Upanyasa - VNU309

MV109 ಅರುಣೋದಯದಿಂದ ಸೂರ್ಯೋದಯದವರೆಗೆ

02/10/2016

1. ಶ್ರೀಮದಾಚಾರ್ಯರ ಸಂನ್ಯಾಸಧರ್ಮನಿಷ್ಠೆ

ಹದಿನಾಲ್ಕನೆಯ ಸರ್ಗದಲ್ಲಿರುವ ಆಚಾರ್ಯರ ದಿನಚರಿಯ ವರ್ಣನೆ ಕೇವಲ ವಿಷ್ಣುಮಂಗಲದ ದೇವಸ್ಥಾನದಲ್ಲಿದ್ದಾಗಿನ ದಿನಚರಿಯಲ್ಲ. ಅದು ಅವರ ಇಡಿಯ ಜೀವನದ ದಿನಚರಿ. ಆಚಾರ್ಯರ ದಿನಚರಿಯಲ್ಲಿದ್ದದ್ದು ಮೂರೇ ಅಂಶಗಳು — ಭಗವದ್‌ಧ್ಯಾನ, ಶಾಸ್ತ್ರವ್ಯಾಖ್ಯಾನ, ಭಗವತ್‌ಪೂಜೆ ಎನ್ನುವದನ್ನು ತಿಳಿಸಿ ಆಚಾರ್ಯರ ಸಂನ್ಯಾಸಧರ್ಮನಿಷ್ಠೆಯನ್ನು ಇಲ್ಲಿ ಚಿಂತಿಸಲಾಗಿದೆ.

2. ಶ್ರೀಮದಾಚಾರ್ಯರ ಸ್ನಾನ-ಧ್ಯಾನಗಳ ಸಮಯ

ಅತ್ತ ಅರುಣೋದಯ ಇತ್ತ ಆಚಾರ್ಯರ ಸ್ನಾನ, ಇದು ಆಚಾರ್ಯರು ಇಡಿಯ ಜೀವನದಲ್ಲಿ ಆಚರಿಸಿದ ಧರ್ಮ. ಸಂನ್ಯಾಸಿಗಳ ಅರುಣೋದಯಕಾಲದ ಸ್ನಾನದ ಮಹತ್ತ್ವಘಿವನ್ನು ತಿಳಿಸಿ, ಆಚಾರ್ಯರು, ಅರುಣೋದಯ ಕಾಲದಿಂದ ಸೂರ್ಯೋದಯವಾಗುವವರೆಗೆ, ಶಿಷ್ಯರು ಪಾಠಕ್ಕಾಗಿ ಸಿದ್ಧರಾಗುವವರೆಗೆ ಭಗವದ್‌ಧ್ಯಾನಾಸಕ್ತರಾಗಿ ಇರುತ್ತಿದ್ದ ಘಟನೆಯ ವಿವರ ಇಲ್ಲಿದೆ.

3. ಮಧ್ವಶಿಷ್ಯರ ಧರ್ಮನಿಷ್ಠೆ

ಶ್ರೀಮದಾಚಾರ್ಯರು ಕೇವಲ ತಾವು ಧರ್ಮಾಸಕ್ತರಾದದ್ದಷ್ಟೇ ಅಲ್ಲ. ತಮ್ಮ ಶಿಷ್ಯರಿಂದಲೂ ಶ್ರೇಷ್ಠ ಸಂನ್ಯಾಸಧರ್ಮಗಳ ಆಚರಣೆಯನ್ನು ಮಾಡಿಸುತ್ತಿದ್ದರು. ಆ ಮಧ್ವಶಿಷ್ಯರು ಶ್ರದ್ಧೆಯಿಂದ ಸ್ನಾನ-ಜಪ-ಧ್ಯಾನಗಳನ್ನು ಆಚರಿಸುತ್ತಿದ್ದ ಪರಿಯನ್ನು ಇಲ್ಲಿ ವಿವರಿಸಲಾಗಿದೆ.

4. ಮಧ್ವ-ಪ್ರಶಿಷ್ಯರ ಗುರುಭಕ್ತಿ

ಶ್ರೀಮದಾಚಾರ್ಯರ ಸಂನ್ಯಾಸಿಶಿಷ್ಯರನ್ನು ಸೇವೆ ಮಾಡುತ್ತಿದ್ದ ಪ್ರಶಿಷ್ಯರ ಗುರುಭಕ್ತಿಯನ್ನು ಗುರುಸೇವೆಯನ್ನು ಇಲ್ಲಿ ವರ್ಣಿಸಲಾಗಿದೆ. ಶಿಷ್ಯನಾದವನು ಹೇಗಿರಬೇಕು ಎನ್ನುವದನ್ನು ನಮಗಿಲ್ಲಿ ಪಂಡಿತಾಚಾರ್ಯರು ಕಲಿಸುತ್ತಾರೆ. ಟೀಕಾಕೃತ್ಪಾದರ ವಚನಗಳ ಅರ್ಥಚಿಂತನೆಯೊಂದಿಗೆ ಆ ಮಾತುಗಳ ವಿವರಣೆ ಇಲ್ಲಿದೆ.

5. ನಿರ್ಮಾಲ್ಯವಿಸರ್ಜನೆ

ಆಚಾರ್ಯರ ಸಂನ್ಯಾಸಿ ಶಿಷ್ಯರೊಬ್ಬರು ಸ್ನಾನ-ಜಪ-ಧ್ಯಾನಗಳನ್ನು ಮುಗಿಸಿ ಆಚಾರ್ಯರು ಧ್ಯಾನಮಾಡುತ್ತ ಕುಳಿತಾಗ ಅವರ ಬಳಿಯಲ್ಲಿ , ದೀಪಗಳನ್ನು ಬೆಳಗಿಸಿ ಆ ಬೆಳಕಿನಲ್ಲಿ ನಿರ್ಮಾಲ್ಯತುಳಸೀಪುಷ್ಪಗಳನ್ನು ಆದರದಿಂದ ವಿಸರ್ಜಿಸುತ್ತಿದ್ದರ ವಿವರಣೆ ಇಲ್ಲಿದೆ. ಶ್ರೀಮದಾಚಾರ್ಯರು ಹಿಂದಿನ ದಿನ ಭಕ್ತಿಯಿಂದ ಅರ್ಚಿಸಿದ ಆ ನಿರ್ಮಾಲ್ಯಪುಷ್ಪಗಳಲ್ಲಿ ದೇವತಾಸನ್ನಿಧಾನದ ಪ್ರತೀಕವಾಗಿ ಅಮೃತ ತುಂಬಿರುತ್ತಿದ್ದ ವಿಸ್ಮಯದ ಘಟನೆಯ ವಿವರಣೆಯೊಂದಿಗೆ ಈ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ.

Play Time: 54:39

Size: 9.57 MB


Download Upanyasa Share to facebook View Comments
3631 Views

Comments

(You can only view comments here. If you want to write a comment please download the app.)
 • Prakash Mutgi,Bangalore

  11:04 AM, 14/02/2021

  ಬಹಳ ಸೊಗಸಾಗಿದೆ
 • Ramagoud Patil,Belagavi

  6:03 PM , 28/01/2018

  ನಮಸ್ಕಾರ
 • Shantha.raghothamachar,Bangalore

  12:39 PM, 25/11/2017

  ನಮಸ್ಕಾರ ಗಳು