Upanyasa - VNU255

MV55 ಶ್ರೀಮದಾಚಾರ್ಯರು ಮಾಡಿದ ತಪಸ್ಸು

02/10/2016

ಸ್ನಾನ ಮಾಡಿದರೇ ಮಡಿಯಾ, 
ಪಂಚೆ ಸೀರೆಗಳನ್ನು ಉಟ್ಟರೇ ಮಡಿಯಾ, 
ಆಚಾರವಿದ್ದರೇ ಜ್ಞಾನ ಬರುತ್ತದೆಯಾ, 
ಉಪವಾಸ ಎಂದರೆ ಊಟ ಬಿಡುವದಲ್ಲ, ದೇವರ ಹತ್ತಿರ ಇರುವದು, 
ಈ ಸದಾಚಾರವೆಲ್ಲ ಏನೂ ಬೇಡ, 
ಮನಸ್ಸು ಶುದ್ಧವಾಗಿದ್ದರೆ ಸಾಕು, ದೇವರು ಸಿಗುತ್ತಾನೆ ಎನ್ನುವದು 
ಇವತ್ತಿನ ಆಧುನಿಕರ ಅಂಬೋಣ. 

ಧರ್ಮಾಚರಣೆ ಮಾಡಲು ಮನಸ್ಸಿಲ್ಲದೇ ಶಾಸ್ತ್ರವನ್ನು ಅಲ್ಲಗಳೆಯುವ ಈ ಜನರಿಗೆ ನಾವು ನೀವಲ್ಲ, ಸ್ವಯಂ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರೇ ಉತ್ತರ ನೀಡಿದ್ದಾರೆ, ವಾಕ್ಯದ ರೂಪದಲ್ಲಿ ಮತ್ತು ಆಚರಣೆಯ ರೂಪದಲ್ಲಿ. 

ಗೀತಾಭಾಷ್ಯದಲ್ಲಿ ಶ್ರೀಮದಾಚಾರ್ಯರು “ಆಚಾರಸ್ಯ ಜ್ಞಾನಸಾಧನತ್ವೋಕ್ತೇಶ್ಚ” ಎಂದು ಸದಾಚಾರ ಜ್ಞಾನವನ್ನು ನೀಡುವ ಸಾಧನ ಎಂದು ಪ್ರತಿಪಾದಿಸಿದ್ದಾರೆ. 

ಸ್ವಯಂ ತಾವು ಸಾಧನಪ್ರಪಂಚದ ಉತ್ತುಂಗದಲ್ಲಿದ್ದರೂ, ಪರಮಾತ್ಮನನ್ನು ಸದಾ ಕಾಣುವ ಮಹಾಸೌಭಾಗ್ಯವಂತರಾಗಿದ್ದರೂ ಸಹ ಆಚಾರ್ಯರು ವೇದವ್ಯಾಸದೇವರು ವಾಸವಿರುವ ಉತ್ತರಬದರಿಕಾಶ್ರಮಕ್ಕೆ ಹೋಗಲು ಪರಮಾತ್ಮನ ಆಜ್ಞೆ ಪಡೆಯಬೇಕೆಂದು ಆಚಾರ್ಯರು 48 ದಿವಸಗಳ ಕಾಲ ನಿರ್ಜಲ ಉಪವಾಸ, ಕಾಷ್ಠಮೌನವ್ರತವನ್ನು ಆಚರಿಸುತ್ತಾರೆ. 

ತೊಂಭತ್ತೊಂಭತ್ತು ಬ್ರಹ್ಮಕಲ್ಪಗಳ ಹಿಂದೆಯೇ ಭಗವತ್ಸಾಕ್ಷಾತ್ಕಾರ ಪಡೆದ ಆ ಪರಬ್ರಹ್ಮಜ್ಞಾನಿಗಳಿಗೆ, ಪರಮಾತ್ಮನನ್ನು ಸಮಗ್ರ ಸಾವರಣಬ್ರಹ್ಮಾಂಡದ ಅಣುಅಣುವಿನಲ್ಲಿಯೂ ಕಾಣಬಲ್ಲ ಆ ಮಹಾನುಭಾವರಿಗೆ, ಇಡಿಯ ದೇವತಾಪ್ರಪಂಚವನ್ನು ನಿಯಮಸುವ ಆ ಮಹಾಸಾಮರ್ಥ್ಯದ ದೇವಗುರುವಿಗೆ, ಅನಾದಿಕಾಲದಿಂದ ಅನಂತಕಾಲದವರೆಗೆ ಒಂದೂ ವಿಕರ್ಮವನ್ನು ಮಾಡದ ಆ ಪರಿಶುದ್ಧ ಚೇತನಕ್ಕೆ, ಎಂದೆಂದಿಗೂ ಕಲಿಯ ಪ್ರಭಾವಕ್ಕೊಳಗಾಗದ ಆ ಆಖಣಾಶ್ಮಸಮರಿಗೆ ಬೆಳಗಿನ ಝಾವದ ಕೊರೆವ ಚಳಿಯಲ್ಲಿ ಅಲಕನಂದೆಯಲ್ಲಿ ಸ್ನಾನ ಮಾಡುವ ಕಾರಣವೇನಿತ್ತು, ನಲವತ್ತೆಂಟು ದಿವಸಗಳ ಕಾಲ ನೀರನ್ನೂ ಸೇವಿಸದೇ ಉಪವಾಸ ಮಾಡುವ ಕಾರಣವೇನಿತ್ತು, ಒಂದು ಮಂಡಲದ ಸಮಯ ಮರದ ಕೊರಡಿನಂತೆ ಯಾರೊಡನೆಯೂ ಮಾತನಾಡದೇ ಮೌನವ್ರತ ಮಾಡುವ ಕಾರಣವೇನಿತ್ತು. 

