02/10/2016
1. ಸಭೆಯಲ್ಲಿ ಮಧ್ವೋದಯ ಅರುಣೋದಯಕಾಲಕ್ಕೆ ಸ್ನಾನವನ್ನು ಮಾಡಿ ಕಾವಿಶಾಟಿಯ ಪರದೆಯ ಹಿಂಬದಿಯಲ್ಲಿ ಸೂರ್ಯೋದಯದವರೆಗೆ ಧ್ಯಾನಾಸಕ್ತರಾಗಿದ್ದ ಶ್ರೀಮದಾಚಾರ್ಯರು ಶಿಷ್ಯರೆಲ್ಲರೂ ಪಾಠಕ್ಕಾಗಿ ಸಿದ್ಧರಾಗಿ ಆಚಾರ್ಯರ ಪ್ರತೀಕ್ಷೆ ಮಾಡುತ್ತ ಕುಳಿತಿದ್ದಾಗ ಆ ಕೆಂಪಗಿನ ಪರದೆಯನ್ನು ಸರಿಸಿ ಪಾಠ ಹೇಳಲು ಬರುತ್ತಾರೆ. ಬಂಗಾರದ ಮೈಬಣ್ಣದ ಆಚಾರ್ಯರು ಆ ಅರುಣವಸವನ್ನು ಸರಿಸಿ ಬಂದರೆ ಅರುಣೋದಯದ ನಂತರ ಉದಯಿಸಿ ಬರುವ ಸೂರ್ಯನ ಹಾಗೆ ಕಂಡರು ಶಿಷ್ಯರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತ ಎಂದು ವರ್ಣಿಸುತ್ತಾರೆ ಪಂಡಿತಾಚಾರ್ಯರು. ಆ ಮನೋಜ್ಞ ಭಾಗದ ವಿವರಣೆ ಇಲ್ಲಿದೆ. 2. ಆಚಾರ್ಯರ ಪ್ರಣವೋಚ್ಚಾರಣೆ ಶ್ರೀಮದಾಚಾರ್ಯರು ಶಾಸ್ತ್ರಪಾಠ ಆರಂಭಿಸುವ ಮುನ್ನ ಮಂಗಳಾಚರಣೆಯಾಗಿ ಪ್ರಣವದ ಉಚ್ಚಾರಣೆಯನ್ನು ಮಾಡುತ್ತಿದ್ದರು. ಶ್ರೀಮದಾಚಾರ್ಯರ ಆ ಪ್ರಣವೋಚ್ಚಾರಣೆಯ ಮಹತ್ತ್ವವನ್ನು, ಪ್ರಣವದ ಮಹತ್ತ್ವವನ್ನು ಪಂಡಿತಾಚಾರ್ಯರು ನಮಗೆ ಕಿಂಚಿತ್ ತಿಳಿಸಿ ಹೇಳುತ್ತಾರೆ. ಆ ಮಹೋನ್ನತ ಭಾಗದ ಈಷತ್ ವಿವರಣೆ ಇಲ್ಲಿದೆ. 3. ಶ್ರೀಮದಾಚಾರ್ಯರ ಪಾಠಕ್ರಮ ಅಮೃತಸಮುದ್ರದಲ್ಲಿ ಮುಳುಗೆದ್ದ ಅನುಭವವನ್ನು ಸಮಗ್ರ ಶಿಷ್ಯವರ್ಗಕ್ಕೆ ನೀಡುತ್ತಿದ್ದ ಆಚಾರ್ಯರ ಪರಮಾದ್ಭುತವಾದ ವ್ಯಾಖ್ಯಾನಕ್ರಮದ ನಿರೂಪಣೆ ಇಲ್ಲಿದೆ. ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಅನುಭವದ ನುಡಿಗಳ ಉಲ್ಲೇಖದೊಂದಿಗೆ. 4. ಪಾಠಕಾಲದಲ್ಲಿ ಪ್ರಶ್ನೋತ್ತರ ಬ್ರಾಹ್ಮಣರು ಬೇಡಿದ್ದನ್ನೆಲ್ಲ ನೀಡುತ್ತಿದ್ದ ಕರ್ಣನ ಹಾಗೆ ಶಿಷ್ಯರ ಪ್ರಶ್ನೆಗೆ ಉತ್ತರಗಳನ್ನು, ಆಕ್ರಮಣ ಮಾಡುವ ಎದುರಾಳಿಯ ಮೇಲೆ ಅರ್ಜುನ ಬಾಣಗಳ ಮಳೆಗೆರೆಯುತ್ತಿದ್ದ ಹಾಗೆ ಪ್ರತಿವಾದಿಗಳ ಆಕ್ಷೇಪಗಳಿಗೆ ಪರಿಹಾರವನ್ನು ಆಚಾರ್ಯರು ಬೇಸರವಿಲ್ಲದೆ ನೀಡುತ್ತಿದ್ದರ ವಿವರಣೆಯಿಲ್ಲಿದೆ. ಶಾಸ್ತ್ರಾಧ್ಯಯನದ ಮಹತ್ತ್ವವನ್ನು ಚಿಂತಿಸಿ ಆಚಾರ್ಯರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ.
Play Time: 56:26
Size: 9.87 MB