02/10/2016
ವೇದಗಳು ಮತ್ತು ದ್ರೌಪದೀದೇವಿಯರಿಗಿದ್ದ ಸಾಮ್ಯವನ್ನು ನಿರೂಪಣೆ ಮಾಡುತ್ತಲೇ, ದ್ರೌಪದಿಗೆ ಕುರುಸಭೆಯ ಮಧ್ಯದಲ್ಲಿ ಬಂದಿದ್ದ ದುರವಸ್ಥೆಯಂತೆ ಕಲಿಗಾಲದಲ್ಲಿ ವೇದಗಳಿಗೆ ಬಂದೊದಗಿತ್ತು ಎಂಬ ಮಾತನ್ನು ನಮಗೆ ತಿಳಿಸುತ್ತಾರೆ. ಆ ದಿವಸ ಸಭೆಯ ಮಧ್ಯದಲ್ಲಿ ಭೀಮಸೇನ ಎದ್ದುನಿಂತು ದ್ರೌಪದಿಗೆ ಹಿಂಸೆ ನೀಡಿದವರನ್ನು ಕೊಲ್ಲುತ್ತೇನೆ ಎಂದು ಪ್ರತಿಜ್ಞೆ ಮಾಡಿದಂತೆ ಪೂರ್ವಭೀಮರಾದ ಶ್ರೀಮದಾಚಾರ್ಯರೂ ಸಹ ವೇದಗಳಿಗೆ ಬಂದೊದಗಿರುವ ದುರವಸ್ಥೆಯನ್ನು ದೂರ ಮಾಡುತ್ತೇನೆ ಎಂದು ಸಂಕಲ್ಪಿಸಿ ಮೊಟ್ಟ ಮೊದಲಿಗೆ ಶ್ರೀಮದ್ ಗೀತಾಭಾಷ್ಯದ ರಚನೆಯನ್ನು ಮಾಡಿದರು ಎಂಬ ಪರಮಮಂಗಳ ವಿಷಯವನ್ನು ನಾವಿಂದು ಕೇಳುತ್ತೇವೆ, ಗೀತಾಭಾಷ್ಯದ ಮಾಹಾತ್ಮ್ಯಚಿಂತನೆಯೊಂದಿಗೆ. — ವಿಷ್ಣುದಾಸ ನಾಗೇಂದ್ರಾಚಾರ್ಯ
Play Time: 48:10
Size: 8.45 MB