Upanyasa - VNU312

MV112 ನಿರ್ಮಾಲ್ಯಾಭಿಷೇಕ

02/10/2016

1. ಶ್ರೀಮದಾಚಾರ್ಯರ ಪೂಜಾಸ್ನಾನ

ಸೂರ್ಯೋದಯದಿಂದ ಮಧ್ಯಾಹ್ನದವರೆಗೆ ಶಾಸ್ತ್ರಗ್ರಂಥಗಳನ್ನು ಪಾಠ ಹೇಳಿದ ಶ್ರೀಮದಾಚಾರ್ಯರು, ಸೂರ್ಯ ಪಶ್ಚಿಮದೆಡೆಗೆ ವಾಲುತ್ತಿದ್ದಂತೆ ಭಗವಂತನ ಪೂಜೆಗಾಗಿ ಸ್ನಾನಕ್ಕಾಗಿ ಉದ್ಯುಕ್ತರಾಗುತ್ತಿದ್ದರು. ಆಚಾರ್ಯರು ಸ್ನಾನಕ್ಕಾಗಿ ಸ್ವಚ್ಛ ನೀರಿನ ಆ ಸರೋವರದಲ್ಲಿ ಇಳಿದರೆ ಸಕಲ ತೀರ್ಥಾಭಿಮಾನಿದೇವತೆಗಳು ನಾಮುಂದು ತಾಮುಂದು ಎಂದು ಬಂದು ಅಲ್ಲಿ ಸನ್ನಿಹಿತರಾಗುತ್ತಿದ್ದರು ಎಂಬ ಮಾತನ್ನು ಪಂಡಿತಾಚಾರ್ಯರು ತುಂಬ ರೋಚಕವಾಗಿ ವರ್ಣಿಸುತ್ತಾರೆ. ಆ ಮಾತುಗಳ ವಿವರಣೆ ಇಲ್ಲಿದೆ.

2. ನಿರ್ಮಾಲ್ಯಾಭಿಷೇಕ
ಸ್ನಾನ ಮುಗಿಸಿ ಪರಿಶುದ್ಧ ವಸವನ್ನುಟ್ಟ ಆಚಾರ್ಯರು ಸರೋವರದ ಬಳಿಯಲ್ಲಿಯೇ ಶಿಷ್ಯರು ತಂದಿಟ್ಟಿದ್ದ ವ್ಯಾಸಮುಷ್ಟಿ ಸಾಲಿಗ್ರಾಮ ಮುಂತಾದವುಗಳಿಗೆ ನಿರ್ಮಾಲ್ಯಾಭಿಷೇಕವನ್ನು ಮಾಡಿ, ಭಕ್ತಿಯಿಂದ ನಿರ್ಮಾಲ್ಯತೀರ್ಥವನ್ನು ಪ್ರಾಶನ ಮಾಡುತ್ತಾರೆ. ಪಂಡಿತಾಚಾರ್ಯರು ಭಾವಪ್ರಕಾಶಿಕೆಯಲ್ಲಿ ತಿಳಿಸಿರುವ ನಿರ್ಮಾಲ್ಯತೀರ್ಥದ ಮಾಹಾತ್ಮ್ಯದ ವಿವರಣೆಯೊಂದಿಗೆ ಆ ಘಟನೆಯನ್ನು ಇಲ್ಲಿ ನಿರೂಪಿಸಲಾಗಿದೆ.

3. ಗೋಪೀಚಂದನ ಧಾರಣೆ

ಆಚಾರ್ಯರು ನಿರ್ಮಾಲ್ಯತೀರ್ಥದಿಂದ ಶುಭ್ರವಾದ ಗೋಪೀಚಂದನವನ್ನು ಧಾರಣೆ ಮಾಡಿ ಸರೋವರದಿಂದ ದೇವರ ಪೂಜೆಯ ಸ್ಥಳಕ್ಕೆ ತೆರಳುತ್ತಾರೆ. ಮಠವನ್ನು ಪ್ರವೇಶಿಸುವ ಮುನ್ನ ಪಾದಪ್ರಕ್ಷಾಳನೆಯನ್ನು ಮಾಡಿ ಪ್ರವೇಶಿಸುತ್ತಾರೆ. ಆ ಪಾದೋದಕವನ್ನು ಜನರು ಭಕ್ತಿಯಿಂದ ತಲೆಯ ಮೇಲೆ ಧರಿಸುತ್ತಾರೆ. ಆಚಾರ್ಯರ ಪಾದೋದಕದ ಮಾಹಾತ್ಮ್ಯದ ಚಿಂತನೆಯೊಂದಿಗೆ ಈ ಘಟನೆಗಳ ವಿವರಣೆ ಇಲ್ಲಿದೆ.

Play Time: 40:27

Size: 7.12 MB


Download Upanyasa Share to facebook View Comments
3155 Views

Comments

(You can only view comments here. If you want to write a comment please download the app.)
  • Shantha raghottamachar,Bengaluru

    12:45 PM, 28/11/2017

    ನಮಸ್ಕಾರ ಗಳು