Upanyasa - VNU256

MV56 ವ್ಯಾಸಬದರಿಕಾಶ್ರಮಕ್ಕೆ ಶ್ರೀಮದಾಚಾರ್ಯರ ಪ್ರಯಾಣ

02/10/2016

ನಲವತ್ತೆಂಟು ದಿವಸಗಳ ಕಾಷ್ಠಮೌನವ್ರತ ಮತ್ತು ಉಪವಾಸವನ್ನು ಮಾಡಿದ ಶ್ರೀಮದಾಚಾರ್ಯರ ಮೇಲೆ ಪರಮಾನುಗ್ರಹ ಮಾಡಿದ ಶ್ರೀ ವೇದವ್ಯಾಸದೇವರು, ತಮ್ಮ ಆಶ್ರಮಕ್ಕೆ ಬರಲು ಆದೇಶ ಮಾಡುತ್ತಾರೆ. ಆಚಾರ್ಯರು ಶಿಷ್ಯರಿಗೆ ಉಪದೇಶವನ್ನು ಬರೆದಿಟ್ಟು ಹೊರಡಲು ಸಿದ್ಧರಾಗುತ್ತಾರೆ. ಹೊರಡುವ ಮುನ್ನ, ‘ನಾವು ಹಿಂತಿರುಗಿ ಬರಬಹುದೋ ಇಲ್ಲವೋ ಎನ್ನುವದನ್ನು ಹರಿಯೇ ಬಲ್ಲ’  ಎಂದು ಬರೆದಿಟ್ಟು ತೆರಳುತ್ತಾರೆ. ಮಾಧ್ವರ ಮಧ್ಯದಲ್ಲಿಯೇ ಹುಟ್ಟಿಬಂದಿರುವ ಹುಳಗಳಂತಹ ಜನ ಶ್ರೀಮದಾಚಾರ್ಯರಿಗೆ, ಶ್ರೀಮದಾಚಾರ್ಯರ ಸಿದ್ಧಾಂತಕ್ಕೆ, ಗ್ರಂಥಗಳಿಗೆ ಹೇಗೆ ಅವಮಾನ ಮಾಡುತ್ತಿದ್ದಾರೆ ಎನ್ನುವದನ್ನು ಇಲ್ಲಿ ತಿಳಿಯುತ್ತೇವೆ. 

ಆಚಾರ್ಯರು ವೇದವ್ಯಾಸದೇವರ ಉತ್ತರಬದರಿಕಾಶ್ರಮಕ್ಕೆ ಹೊರಟು ನಿಲ್ಲುತ್ತಾರೆ. ಆಚಾರ್ಯರ ವಿರಹವನ್ನು ತಾಳಲಾಗದೇ ಶ್ರೀ ಸತ್ಯತೀರ್ಥರೂ ಸಹ ಆಚಾರ್ಯರನ್ನು ಹಿಂಬಾಲಿಸಿ ಹೊರಟುಬಿಡುತ್ತಾರೆ. ಆದರೆ, ಇಡಿಯ ದಿವಸ ಆಚಾರ್ಯರ ಹಿಂದೆ ಹೋದರೂ ಆಚಾರ್ಯರ ಬಳಿ ತಲುಪಲಾಗುವದಿಲ್ಲ. ಆ ಬಳಿಕ ಆಚಾರ್ಯರ ಅನುಗ್ರಹದಿಂದ ಇಡಿಯ ದಿವಸದ ಮಾರ್ಗವನ್ನು ಒಂದೇ ಮುಹೂರ್ತದಲ್ಲಿ ಕ್ರಮಿಸಿ ಬದರಿಗೆ ಹಿಂತಿರುಗುತ್ತಾರೆ. ಬಂದ ಬಳಿಕ, ಆಚಾರ್ಯರು ಯಾವ ರೀತಿ ಹಿಮಾಲಯಪರ್ವತಾರೋಹಣವನ್ನು ಮಾಡಿದುರ ಎಂಬ ಮಾತನ್ನು ಕಣ್ಣಿಗೆ ಕಟ್ಟುವಂತೆ ಉಳಿದ ಆಚಾರ್ಯರ ಶಿಷ್ಯರಿಗೆ ತಿಳಿಸಿಹೇಳುತ್ತಾರೆ. ಮೈನವಿರೇಳಿಸುವ ಆ ಘಟನೆಯ ವಿವರ ಈ ದಿವಸದ ಉಪನ್ಯಾಸದಲ್ಲಿದೆ. 

ವಾನರೇಂದ್ರ ಇವ ವಾಯುಜವೋsಸೌ 
ಭೀಮಸೇನ ಇವ ದಾನವಭೀಮಃ I
ಉಲ್ಲಲಾಸ ಗಿರಿಪುಂಗವಶೃಂಗೇ 
ಸ ವ್ರಜನ್ ವೃಜಿನನಾಶನನಾಮಾ  II

Play Time: 58:54

Size: 10.30 MB


Download Upanyasa Share to facebook View Comments
1845 Views

Comments

(You can only view comments here. If you want to write a comment please download the app.)
  • Shantha.raghothamachar,Bangalore

    11:30 PM, 23/09/2017

    ನಮಸ್ಕಾರ ಗಳು. ಭವ್ಯ, ದಿವ್ಯ, ಪವಿತ್ರ ಹಿಮಾಲಯದ ಚಿತ್ರ ಕಣ್ಣಿನ ಮುಂದೆ ಬರುವಂಥ ವಿಶೇಷ ಪ್ರವಚನ ಅದ್ಭುತವಾಗಿತ್ತು. ಧನ್ಯವಾದಗಳು. ತಾಮಸರು ಮಧ್ವಾಚಾರ್ಯರ ಬಗ್ಗೆ ಆಡುವ ಮಾತಿನ ಬಗ್ಗೆ ಕೇಳಿ ಅತಿ ಬೇಸರ ವಾಗುತ್ತದೆ.