03/10/2016
ಹಾಲು ತಂತಾನೇ ಮೊಸರಾಗುತ್ತದೆ. ನದಿಯ ನೀರು ತಂತಾನೇ ಹರಿಯುತ್ತದೆ. ಕರು ಹುಟ್ಟಿದಾಗ ಹಸುವಿನ ಕೆಚ್ಚಲಿನಲ್ಲಿ ತಂತಾನೇ ವಿಕಾರವಾಗಿ ಹಾಲು ಉತ್ಪತ್ತಿಯಾಗುತ್ತದೆ. ಹಾಗೆಯೇ ಪ್ರಕೃತಿಯಲ್ಲಿ ತಂತಾನೇ ವಿಕಾರವುಂಟಾಗಿ ಈ ಜಗತ್ತಿನ ನಿರ್ಮಾಣವಾಗಿದೆ, ಈ ಜಗತ್ತನ್ನು ಸೃಷ್ಟಿಸಲಿಕ್ಕಾಗಿ ದೇವರು ಬೇಕಾಗಿಲ್ಲ, ದೇವರನ್ನು ಒಪ್ಪುವ ಆವಶ್ಯಕತೆಯೇ ಇಲ್ಲ ಎನ್ನುವದು ನಿರೀಶ್ವರ ಸಾಂಖ್ಯರ ವಾದ. ಬ್ರಹ್ಮಸೂತ್ರಗಳಲ್ಲಿ ವೇದವ್ಯಾಸದೇವರು ಈ ವಾದವನ್ನು ವಿಮರ್ಶಿಸಿ ಉತ್ತರವನ್ನು ನೀಡಿದ್ದಾರೆ. ತ್ರಿವಿಕ್ರಮಪಂಡಿತಾಚಾರ್ಯರೊಡನೆ ಶ್ರೀಮದಾಚಾರ್ಯರು ವಾದ ಮಾಡಬೇಕಾದರೆ ಪಂಡಿತಾಚಾರ್ಯರು ಸಾಂಖ್ಯಸಿದ್ಧಾಂತವನ್ನು ಮಂಡಿಸುತ್ತಾರೆ. ವೇದಸಿದ್ಧಾಂತವನ್ನು ಆಶ್ರಯಿಸಿದ ಆಚಾರ್ಯರು ಅದ್ಭುತವಾದ ಉತ್ತರವನ್ನು ನೀಡುತ್ತಾರೆ. ಆ ಭಾಗದ ವಿವರಣೆ ಇಲ್ಲಿದೆ. ಪ್ರಕೃತಿಯಿಂದಲೇ ಎಲ್ಲವೂ ನಡೆಯುತ್ತದೆ, ದೇವರು ಯಾಕೆ ಬೇಕು ಎನ್ನುವ ಪ್ರಶ್ನೆಗೆ ಉತ್ತರ ಈ ಉಪನ್ಯಾಸ. ತಪ್ಪದೇ ಕೇಳಿ.
Play Time: 26:35
Size: 4.73 MB