Upanyasa - VNU314

MV114 ಮಧ್ಯಾಹ್ನದ ನಂತರ

02/10/2016

1. ಪಂಡಿತರಿಗೆ ಸುಲಭರಾಗಿದ್ದ ಆಚಾರ್ಯರು

ವಿದ್ಯಾರ್ಥಿಗಳಿಗೆ, ಪಂಡಿತರಿಗೆ, ಜಿಜ್ಞಾಸುಗಳಿಗೆ, ಆಚಾರ್ಯರು ಎಂದಿಗೂ ದುರ್ಲಭರಾಗಿರಲಿಲ್ಲ. ಯಾವ ಸಮಯದಲ್ಲಿ ಬೇಕಾದರೂ ಅವರು ಆಚಾರ್ಯರನ್ನು ಕಂಡು ತಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳಬಹುದಿತ್ತು. ಮಧ್ಯಾಹ್ನದ ಭೋಜನದ ಬಳಿಕ ಆಚಾರ್ಯರು ಪಂಡಿತರ ಮಧ್ಯದಲ್ಲಿ ಕುಳಿತು ಅನೇಕ ಶಾಸ್ತ್ರೀಯಚರ್ಚೆಗಳಿಂದ ಅವರಿಗೆ ಜ್ಞಾನವನ್ನು ನೀಡುತ್ತಿದ್ದ ಪ್ರಸಂಗದ ವಿವರಣೆ ಇಲ್ಲಿದೆ.

2. ಗೃಹಸ್ಥರ ಮೇಲೆ ಅನುಗ್ರಹ

ಶ್ರೀಮದಾಚಾರ್ಯರು ಬಡವ ಶ್ರೀಮಂತ ಎನ್ನದೆ ವಿಷ್ಣುಭಕ್ತರಾದ ಸಕಲ ಗೃಹಸ್ಥರ ಮೇಲೆ ಮಾಡುತ್ತಿದ್ದ ಅನುಗ್ರಹ, ಆ ಗೃಹಸ್ಥರಿಗೆ ಆಚಾರ್ಯರ ಬಗ್ಗೆ ಇದ್ದ ಭಕ್ತಿ-ಗೌರವ-ಕುತೂಹಲಗಳ ಸುಂದರ ಚಿತ್ರಣ ಇಲ್ಲಿದೆ. 

4. ಸೂರ್ಯಾಸ್ತದ ವರ್ಣನೆ

ಪಂಡಿತಾಚಾರ್ಯರ ಸೂರ್ಯೋದಯದ ಸೂರ್ಯಾಸ್ತದ ವರ್ಣನೆ ಸಹಿತ ಅತ್ಯಂತ ಮಹತ್ತ್ವದ್ದು ಮತ್ತು ವ್ಯರ್ಥವಲ್ಲ, ಕಾವ್ಯದ ಸೊಬಗಿಗಾಗಿ ಇಲ್ಲಿ ವರ್ಣಿಸಿಲ್ಲ, ಎನ್ನುವದನ್ನು ಇಲ್ಲಿ ಸಮರ್ಥವಾಗಿ ಪ್ರತಿಪಾದಿಸಿ ಆ ವರ್ಣನೆಯ ಹಿಂದಿನ ಧ್ವನಿಯನ್ನು ಇಲ್ಲಿ ಮನಗಾಣಿಸಲಾಗಿದೆ. ಸೂರ್ಯಾಸ್ತವನ್ನು ವರ್ಣಿಸಬೇಕಾದರೂ ಸಹಿತ ಭಗವದ್‌ಭಕ್ತರ ಮಾಹಾತ್ಮ್ಯವನ್ನು ಅವರು ಚಿಂತಿಸಿರುವ ರೀತಿಯೇ ಅನನ್ಯ.

