02/10/2016
ಬ್ರಹ್ಮಸೂತ್ರಭಾಷ್ಯದ ರಚನೆಯನ್ನು ಮಾಡು ಎಂಬ ನಾರಾಯಣನ ಆದೇಶವನ್ನು ಹೊತ್ತು ಶ್ರೀಮದಾಚಾರ್ಯರು ವೇದವ್ಯಾಸದೇವರ ಜೊತೆಯಲ್ಲಿ ಮಹಾಬದರಿಕಾಶ್ರಮದಿಂದ ವ್ಯಾಸಬದರಿಕಾಶ್ರಮಕ್ಕೆ ಹಿಂತಿರುಗುತ್ತಾರೆ. ಅಲ್ಲಿ ವೇದವ್ಯಾಸದೇವರಿಂದ ಶ್ರೇಷ್ಠ ಉಪದೇಶಗಳನ್ನು ಪಡೆದು ಸೂತ್ರಭಾಷ್ಯದ ರಚನೆಗಾಗಿ ಹೊರಡಲು ಸಿದ್ಧರಾಗಿ ಗುರುಗಳಿಗೆ ಸಾಷ್ಟಾಂಗ ನಮಸ್ಕಾರವನ್ನೆರಗುತ್ತಾರೆ. ಶ್ರೀಮದಾಚಾರ್ಯರನ್ನು ಪ್ರೇಮದಿಂದ ಕಾಣುವ ವೇದವ್ಯಾಸದೇವರು ಆಚಾರ್ಯರ ಮನಸ್ಸಿನಲ್ಲಿ ಸದಾ ನೆಲೆಯೂರಿ ದರ್ಶನವನ್ನು ನೀಡುವ ವರವನ್ನು ನೀಡುತ್ತಾರೆ. ಆಚಾರ್ಯರು ಹಿಂತಿರುಗಿ ಬಂದು ವಿಶಾಲಾ ಬದರಿಯಲ್ಲಿ ಅಗ್ನಿಶರ್ಮ ಮುಂತಾದ ಬ್ರಾಹ್ಮಣೋತ್ತಮರು ನೀಡಿದ ಭಿಕ್ಷೆಯನ್ನು ಸ್ವೀಕರಿಸುತ್ತಾರೆ. ಆ ಬಳಿಕ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಜಗತ್ತಿನ ಸಮಸ್ತ ಸಜ್ಜನರ ಭಾಗ್ಯೋದಯದಿಂದ ಶ್ರೀಮತ್ಸೂತ್ರಭಾಷ್ಯದ ರಚನೆಗೆ ಮುಂದಾಗುತ್ತಾರೆ. ಆ ಪರಮಮಂಗಳ ಭಾಗ ಉಪನ್ಯಾಸ ಮುಂದಿನದು.
Play Time: 61:17
Size: 13.45 MB