Upanyasa - VNU262

MV62 ಋಜುಗಳ ಶ್ರೇಷ್ಠ ಜ್ಞಾನ

02/10/2016

ವ್ಯಾಸಾಶ್ರಮದಲ್ಲಿ ವೇದವ್ಯಾಸದೇವರ ಸೇವೆ ಮಾಡುತ್ತ, ಆಚಾರ್ಯರು ಒಮ್ಮೆ ಏಕಾಂತದಲ್ಲಿ ಗುರುಗಳ ಬಳಿ ಅಧ್ಯಯನಕ್ಕಾಗಿ ಬರುತ್ತಾರೆ. ವೇದವ್ಯಾಸದೇವರು ಸಕಲವನ್ನೂ ತಿಳಿದ ಸರ್ವಜ್ಞಾಚಾರ್ಯರಿಗೆ ಮತ್ತೆ ಸಕಲದ ಉಪದೇಶವನ್ನೂ ಮಾಡುತ್ತಾರೆ. 

ಈ ಸಂದರ್ಭದಲ್ಲಿ ಸಮಗ್ರ ಮಧ್ವಶಾಸ್ತ್ರದಲ್ಲಿಯೇ ಅಪೂರ್ವವಾದ ತತ್ವವನ್ನು ಶ್ರೀ ನಾರಾಯಣಪಂಡಿತಾಚಾರ್ಯರು ತಿಳಿಸಿದ್ದಾರೆ. ಋಜುಗಳು ಅಂದರೆ ಯಾರು, ಅವರ ಜ್ಞಾನ ಹೇಗಿರುತ್ತದೆ, ಸರ್ವಜ್ಞರಾದ ಬಳಿಕ ಅಧ್ಯಯನ ಯಾಕೆ ಬೇಕು, ಮಾಡಿದ ಅಧ್ಯಯನಕ್ಕೆ ಫಲವಿದೆಯೇ ಎಂಬೆಲ್ಲ ಪ್ರಶ್ನೆಗಳಿಗೆ ಅದ್ಭುತವಾದ ಉತ್ತರವನ್ನು ಶ್ರೀ ನಾರಾಯಣಪಂಡಿತಾಚಾರ್ಯರು ನೀಡಿದ್ದಾರೆ. ಆ ಪವಿತ್ರವಚನಗಳ ಅನುವಾದ ಇಲ್ಲಿದೆ. 

Play Time: 52:09

Size: 9.17 MB


Download Upanyasa Share to facebook View Comments
3551 Views

Comments

(You can only view comments here. If you want to write a comment please download the app.)
 • Shantha.raghothamachar,Bangalore

  10:46 AM, 26/09/2017

  ನಮಸ್ಕಾರ ಗಳು.ಶಾಸ್ತ್ರ ದರಹಸ್ಯಗಳನ್ನು ಹೇಳಬಾರದೆಂಬ ಆಜ್ಞೆ ಯಿದೆ ಯೇ?ಯೋಗ್ಯತೆ ಇದ್ದವರು ತಿಳಿಯಬಹುದಲ್ಲಾ?
 • Jayashree Karunakar,Bangalore

  10:38 PM, 21/08/2017

  ಗುರುಗಳೆ ಉದಾಹರಣೆಯೊಂದಿಗೆ ವಿವರಿಸುವ ತಮ್ಮ ತಾಳ್ಮೆಗೆ ಮತ್ತು ನಮಗೆ ಇನ್ನೊಮ್ಮೆ ಅಥ೯ ಮಾಡಿಸುವ ರೀತಿ ಅದ್ಬುತವಾಗಿದೆ
 • Jayashree Karunakar,Bangalore

  3:24 PM , 18/08/2017

  ಗುರುಗಳೆ 
  ದ್ವಾರಕೆಯಲ್ಲಿ ಮೊದಲೇ ರತ್ನ ಕನಕಗಳು ಪೂಣ೯ ಪ್ರಮಾಣದಲ್ಲಿತ್ತು.ಭಗವಂತ ನರಕಾಸುರನನ್ನು ಸಂಹಾರ ಮಾಡಿದ ಮೇಲೆ ಇನ್ನಷ್ಟು ರತ್ನ ಕನಕ ಗಳನ್ನು ದ್ವಾರಕೆಯಲ್ಲಿ ಸೇರಿಸಿದ . ಮೊದಲಿಗಿಂತ ಪ್ರಮಾಣ ಈಗ ಜಾಸ್ತಿ ಆಗಲೇ ಬೇಕಲ್ಲವೆ. ಅಂದರೆ ಈಗಿನದಕ್ಕಿಂತ ಮುಂಚಿನ ಪ್ರಮಾಣ ಕಮ್ಮಿ ಇತ್ತು ಅಂತ ಅಲ್ಲವೆ.

