Upanyasa - VNU253

MV53 ಬದರಿಗೆ ಬಂದ ಶ್ರೀಮದಾಚಾರ್ಯರು

02/10/2016

ಅದ್ಭುತವಾದ ಕ್ರಮದಲ್ಲಿ ಯಾತ್ರೆಯನ್ನು ಮಾಡುತ್ತ ಬದರಿಗೆ ಬರುವ ಶ್ರೀಮದಾಚಾರ್ಯರು ಪರಮಾತ್ಮನಿಗೆ ಉಡುಗೊರೆಯಾಗಿ ತಾವು ರಚಿಸಿದ ಶ್ರೀಮದ್ ಗೀತಾಭಾಷ್ಯವನ್ನು ಸಮರ್ಪಿಸಿದ ಪ್ರಸಂಗವನ್ನು ಇಂದಿನ ಉಪನ್ಯಾಸದಲ್ಲಿ ಕೇಳುತ್ತೇವೆ. 

ಗಂಗಾದೇವಿಯ ಮಾಹಾತ್ಮ್ಯ, ಭರತಭೂಮಿಯ ಮಾಹಾತ್ಮ್ಯ, ಬದರಿಕಾಶ್ರಮದ ಮಾಹಾತ್ಮ್ಯ, ಆಚಾರ್ಯರ ಮಾಹಾತ್ಮ್ಯ ಮತ್ತು ಬದರಿಯ ಶ್ರೀಮನ್ನಾರಯಣನ ಮಾಹಾತ್ಮ್ಯವನ್ನು ಶ್ರೀನಾರಾಯಣಪಂಡಿತಾಚಾರ್ಯರು ನಮಗಿಲ್ಲಿ ತಿಳಿಸಿ ಹೇಳುತ್ತಾರೆ. 

ನಾವು ಯಾಕಾಗಿ ಬದರೀಯಾತ್ರೆಯನ್ನು ಮಾಡಬೇಕು ಎನ್ನುವದಕ್ಕೆ ಅದ್ಭುತವಾದ ಉತ್ತರವನ್ನು ನಾವಿಲ್ಲಿ ಪಡೆಯುತ್ತೇವೆ. 

ಭರತಭೂಮಿಯಲ್ಲಿ ಜನ್ಮ ಪಡೆದು, ವಾಸ ಮಾಡುವ ಪ್ರತಿಯೊಬ್ಬ ಸಜ್ಜನ ಕೇಳಬೇಕಾದ ಭಾಗವಿದು. 

Play Time: 39:52

Size: 7.02 MB


Download Upanyasa Share to facebook View Comments
2794 Views

Comments

(You can only view comments here. If you want to write a comment please download the app.)
 • Jyothi Gayathri,Harihar

  7:55 AM , 05/12/2020

  ಶ್ರೀ ಗುರುಭ್ಯೋ ನಮಃ 🙏🙏🙏🙏🙏
  ಆಚಾರ್ಯರಿಗೆ ನಮಸ್ಕಾರಗಳು. ಬದಿರಿ ನಾರಾಯಣ ಕ್ಷೇತ್ರ ಮಹಿಮೆಯನ್ನು ಕೇಳಿ  ಒಮ್ಮೆಯಾದರು ಬದರಿ ಯಾತ್ರೆಯನ್ನು ಮಾಡಬೇಕು ಎಂದು ಬಯಕೆಯಾಯಿತು. ಗುರುಗಳು, ಭಗವಂತ ಅನುಗ್ರಹ ಮಾಡಿ ಮಾಡಿಸಬೇಕು. ಬದರಿ ನಾರಾಯಣ ಸ್ರೋತ್ರವನ್ನು ತಿಳಿಸಿರಿ. ಹೆಣ್ಣುಮಕ್ಕಳು ಸ್ರೋತ್ರವನ್ನು ಹೇಳಬಹುದಾ?
 • Shantha.raghothamachar,Bangalore

  10:33 PM, 22/09/2017

  ನಮಸ್ಕಾರ ಗಳು.ಬದರಿಕ್ಷೇತ್ರದಮಹಿಮೆ,ವಿವರಣೆ ಅಪೂರ್ವ ವಿಷಯ ವನ್ನು ತಿಳಿಸಿ ಉಪಕರಸಿದ್ಧೀರಿ.ಬದರಿಯಾತ್ರೆಗೆಹೋಗುವಮುಂಚೆ ತಿಳಿದಿದ್ದರೆಚೆನ್ನಾಗಿತ್ತು.ಬದರಿನಾಥ ಇನ್ನೊಂದು ಬಾರಿಕರೆಸಿಕೊಳ್ಳಲೆಂದು ಪ್ರಾರ್ಥನೆ ಮಾಡುತ್ತೇನೆ.ವ್ಯಾಸಗುಹೆ ಗಣೇಶ ನಗುಹೆಮೊದಲ ಬದರಿಯಲ್ಲಿಯೇ ಬರುತ್ತದೆ ಯೆ?
 • H. Suvarna kulkarni,Bangalore

