02/10/2016
ನಾವೆಲ್ಲರೂ ಹೋಗುವ ಬದರಿಗೆ ವಿಶಾಲಾ ಬದರೀ ಎಂದು ಹೆಸರು. ಇಲ್ಲಿ ನರ ನಾರಾಯಣರ ಪ್ರತಿಮೆಗಳಿವೆ. ವೇದವ್ಯಾಸದೇವರು ವಾಸ ಮಾಡಿಕೊಂಡಿರುವ ಬದರೀ ವ್ಯಾಸಬದರೀ ಅಥವಾ ಉತ್ತರಬದರೀ. ಇದು ಸರಸ್ವತೀನದಿಯ ತೀರದಲ್ಲಿದೆ. ನರನಾರಾಯಣರು ಸಾಕ್ಷಾತ್ತಾಗಿ ವಾಸವಾಗಿದ್ದು ತಪಸ್ಸು ಮಾಡುತ್ತಿರುವ ಬದರೀ ಮಹಾಬದರೀ. ವಿಶಾಲಾ ಬದರಿಯಿಂದ ವ್ಯಾಸಬದರಿಗೆ ಬಂದ ಶ್ರೀಮದಾಚಾರ್ಯರು ವೇದವ್ಯಾಸದೇವರನ್ನು ಪ್ರಾರ್ಥಿಸಿ ಅವರೊಡನೆ ಮಹಾಬದರಿಕಾಶ್ರಮಕ್ಕೆ ಹೋಗುತ್ತಾರೆ, ಸಾಕ್ಷಾತ್ ಶ್ರೀಮನ್ನಾರಾಯಣನನ್ನು ಕಾಣಲು. ಆ ಪ್ರಸಂಗದ ವಿವರಣೆ ಇಂದಿನ ಉಪನ್ಯಾಸದಲ್ಲಿದೆ.
Play Time: 31:50
Size: 5.63 MB