5. ಶ್ರೀಮದಾಚಾರ್ಯರ ಸಾಯಂಧ್ಯಾನ

ಸಾಯಂಕಾಲದ ಸಮಯಕ್ಕೆ ಮತ್ತೊಮ್ಮೆ ಸ್ನಾನ ಮಾಡಿದ ಆಚಾರ್ಯರು ಜಪಾದಿಗಳನ್ನು ಮುಗಿಸಿ ಸರ್ವದೇಶವ್ಯಾಪ್ತನಾದ ಭಗವಂತನನ್ನು ಚಿಂತಿಸಿದ ಬಗೆಯನ್ನು ಇಲ್ಲಿ ಕೇಳುತ್ತೇವೆ. 

6. ಮಧ್ವಶಿಷ್ಯರ ಸತ್ಕರ್ಮಗಳು

ಸಂಜೆಯಲ್ಲಿ ಆಚಾರ್ಯರು ಧ್ಯಾನದಲ್ಲಿ ಆಸಕ್ತರಾಗಿದ್ದರೆ, ಆಚಾರ್ಯರ ಸಂನ್ಯಾಸಿಶಿಷ್ಯರು ಜಪ ತರ್ಪಣಗಳನ್ನು,ಬ್ರಹ್ಮಚಾರಿಶಿಷ್ಯರು ಸಂಧ್ಯಾವಂದನ ಅಗ್ನಿಕಾರ್ಯಗಳನ್ನು, ಗೃಹಸ್ಥಶಿಷ್ಯರು ಅಗ್ನಿಹೋತ್ರಾದಿಗಳನು ಅನುಷ್ಠಾನ ಮಾಡುತ್ತಿದ್ದರು ಎಂಬ ವಿಷಯಗಳ ವಿವರಣೆ ಇಲ್ಲಿದೆ. ಪಂಡಿತಾಚಾರ್ಯರು ಭಾವಪ್ರಕಾಶಿಕೆಯಲ್ಲಿ ತಿಳಿಸಿರುವ, ಅಗ್ನಿಹೋತ್ರದ ಸಂದರ್ಭದಲ್ಲಿ ಮಾಡಬೇಕಾದ ಒಂದು ಮಹತ್ತ್ವದ ಅನುಸಂಧಾನದ ವಿವರಣೆಯೊಂದಿಗೆ.

7. ರಾತ್ರಿಯಲ್ಲಿ ಭಗವಚ್ಚಿಂತನೆ

ರಾತ್ರಿಯ ಸಂದರ್ಭದಲ್ಲಿ ಆಚಾರ್ಯರು ತಮ್ಮ ಶಿಷ್ಯರಿಗೆ ಭಾಗವತದಲ್ಲಿನ ಭಗವಂತನ ಮಾಹಾತ್ಮ್ಯಗಳನ್ನು ತಿಳಿಸಿಹೇಳಿ ಬಳಿಕ ಅವರಿಗೆ ನಿದ್ರೆಗೆ ಅನುಜ್ಞೆಯನ್ನು ನೀಡುತ್ತಿದ್ದರು. ಆಚಾರ್ಯರಿಗೆ ಎಂದಿಗೂ ನಿದ್ರೆಯ ಬಾಧೆಯಿರಲಿಲ್ಲಘಿ ಎಂಬ ಮಹತ್ತ್ವದ ತತ್ವದ ಚಿಂತನೆಯೊಂದಿಗೆ , ಆಚಾರ್ಯರಲ್ಲಿ ಒಂದು ಶ್ರೇಷ್ಠ ಪ್ರಾರ್ಥನೆಯನ್ನು ಸಲ್ಲಿಸುವದರೊಂದಿಗೆ ಈ ರಮಣೀಯ ಸರ್ಗದ ಉಪನ್ಯಾಸವನ್ನು ಗುರ್ವಂತರ್ಗತನಿಗೆ ಸಮರ್ಪಿಸಲಾಗಿದೆ.

Play Time: 55:59

Size: 9.80 MB


Download Upanyasa Share to facebook View Comments
3424 Views

Comments

(You can only view comments here. If you want to write a comment please download the app.)
  • No Comment