03/10/2016
1. ಹದಿನೈದನೆಯ ಸರ್ಗದ ಮಹತ್ತ್ವ ಶ್ರೀಮದಾಚಾರ್ಯರ ಸಿದ್ಧಾಂತದ ನಿರ್ದುಷ್ಟತೆಯನ್ನು, ಸರ್ವಮೂಲಗ್ರಂಥಗಳ ಮಾಹಾತ್ಮ್ಯ ಮತ್ತು ಪರಿಶುದ್ಧಿ, ಆಚಾರ್ಯರರ ಶಿಷ್ಯಪ್ರಶಿಷ್ಯರ ಮಾಹಾಮಹಿಮೆಗಳನ್ನು ಸಾರಿ ಹೇಳುವ ಸಮಗ್ರ ಮಧ್ವವಿಜಯದ ಹೃದಯಸ್ಥಾನದಲ್ಲಿರುವ ಹದಿನೈದನೆಯ ಸರ್ಗದ ಮಹತ್ತ್ವವನ್ನು ಇಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ಹಿಂದಿನ ಹದಿನಾಲ್ಕು ಸರ್ಗಗಳ ಸಿಂಹಾವಲೋಕನದೊಂದಿಗೆ. 2. ಈ ಸರ್ಗದ ಸಾರಾಂಶ ಹದಿನೈದನೆಯ ಸರ್ಗದಲ್ಲಿನ 141 ಶ್ಲೋಕಗಳ ಪಕ್ಷಿನೋಟ ಇಲ್ಲಿದೆ. 3. ಆಚಾರ್ಯರ ಉಪನ್ಯಾಸಭಾರತೀ ಕಾಸರಗೋಡಿನ ಸಮೀಪದ ಕುಡೇಲ್ ಎಂಬ ಊರಿನ ಕೂಡ್ಲು ಎಂಬ ದೇವಸ್ಥಾನಕ್ಕೆ ಬಂದ ಶ್ರೀಮದಾಚಾರ್ಯರು ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಎದುರಿನಲ್ಲಿ ಕುಳಿತಿದ್ದಾಗ ಸಮಗ್ರ ದರ್ಶನಗಳ ಅಸಾರತೆಯನ್ನು ಪ್ರತಿಪಾದಿಸಿ ವೈದಿಕವಾದ ತತ್ವವಾದವನ್ನು ಪ್ರತಿಷ್ಠಾಪಿಸುತ್ತಾರೆ. ಆಚಾರ್ಯರ ಆ ಉಪನ್ಯಾಸಭಾರತಿಯ ದಿವ್ಯವಾದ ವರ್ಣನೆ, ಆಚಾರ್ಯರ ಧ್ವನಿಯ ಒಂದು ಮಹಾಮಾಹಾತ್ಮ್ಯದ ಚಿಂತನೆಯೊಂದಿಗೆ ಈ ಉಪನ್ಯಾಸ ಮುಕ್ತಾಯವಾಗುತ್ತದೆ.
Play Time: 56:30
Size: 9.89 MB