Upanyasa - VNU254

MV54 ಶ್ರೀಮದ್ ಗೀತಾಭಾಷ್ಯದ ಮಾಹಾತ್ಮ್ಯ

02/10/2016

ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಬದರಿಕಾಶ್ರಮಕ್ಕೆ ಬಂದು ಅಲಕನಂದಾತೀರದ ಶ್ರೀಮನ್ನಾರಯಣನಿಗೆ ಸಾಷ್ಟಾಂಗವೆರಗಿ ಗೀತಾಭಾಷ್ಯವನ್ನು ಸಮರ್ಪಿಸುತ್ತಾರೆ. 

ಆ ಬಳಿಕ ನಾರಾಯಣನ ಮುಂದೆ ಕುಳಿತು ಸಮಗ್ರ ಗೀತಾಭಾಷ್ಯದ ವಾಚನವನ್ನು ಮಾಡುತ್ತಾರೆ. ಸಮಗ್ರವನ್ನು ಆಲಿಸಿದ ನಾರಾಯಣ, ಪ್ರತಿಮೆಯಿಂದಲೇ ಆಚಾರ್ಯರೊಡನೆ ಮಾತನಾಡಿ, ಮಂಗಳಾಚರಣ ಶ್ಲೋಕದಲ್ಲಿದ್ದ ಶಕ್ತಿತಃ ಎಂಬ ಪದದ ಬದಲಾಗಿ ಲೇಶತಃ ಎಂಬ ಪದವನ್ನಿಡು ಎಂದು ಆಜ್ಞೆ ಮಾಡುತ್ತಾನೆ. 

ಆಚಾರ್ಯರ ಗೀತಾಭಾಷ್ಯದ ಮಾಹಾತ್ಮ್ಯ, ಆ ಮೊಟ್ಟ ಮೊದಲ ಶ್ಲೋಕದಲ್ಲಿಯೇ ಆಚಾರ್ಯರು ಮಾಡಿದ ಕ್ರಾಂತಿ, ಪರಮಾತ್ಮನಿಗೆ ಗೀತಾಭಾಷ್ಯದ ಮೇಲಿರುವ ಪ್ರೇಮ ಇವೆಲ್ಲವನ್ನೂ ಈ ಉಪನ್ಯಾಸದಲ್ಲಿ ಕೇಳುತ್ತೇವೆ. 

ಶ್ರೀಮದಾಚಾರ್ಯರ ಗ್ರಂಥಗಳೆಡಗಿನ ನಮ್ಮ ಭಕ್ತಿಯನ್ನು ಇಮ್ಮಡಿಗೊಳಿಸುವ ಭಾಗ ಶ್ರೀಮಧ್ವವಿಜಯದ ಆರನೆಯ ಸರ್ಗದ ಈ ಭಾಗ. 

Play Time: 45:50

Size: 8.05 MB


Download Upanyasa Share to facebook View Comments
4125 Views

Comments

(You can only view comments here. If you want to write a comment please download the app.)
  • Shantha.raghothamachar,Bangalore

    2:53 PM , 23/09/2017

    ನಮಸ್ಕಾರಗಳು.ಶಕ್ತಃ,ಲೇಶತಃ ಶಬ್ದಗಳ ಆರ್ಥ ಸಂದರ್ಭ ಗೊತ್ತಿತ್ತು. ಆದರೆ ಈಗ ತುಂಬಾ ಚೆನ್ನಾಗಿ ಅರ್ಥ ವಾಯಿತು ಧನ್ಯವಾದಗಳು