ್ಮ ಊರಿಗೆ ಬರುತ್ತಾರೆ, ಕೇಳಿ ಅವರನ್ನು ಎಂದು ಹೇಳಿ ಹೊರಟುಬಿಡುತ್ತಾರೆ. ಸುಮ್ಮನೇ ಏನೋ ಹೇಳುತ್ತಿದ್ದಾರೆ ಎಂದು ಅಲ್ಲಿನ ಪಂಡಿತರು ವಿಚಾರ ಮಾಡಿದ್ದರೆ, ಆಚಾರ್ಯರು ಹೇಳಿದ ದಿವಸಕ್ಕೆ, ಆ ಪಂಡಿತ ಆ ಊರಿಗೆ ಬಂದು ಆಚಾರ್ಯರು ಹೇಳಿದ ಅರ್ಥವನ್ನೇ ತಿಳಿಸುತ್ತಾನೆ. ಆಚಾರ್ಯರ ಸಂಪರ್ಕವನ್ನೇ ಪಡೆಯದ ಆ ವ್ಯಕ್ತಿಯ ಕುರಿತು ಆಚಾರ್ಯರಿಗೆ ಪರಿಸ್ಪಷ್ಟ ತಿಳುವಳಿಕೆಯಿದ್ದದನ್ನು ಕಂಡು, ಆಚಾರ್ಯರು ತ್ರಿಕಾಲಜ್ಞಾನಿಗಳು ಎಂದು ಪಂಡಿತರು ಮನವರಿಕೆ ಮಾಡಿಕೊಳ್ಳುತ್ತಾರೆ. 

ಹೀಗೆ ಪ್ರತಿಯೊಂದು ವಿದ್ವತ್ಸಭೆಯಲ್ಲಿ ಪ್ರಸ್ತುತವಾಗುತ್ತಿದ್ದ ಪ್ರತಿಯೊಂದು ವಿಷಯದ ಕುರಿತು ಚರ್ಚೆ ಮಾಡಿ ವಿಜಯಶಾಲಿಗಳಾಗುತ್ತ ಆಚಾರ್ಯರು ರೂಪ್ಯಪೀಠಪುರಕ್ಕೆ ಹಿಂತಿರುಗಿ ಬಂದ ಘಟನೆಯನ್ನು, ಆಚಾರ್ಯರ ದಕ್ಷಿಣದೇಶದ ಯಾತ್ರೆಯಿಂದ ಉಂಟಾದ ಪರಿಣಾಮವನ್ನು ಈ ಉಪನ್ಯಾಸದಲ್ಲಿ ಕೇಳುತ್ತೇವೆ. 

— ವಿಷ್ಣುದಾಸ ನಾಗೇಂದ್ರಾಚಾರ್ಯ 

Play Time: 53:53

Size: 9.44 MB


Download Upanyasa Share to facebook View Comments
1601 Views

Comments

(You can only view comments here. If you want to write a comment please download the app.)
  • Shantha.raghothamachar,Bangalore

    1:56 PM , 20/09/2017

    ನಮಸ್ಕಾರ ಗಳು. ಆಚಾರ್ಯರ ದಿಗ್ವಿಜಯದವಿವರಣೆ ಅಧ್ಭುತವಾಗಿತ್ತು
  • Shantha.raghothamachar,Bangalore

    1:56 PM , 20/09/2017

    ನಮಸ್ಕಾರ ಗಳು. ಆಚಾರ್ಯರ ದಿಗ್ವಿಜಯದವಿವರಣೆ ಅಧ್ಭುತವಾಗಿತ್ತು