Upanyasa - VNU267

MV67 ಅನೇಕ ಅವತಾರಗಳ ಚಿಂತನೆ

02/10/2016

 ಉಪನ್ಯಾಸದಲ್ಲಿ ಕಲ್ಕೀ ಮಹಿದಾಸ, ಯಜ್ಞ, ಕಪಿಲ, ಧನ್ವಂತರಿ, ಮೋಹಿನೀ, ದತ್ತಾತ್ರೇಯ, ಸನತ್ಕುಮಾರ, ಋಷಭ, ಹಂಸ, ಹರಿ, ಕೃಷ್ಣ, ನಾರಾಯಣನ ಅವತಾರಗಳ ಚಿಂತನೆಯೊಂದಿಗೆ ಪರಮಾತ್ಮನ ಮಹಾಮಾಹಾತ್ಮ್ಯದ ಚಿಂತನೆಯಿದೆ. 

ಶ್ರೀಮದಾಚಾರ್ಯರು ಮಹಾಬದರಿಕಾಶ್ರಮದಲ್ಲಿರುವ ನಾರಾಯಣನ ಬಳಿಗೆ ಸಾಷ್ಟಾಂಗವೆರಗುತ್ತಾರೆ. ಆ ನಾರಾಯಣರೂಪದ ಭಗವಂತ ತನ್ನದೇ ಮತ್ತೊಂದು ರೂಪವಾದ ವೇದವ್ಯಾಸರೂಪದೊಂದಿಗೆ ಲೀಲಾಭಾಷಣವನ್ನು ನಡೆಸುತ್ತಾನೆ. ಆ ಬಳಿಕ ಶ್ರೀಮದಾಚಾರ್ಯರನ್ನು ಪ್ರೇಮದಿಂದ ಆದರಿಸಿ ಮೂರೂ ಜನರು ಕುಳಿತುಕೊಂಡು ಸಂವಾದವನ್ನು ಆರಂಭಿಸುತ್ತಾರೆ. 

ಮುಂದಿನ ಉಪನ್ಯಾಸದಲ್ಲಿ ವ್ಯಾಸ-ನಾರಾಯಣ-ಮಧ್ವರ ಸಂವಾದದ ಉಪನ್ಯಾಸವಿದೆ. ಪ್ರತಿಯೊಬ್ಬ ಮಾಧ್ವ ಕೇಳಲೇಬೇಕಾದ, ಕೇಳಿ ಎಚ್ಚರಕ್ಕೆ ಬರಬೇಕಾದ ವಿಷಯವನ್ನು ಶ್ರೀ ನಾರಾಯಣಪಂಡಿತಾಚಾರ್ಯರು ತಿಳಿಸುತ್ತಾರೆ. 

Play Time: 61:05

Size: 11.48 MB


Download Upanyasa Share to facebook View Comments
2639 Views

Comments

(You can only view comments here. If you want to write a comment please download the app.)
 • Jyothi Gayathri,Harihar

  7:46 PM , 10/12/2020

  ಶ್ರೀ ಗುರುಭ್ಯೋ ನಮಃ 🙏🙏🙏🙏🙏
 • Shantha.raghothamachar,Bangalore

  8:25 PM , 28/09/2017

  ನಮಸ್ಕಾರ ಗಳು ಬದರಿಕ್ಷೇತ್ರ ನಾಲ್ಕು ಯುಗದಲ್ಲಿ ಯೂ ಇದೆಯಾ? ಯಾವ ಯುಗದದಲ್ಲಿ ನರ ನಾರಾಯಣ ಹರಿ ಕೃಷ್ಣ ರು ಯಮನಮಕ್ಕಳಾಗಿ ಹುಟ್ಟಿದ ರು?
 • Jayashree Karunakar,Bangalore

  4:14 PM , 21/08/2017

  ಗುರುಗಳೆ 
  ೧. ತ್ರೇತಾಯುಗ,ಕೃತಯುಗ,ದ್ವಾಪರಯುಗಗಳಲ್ಲಿದ್ದಂತಹ ಪಾಪಿಗಳು ಮಾಡಿದ ಪಾಪ ಕಮ೯ಗಳು ಕಲಿಯ ಪ್ರಭಾವದಿಂದ ಮಾಡಿದ ಕಮ೯ಗಳೆ ಅಥವ ಅದು ಅವರ ಸ್ವಭಾವವೇ ?
  
  ೨.ಮತ್ತು ನಾವು ಕೇಳುತ್ತೇವಲ್ಲ ರಾಮರಾಜ್ಯದಲ್ಲಿ ಯಾರೂಬ್ಬರಿಗೂ ದುಷ್ಟ ಬುದ್ಧಿಯಿರಲಿಲ್ಲ.ಎಲ್ಲವೂ ಸಮೃದ್ಧವಾಗಿದ್ದ ಕಾಲವೆಂದು.ಸಾಕ್ಷಾತ್ತಾಗಿ ಭಗವಂತನೇ ಅವತಾರಮಾಡಿ ಬಂದಂತಹ ಯುಗದಲ್ಲಿ ಅಂತಹ ದುಷ್ಟಬುದ್ಧಿಯ ರಾಕ್ಷಸರು ಇರಲು ಹೇಗೆ ಸಾಧ್ಯ ಗುರುಗಳೆ.
  