ಇದ್ದ ಕಾರಣ ಒಂದೇ, ಪರಮಾತ್ಮ ಪ್ರೀತನಾಗಬೇಕು ಎನ್ನುವದು. ನಿತ್ಯತುಷ್ಟಹರಿತೋಷವಿಶೇಷಂ ಚಿಂತಯನ್, ಪರಮಪ್ರಸನ್ನನಾಗಿರುವ ಶ್ರೀಹರಿ ಮತ್ತಷ್ಟು ಒಲಿಯಲಿ ಎನ್ನುವದೊಂದೇ ಅವರ ಉದ್ದೇಶವಾಗಿತ್ತು. 

ಅಂದರೆ, ಪರಮಾತ್ಮನನ್ನು ಒಲಿಸಿಕೊಳ್ಳಲು, ಅವನ ಜ್ಞಾನ ದರ್ಶನಗಳನ್ನು ಪಡೆಯಲು ಸದಾಚಾರ ಅತ್ಯವಶ್ಯಕ ಎಂದು ಗ್ರಂಥದಲ್ಲಿ ಪ್ರತಿಪಾದಿಸಿ ಸ್ವಯಂ ಆಚರಿಸಿ ತೋರಿಸಿದವರು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು. ಆ ಮುಖಾಂತರ ಸದಾಚಾರವನ್ನು ಅಲ್ಲಗಳೆಯುವ ಶೌಚಾಚರವಿಲ್ಲದ ಜನರಿಗೆ ಚಾವಟಿಯೇಟಿನಂತ ಉತ್ತರವನ್ನು ತಮ್ಮ ಚರ್ಯೆಯಿಂದಲೇ ನೀಡಿದವರು. 

ನಮ್ಮ ಆದಿಗುರುಗಳು ಮಾಡಿದ ಆ ಮಹೋನ್ನತ ತಪಸ್ಸಿನ ವಿವರಣೆ ಈ ಉಪನ್ಯಾಸದಲ್ಲಿದೆ. 

ತಪ್ಪದೇ ಕೇಳಿ. ನಿಮ್ಮ ಮಕ್ಕಳಿಗೂ ಕೇಳಿಸಿ. 

Play Time: 34:51

Size: 6.15 MB


Download Upanyasa Share to facebook View Comments
6419 Views

Comments

(You can only view comments here. If you want to write a comment please download the app.)
  • Madhusudan Gururajarao Chandragutti,Belagavi

    1:26 PM , 02/02/2020

    ಪೂಜ್ಯ ಆಚಾರ್ಯರಿಗೆ ಹೃತ್ಪೂರ್ವಕ ಪ್ರಣಾಮಗಳು. ತಮ್ಮ ಮಾತು ಅಕ್ಷರಶಃ ಸತ್ಯ. ಈ ಬಾರಿಯ ಧನುರ್ಮಾಸ ಹಾಗೂ ಮಾಘಸ್ನಾನದ ಸಮಯದಲ್ಲಿ ತಾವು ತಿಳಿಸಿಕೊಟ್ಟಿರುವ ಅನುಸಂಧಾನದೊಂದಿಗೆ ಶೀತಲಜಲ ಅರುಣೋದಯ ಕಾಲದಲ್ಲಿ ಯಾವುದೇ ತೊಂದರೆ ಇಲ್ಲದಂತೆ ನಡೆದಿದೆ. ಶ್ರೀಮದಾಚಾರ್ಯರ ಪರಮಾನುಗ್ರಹ. ತಮಗೆ ಅನಂತ ಧನ್ಯವಾದಗಳು.
  • Shantha.raghothamachar,Bangalore

    7:06 PM , 23/09/2017

    ನಮಸ್ಕಾರ ಗಳು. ಜ್ಞಾನ ಪ್ರದವಾದಪ್ವವಚನ