  Vishnudasa Nagendracharya

  ನರಕನನ್ನು ಕೊಂದ ಬಳಿಕ ದ್ವಾರಕೆಯಲ್ಲಿ ಪರಮಾತ್ಮ ರತ್ನಕನಕಗಳನ್ನು ಸೇರಿಸಿದ. ಅಂದರೆ ಹಿಂದೆ ಇದ್ದ ಪ್ರಮಾಣಕ್ಕಿಂತ ಈಗಿನ ಪ್ರಮಾಣ ಜಾಸ್ತಿಯಾಯಿತು ಎಂದರ್ಥ. ಸಂಶಯವೇ ಇಲ್ಲ. 
  
  ಪಂಡಿತಾಚಾರ್ಯರು ಹೇಳುತ್ತಿರುವದು ಇದನ್ನಲ್ಲ. 
  
  ಒಂದು ತಂಬಿಗೆ ಪೂರ್ತಿಯಾಗಿ ಹಾಲಿದೆ. ಆ ತಂಬಿಗೆ ಮತ್ತೆ ಹಾಲನ್ನು ಹಾಕಲು ಸಾಧ್ಯವಿಲ್ಲ. ಹಾಕಿದರೆ ಚಲ್ಲುತ್ತದೆ. ಆದರೆ, ಭಗವಂತ ಹಾಗೆ ಮಾಡಿದ. ಪೂರ್ಣವಾದ ತಂಬಿಗೆಗೆ ಮತ್ತೆ ಹಾಲನ್ನು ತುಂಬಿಸಿದ. ತುಂಬಿಸಿದರೂ ಹೊರ ಚಲ್ಲದಂತೆ ಮಾಡಿದ. 
  
  ಮೊದಲಿಗೆ ತುಂಬಿದ್ದನ್ನು ಮತ್ತೆ ತುಂಬಿಸಲು ಸಾಧ್ಯವಿಲ್ಲ. ತುಂಬಿಸಿದರೂ ಅದು ಅದರಿಂದ ಚಲ್ಲದಂತೆ ಮಾಡಲು ಸಾಧ್ಯವಿಲ್ಲ. 
  
  ಪರಮಾತ್ಮ ಎರಡನ್ನೂ ಮಾಡಿದ. ಶ್ರೀಕೃಷ್ಣ ರತ್ನಕನಕಗಳಿಂದ ತುಂಬಿದ್ದ ದ್ವಾರಕೆಯನ್ನು ಮತ್ತೆ ರತ್ನಕನಕಗಳಿಂದ ತುಂಬಿಸಿದ. ವೇದವ್ಯಾಸದೇವರು ಜ್ಞಾನದಿಂದ ತುಂಬಿದ್ದ ಶ್ರೀಮದಾಚಾರ್ಯರಿಗೆ ಮತ್ತೆ ಜ್ಞಾನವನ್ನು ನೀಡಿದರು. ತುಂಬಿದ ವಸ್ತುಗಳನ್ನು ಮತ್ತೆ ತುಂಬಿದರೂ ಅವು (ದ್ವಾರಕಾ ಮತ್ತು ಆಚಾರ್ಯರು) ಹೊಸದಾಗಿ ಬಂದದ್ದನ್ನು ಕಳೆದುಕೊಳ್ಳದಂತೆ ಮಾಡಿದ ನಮ್ಮ ದೇವರು. 
  
  ಉಪನ್ಯಾಸವನ್ನು ಮತ್ತೊಮ್ಮೆ ಕೇಳಿ, ಸ್ಪಷ್ಟವಾಗಿ ಅರ್ಥವಾಗುತ್ತದೆ.