  ೩. ಕಲಿಯುಗದಲ್ಲಿ ಮಾಡಿದ ಪಾಪ ಕಮ೯ಗಳಿಗೆ ಮತ್ತೆ ಕಲಿಯುಗದಲ್ಲಿಯೇ ಜನ್ಮತಾಳುತ್ತಾರ ಗುರುಗಳೆ.

  Vishnudasa Nagendracharya

  1. ಜೀವರಲ್ಲಿ ನಿಂತು ದುಷ್ಟಕರ್ಮಗಳನ್ನು ಮಾಡಿಸುವ ಕಲಿ ಕಾಲನೇಮಿ ಮೊದಲಾದ ದುಷ್ಟ ದೈತ್ಯರು ಎಲ್ಲ ಯುಗಗಳಲ್ಲಿಯೂ ಇರುತ್ತಾರೆ. ಅವರೇ ಸಜ್ಜನರಲ್ಲಿ ನಿಂತು ದುಷ್ಟಕರ್ಮ ಮಾಡಿಸುತ್ತಾರೆ. ಹೀಗಾಗಿ ಕಲಿಯುಗದಲ್ಲಿ ಮಾತ್ರ ಕಲಿ ಕಾರ್ಯವನ್ನು ಮಾಡಿಸುತ್ತಾನೆ, ಇತರ ಯುಗಗಳಲ್ಲಿ ಮಾಡಿಸುವದಿಲ್ಲ ಎಂದಿಲ್ಲ. ಇತರ ಯುಗಗಳಲ್ಲಿಯೂ ಸಕಲ ದುಷ್ಟಕರ್ಮಗಳಿಗೆ ಅವನೇ ಕಾರಣ. ಮತ್ತು ಕೇವಲ ಭೂಮಿಯಲ್ಲ, ಬೇರೆಯ ಲೋಕಗಳಲ್ಲಿಯೂ ಅವನು ಜೀವರ ಮೇಲೆ ಪ್ರಭಾವ ಬೀರಿ ದುಷ್ಕರ್ಮಗಳನ್ನು ಮಾಡಿಸುತ್ತಾನೆ. 
  
  ದುಷ್ಟಕರ್ಮ ಮಾಡುವದು ಸ್ವಭಾವದಲ್ಲಿಯೇ ಇದ್ದರೆ ಅವನು ನಿಶ್ಚಿತವಾಗಿ ಸಾತ್ವಿಕಜೀವನಲ್ಲ. ಸಾತ್ವಿಕ ಜೀವರು ಕಲಿಯ ಪ್ರಭಾವದಿಂದ ದುಷ್ಕರ್ಮಗಳನ್ನು ಮಾಡುತ್ತಾರೆ. ಇತರರು ಸ್ವಾಭಾವಿಕವಾಗಿ ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಕಲ್ಯಾದಿಗಳು ನಿಂತು ಅವರಲ್ಲಿ ಇನ್ನೂ ಹೆಚ್ಚಿನ ದುಷ್ಕರ್ಮಗಳನ್ನು ಮಾಡಿಸುತ್ತಾರೆ. 
  
  2. ರಾಮರಾಜ್ಯದ ಮಹತ್ತರ ಸಮಯಕಾಲದಲ್ಲಿ ದುಷ್ಟರು ಹುಟ್ಟಲೇ ಇಲ್ಲ. ಕಡೆಯ ಕಾಲದಲ್ಲಿ ಭಗವಂತನ ಇಚ್ಛೆಯಂತೆ ಸುರಾಣಕ ಮುಂತಾದ ದೈತ್ಯರು ಹುಟ್ಟಿದರು. ಮಧ್ಯದಲ್ಲಿ ಶಂಬೂಕ ಮೊದಲಾದ ಒಂದಿಬ್ಬರು ದುಷ್ಟರು ಆಗಿ ಹೋದರು. 
  
  3. ಕಲಿಯುಗದಲ್ಲಿ ಪಾಪ ಮಾಡಿ ಕಲಿಯುಗದಲ್ಲಿಯೇ ಹುಟ್ಟಬೇಕೆಂಬ ನಿಯಮವಿಲ್ಲ. ಪಾಪಕ್ಕೆ ತಕ್ಕ ದುಷ್ಫಲವನ್ನು ನರಕದಲ್ಲಿ ಅನುಭವಿಸಿ ಇನ್ನೂ ಫಲ ಉಳಿದರೆ ಆ ಫಲಕ್ಕೆ ತಕ್ಕಂತೆ ಇತರ ಯುಗಗಳಲ್ಲಿಯೂ ಹುಟ್ಟಿ ಬರಬಹುದು.