Upanyasa - VNU296

MV96 ಭಗವಂತನ ವರ್ಣನೆ

02/10/2016

ಏಕಾದಶಸರ್ಗದ 64ನೆಯ ಶ್ಲೋಕದಿಂದ 77ನೆಯ ಶ್ಲೋಕದವರೆಗಿನ ಅರ್ಥಾನುಸಂಧಾನ. 

Play Time: 50:51

Size: 8.91 MB


Download Upanyasa Share to facebook View Comments
3306 Views

Comments

(You can only view comments here. If you want to write a comment please download the app.)
 • Shantha.raghothamachar,Bangalore

  3:15 PM , 18/10/2017

  ನಮಸ್ಕಾರ ಗಳು
 • Jayashree Karunakar,Bangalore

  9:14 PM , 01/09/2017

  ಅಂದರೆ ಗುರುಗಳೆ ಇಂದ್ರ, ರುದ್ರಾದಿದೇವತೆಗಳಿಗೆ ಇನ್ನೂ ಮೋಕ್ಷ ದೊರೆತಿಲ್ಲವೆ.
  
  ಮತ್ತು ಮೋಕ್ಷದಲ್ಲಿ ಎಲ್ಲ ವಗ೯ದವರೂ ಇರುತ್ತಾರ ?

  Vishnudasa Nagendracharya

  ಅಧಿಕಾರದಲ್ಲಿರುವ ಯಾವ ದೇವತೆಗಳಿಗೂ ಇನ್ನು ಮೋಕ್ಷ ದೊರೆತಿಲ್ಲ. 
  
  ಬ್ರಹ್ಮದೇವರು, ಗರುಡದೇವರು ಶೇಷದೇವರು, ಇಂದ್ರದೇವರು ಮುಂತಾದ ಅನಂತ ಜೀವರು ಈ ಬ್ರಹ್ಮಕಲ್ಪ ಮುಗಿಯುತ್ತಿದ್ದಂತೆ ಮುಕ್ತರಾಗುತ್ತಾರೆ. 
  
  ಈಗಿನ ವಾಯುದೇವರು ಮುಕ್ತರಾಗುವದಿಲ್ಲ. ಮತ್ತೆ ಬ್ರಹ್ಮದೇವರಾಗಿ ಮುಂದಿನ ಬ್ರಹ್ಮಕಲ್ಪದಲ್ಲಿ ಹುಟ್ಟಿಬಂದು ಮುಕ್ತರಾಗುತ್ತಾರೆ. ಹಾಗೆ ರುದ್ರದೇವರು ಶೇಷದೇವರಾಗಿ ಹುಟ್ಟಿಬಂದು ಸಾಧನೆ ಮಾಡಿ ಮುಕ್ತರಾಗುತ್ತಾರೆ. 
  
  ಮೋಕ್ಷದಲ್ಲಿ ಬ್ರಹ್ಮದೇವರಿಂದ ಹಿಡಿದು ತೃಣಜೀವದ ವರೆಗೆ ಎಲ್ಲರೂ ಇದ್ದಾರೆ.
  
  ರಾಜಸರು ತಾಮಸರು ಇರುವದಿಲ್ಲ. 
  
  
 • Jayashree Karunakar,Bangalore

  5:30 PM , 01/09/2017

  ಗುರುಗಳೆ
  ೧. ಕ್ಷತ್ರಿಯರು ಯುದ್ಧ ಮಾಡಿ ಪ್ರಜೆಗಳನ್ನು ಕಾಪಾಡಿದಕ್ಕಾಗಿ ಅದೇ ರೀತಿಯ ಒಳ್ಳೆಯ ಫಲ ಪಡೆದಂತೆ, ಈಗಿನ ನಮ್ಮ ಭಾರತದ ಗಡಿಯಲ್ಲಿರುವ ಸ್ಯೆನಿಕರೂ ಅದೇ ರೀತಿಯ ಫಲವನ್ನು ಪಡೆಯುತ್ತಾರೆಯೆ ?
  
  ೨. ದೇವತೆಗಳೂ ಸಹ ಸಾಧನೆ ಮಾಡಿ ಅಪರೋಕ್ಷ ಜ್ಞಾನವಾದ ಬಳಿಕ, ಮೋಕ್ಷವನ್ನು ಪಡೆದು, ನಂತರವೆ ಅವರಿಗೆ ದೇವತೆಯರ ಪದವಿ ದೊರೆತದ್ದ ಗುರುಗಳೆ ?

  Vishnudasa Nagendracharya

  1. ಅತ್ಯವಶ್ಯವಾಗಿ ನಮ್ಮ ಸೈನಿಕರು ಮಹಾಫಲವನ್ನು ಪಡೆಯುತ್ತಾರೆ. ದೇಶಕ್ಕಾಗಿ ವೀರಮರಣವನ್ನಪ್ಪುವದು ದೇವರ ಸಾಕ್ಷಾತ್ಕಾರವನ್ನು ಕರುಣಿಸುವ ಮಹಾಸತ್ಕರ್ಮ. 
  
  2. ಮೋಕ್ಷದ ನಂತರ ಜಗತ್ತಿನ ಯಾವ ವಿಷಯದಲ್ಲಿಯೂ ಜೀವರು ಆಸಕ್ತರಾಗುವದಿಲ್ಲ. (ಜಗತ್ತನ್ನು ಬಿಡುವದೇ ಮೋಕ್ಷವಲ್ಲವೇ?) ದೇವತೆಗಳು ಮೊದಲಿಗೆ ಸಾಧನೆ ಮಾಡಿ ಅಪರೋಕ್ಷಜ್ಞಾನ ಗಳಿಸುತ್ತಾರೆ. ಆ ನಂತರ ತಮ್ಮತಮ್ಮ ದೇವತಾಪದವಿ ಪಡೆಯುತ್ತಾರೆ. ಆ ನಂತರ ಮೋಕ್ಷವನ್ನು ಪಡೆದು ಅನಂತ ಕಾಲದವರೆಗೆ ಸುಖಿಸುತ್ತಾರೆ.