02/10/2016
ಗೀತಾಭಾಷ್ಯವನ್ನು ರಚಿಸಿ ಗುರುಗಳಿಗೆ ನೀಡಿದ ಶ್ರೀಮದಾಚಾರ್ಯರು ಬದರೀಯಾತ್ರೆಯ ಸಂಕಲ್ಪವನ್ನು ಮಾಡುತ್ತಾರೆ. ಆಚಾರ್ಯರನ್ನು ಅಷ್ಟು ವರ್ಷಗಳ ಕಾಲ ಬಿಟ್ಟಿರಲು ಸಾಧ್ಯವಿಲ್ಲದೆ ಮೊದಲಿಗೆ ಶ್ರೀಮದಚ್ಯುತಪ್ರೇಕ್ಷಾಚಾರ್ಯರು ಅನುಜ್ಞೆಯನ್ನು ನೀಡುವದಿಲ್ಲ. ಆದರೆ, ಯತಿಗಳಿಗೆ ಸಂಚಾರವೇ ಕರ್ತವ್ಯ ಎಂದು ಶ್ರೀಮದಾಚಾರ್ಯರು ನಿವೇದಿಸಿಕೊಂಡು ಗುರುಗಳಿಂದ ಅನುಜ್ಞೆಯನ್ನು ಪಡೆದು ಆಚಾರ್ಯುರು ಅನೇಕ ಸಚ್ಛಿಷ್ಯರ ಜೊತೆಯಲ್ಲಿ ಬದರೀಯಾತ್ರೆಯನ್ನು ಆರಂಭಿಸುತ್ತಾರೆ. ಶ್ರೀಮದಾಚಾರ್ಯರು ಯಾತ್ರೆಯ ಸಂದರ್ಭದಲ್ಲಿ ಪ್ರತಿಯೊಬ್ಬ ವಿದ್ವಾಂಸನ ಮನೆಗೆ ಹೋಗಿ ಅವರ ಬಳಿ ಇದ್ದ ಗ್ರಂಥಗಳನ್ನು ತೆಗೆಸಿ ಅಲ್ಲಿದ್ದ ಪಾಠಗಳ ಪರಿಶೋಧನೆಯನ್ನು ಮಾಡಿದ ಶ್ರೇಷ್ಠ ಘಟನೆಯ ಕುರಿತು ನಾವಿಲ್ಲಿ ಕೇಳುತ್ತೇವೆ. — ವಿಷ್ಣುದಾಸ ನಾಗೇಂದ್ರಾಚಾರ್ಯ
Play Time: 59:26
Size: 10.39 MB