  3:38 AM , 10/08/2017

  ಗುರುಗಳಿಗೆ ಪ್ರಣಾಮಗಳು ಬದರಿ ಯಾತ್ರೆ ಮಾಡುವ ಭಾಗ್ಯ ನಮಗಿನ್ನು ಕಾಲ ಕೂಡಿ ಬಂದಿಲ್ಲ ಅದಕ್ಕೂ ನಮ್ಮ ಪೂವ್೯ಜನ್ಮದ ಪುಣ್ಯ ವಿರಬೇಕೇನೋ ಅನ್ನಿಸುತ್ತದೆ
 • Jayashree Karunakar,Bangalore

  5:45 PM , 09/08/2017

  ಗುರುಗಳೆ ಬದರಿಕಾಶ್ರಮದಲ್ಲಿ ನಾರಾಯಣದೇವರು ಯಾರನ್ನು ಕುರಿತು ತಪಸ್ಸು ಮಾಡುವುದು

  Vishnudasa Nagendracharya

  ದೇವರನ್ನು ಹೊರತು ಪಡಿಸಿ ಇತರರು ಮಾಡುವ ತಪಸ್ಸಿಗೆ ಒಂದು ಅಪೇಕ್ಷೆ ಇರುತ್ತದೆ, ಮತ್ತು ಆರಾಧ್ಯದೈವ ಇರುತ್ತಾರೆ.
  
  ಪರಮಾತ್ಮ ನಾರಾಯಣ-ವೃಷಭ-ವ್ಯಾಸ ಮುಂತಾದ ರೂಪಗಳಲ್ಲಿ ತಪಸ್ಸು ಮಾಡುತ್ತಾನೆ. ಅವನಿಗೆ ಯಾವ ಅಪೇಕ್ಷೆಯೂ ಇಲ್ಲ. ಕಾರಣ ಅವನು ಪಡೆಯಬೇಕಾದ್ದು ಯಾವುದೂ ಇಲ್ಲ. 
  
  ಅವನ ತಪಸ್ಸು ಕೇವಲ ಲೋಕಶಿಕ್ಷಣಕ್ಕಾಗಿ - ಅಂದರೆ, ತಪಸ್ಸು ಯಾವ ರೀತಿ ಮಾಡಬೇಕು ಎನ್ನುವದನ್ನು ತೋರುವದಕ್ಕಾಗಿ - ತಪಸ್ಸು ಮಾಡುತ್ತಾನೆ. 
  
  ಎರಡನೆಯ ಉದ್ದೇಶ, ಜಗತ್ತಿನ ರಕ್ಷಣೆಗಾಗಿ. ಪರಮಾತ್ಮ ತಪಸ್ಸು ಮಾಡದೆಯೂ ಲೋಕವನ್ನು ರಕ್ಷಣೆ ಮಾಡಬಲ್ಲ. ಆದರೂ ಲೀಲೆಯಿಂದ ತಪಸ್ಸು ಮಾಡಿ ರಕ್ಷಣೆ ಮಾಡುತ್ತಾನೆ. ಚನ್ನಾಗಿ ನಡೆದಾಡುವ ವ್ಯಕ್ತಿ ತಮಾಷೆಗಾಗಿ ಊರುಗೋಲನ್ನು ಇಟ್ಟುಕೊಂಡು ನಡೆದಾಡುವಂತೆ. ಕಲಿಯುಗದ ಜನರು ಮಾಡುವ ಅಪರಾಧಗಳಿಂದ ಭೂಮಿ ವಿನಾಶವಾಗಿಹೋಗಬೇಕು. ಆ ವಿನಾಶವಾಗದಂತೆ ಪರಮಾತ್ಮ ತನ್ನ ತಪಸ್ಸಿನಿಂದ ಭೂಮಿಯನ್ನು ಕಾಪಾಡುತ್ತಿದ್ದಾನೆ ಎಂಬ ಮಾತು ಬೃಹನ್ನಾರದೀಯಪುರಾಣದಲ್ಲಿದೆ. 
  
  ಇನ್ನು ಪರಮಾತ್ಮ ಯಾರನ್ನು ಕುರಿತೂ ತಪಸ್ಸು ಮಾಡಬೇಕಾಗಿಲ್ಲ. ಕಾರಣ ಎಲ್ಲರಿಗಿಂತ ಹಿರಿಯನಾದವನು ಪರಮಾತ್ಮನೇ. ತನ್ನ ಗುಣಗಳನ್ನು ತಾನೇ ಧ್ಯಾನ ಮಾಡುತ್ತ ನಾರಾಯಣದೇವರು ಬದರಿಯಲ್ಲಿ ಕುಳಿತಿದ್ದಾರೆ. 
  
  ವ್ಯಾಸ, ಕೃಷ್ಣ ರೂಪದಲ್ಲಿಯೂ ಭಗವಂತ ತಪಸ್ಸು ಮಾಡುತ್ತಾನೆ. ರುದ್ರದೇವರನ್ನು ಕುರಿತು. ಅಲ್ಲಿ ರುದ್ರನ ಅಂತರ್ಯಾಮಿಯಾದ ತನ್ನ ಗುಣಗಳನ್ನು ತಾನೇ ಧ್ಯಾನ ಮಾಡುತ್ತಾನೆ. 
  
  ಹೀಗೆ ತನ್ನನ್ನು ತಾನೇ ಧ್ಯಾನ ಮಾಡುತ್ತ, ಲೋಕಶಿಕ್ಷಣಕ್ಕಾಗಿ ಭಗವಂತ ತಪಸ್ಸು ಮಾಡುತ್ತಾನೆ.