Upanyasa - VNU260

MV60 ವೇದವ್ಯಾಸದೇವರ ಸನ್ನಿಧಿಯಲ್ಲಿ ಶ್ರೀಮದಾಚಾರ್ಯರು

02/10/2016

ವೇದವ್ಯಾಸದೇವರ ಪರಮಮಂಗಳವಾದ ಪರಮಸುಂದರವಾದ ದೇಹವನ್ನು ಕಣ್ಣಗಳಲ್ಲಿ  ತುಂಬಿಸಿಕೊಳ್ಳುತ್ತ ಅವರ ಗುಣಮಾಹಾತ್ಮ್ಯವನ್ನು ಚಿಂತನೆ ಮಾಡುತ್ತ ಆಚಾರ್ಯರು ಅವರಿದ್ದಲ್ಲಿಗೆ ಬಂದು ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. 

ಇಡಿಯ ಜೀವಪ್ರಪಂಚದಲ್ಲಿಯೇ ತನಗೆ ಅತ್ಯಂತ ಪ್ರಿಯರಾದ ಮುಖ್ಯಪ್ರಾಣದೇವರು ತನ್ನ ಆಜ್ಞೆಯಂತೆ ಮನುಷ್ಯರ ಮಧ್ಯದಲ್ಲಿ ಅವತರಿಸಿ ಬಂದು ತನ್ನನ್ನು ಕಾಣಲಿಕ್ಕಾಗಿ ಬಂದಿರುವದನ್ನು ಕಂಡ ವೇದವ್ಯಾಸದೇವರು ತಾವು ಕುಳಿತಲ್ಲಿಂದ ಎದ್ದು ಬಂದು ಅಚಾರ್ಯರನ್ನೆಬ್ಬಿಸಿ ಅತ್ಯಂತ ಪ್ರೀತಿಯಿಂದ ಆಲಿಂಗಿಸಿಕೊಳ್ಳುತ್ತಾರೆ. 

ಆ ಬಳಿಕ, ಎಲ್ಲ ಋಷಿಗಳನ್ನೂ ಪ್ರೇಮದ ನೋಟದಿಂದ ವೀಕ್ಷಿಸಿದ ಆಚಾರ್ಯರು ವೇದವ್ಯಾಸದೇವರು ಕುಳಿತ ಬಳಿಕ, ವ್ಯಾಸಶಿಷ್ಯರು ತಂದಿತ್ತ ಆಸನದಲ್ಲಿ ಗುರುಗಳ ಮುಂದೆ ವಿನಮ್ರತೆಯಿಂದ ಕುಳಿತುಕೊಳ್ಳುತ್ತಾರೆ. 

ಈ ಪರಮಸುಂದರ ಘಟನೆಯ ವಿವರ ಈ ಉಪನ್ಯಾಸದಲ್ಲಿದೆ. 

Play Time: 61:04

Size: 11.25 MB


Download Upanyasa Share to facebook View Comments
3299 Views

Comments

(You can only view comments here. If you want to write a comment please download the app.)
  • Shantha.raghothamachar,Bangalore

    10:42 PM, 25/09/2017

    ನಮಸ್ಕಾರ ಗಳು.ಅಪೂರ್ವ ವಾದ ಅದ್ಭುತವಾದ ವಿಶೇಷ ವಿಷಯಳನ್ನು ತಿಳಿಸುತಿದ್ದೀರಿ ಅನಂತಿನಂತವಂದನೆಗಳು.ರಾಮಾಂಜನೇಯರ ಆಲಿಂಗನ ಕೇಳಿ ದ್ದೆವು.ವೇದವ್ಯಾಸರು ಮಧ್ವಾಚಾರ್ಯರನ್ನು ಆಲಂಗಿಸಿದ ವಿಷಯ ಕೇಳಿದ್ದು ಕಣ್ಣಿನ ಮುಂದೆ ಕಾಣಿಸೀದಂತಿತ್ತು ಆನಂದ ವಾಯಿತು.