Upanyasa - VNU317

MV117 ಸೇಶ್ವರ ಸಾಂಖ್ಯರ ವಿಮರ್ಶೆ

03/10/2016

ಸೇಶ್ವರಸಾಂಖ್ಯರ ಸಿದ್ಧಾಂತ

ಸಾಂಖ್ಯಸಿದ್ಧಾಂತವನ್ನೇ ಒಪ್ಪಿ ಅರ್ಥಾತ್ ಪ್ರಕೃತಿಯೇ ಜಗತ್‌ಕರ್ತ್ರೀ ಎಂದು ಒಪ್ಪಿಘಿ, ಜತೆಯಲ್ಲಿ ವೇದ-ಸ್ಮೃತಿಗಳ ಆಧಾರದಿಂದ ಈಶ್ವರನನ್ನೂ ಒಪ್ಪುವ ಪತಂಜಲಿಯ ಅನುಯಾಯಿಗಳು ಸೇಶ್ವರಸಾಂಖ್ಯರು. ಹೀಗೆ ದೇವರು ಎಂಬ ಒಂದು ತತ್ವವನ್ನು ಒಪ್ಪಿದರೂ, ಆ ದೇವರು ಸೃಷ್ಟಿಪ್ರಕ್ರಿಯೆಯಲ್ಲಿ ಒಂದು ಅಂಗವೇ ಹೊರತು ದೇವರೇ ಪ್ರಧಾನವಾದ ತತ್ವವಲ್ಲ ಎನ್ನುವದು ಪಾತಂಜಲರ ಪ್ರತಿಪಾದನೆ. ಅವರ ಆ ಸಿದ್ಧಾಂತದ ಸಂಕ್ಷಿಪ್ತ ಪರಿಚಯ ಇಲ್ಲಿದೆ. 

ಸೇಶ್ವರಸಾಂಖ್ಯರ ಖಂಡನೆ. 

ಪಾತಂಜಲರು ಈಶ್ವರನನ್ನು ಒಪ್ಪುವದು ಶೃತಿ-ಸ್ಮೃತಿಗಳ ಆಧಾರದಿಂದ. ಅಂದಮೇಲೆ, ಶೃತಿಸ್ಮೃತಿಗಳು ಯಾವರೀತಿಯ ಈಶ್ವರತತ್ವವನ್ನು ಪ್ರತಿಪಾದಿಸುತ್ತದೆಯೋ ಆ ರೀತಿಯಾಗಿಯೇ ಈಶ್ವರನನ್ನು ತಿಳಿಯಬೇಕೇ ಹೊರತು ವೇದಗಳಲ್ಲಿ ಹೇಳಿದ ಈಶ್ವರತತ್ವವನ್ನು ಮಾತ್ರ ಒಪ್ಪಿ ವೇದಗಳಲ್ಲಿ ಹೇಳಿದ ಈಶ್ವರನ ಗುಣಗಳನ್ನು ಒಪ್ಪುವದಿಲ್ಲ, ಸ್ವಕಪೋಲಕಲ್ಪಿತ ಗುಣಗಳನ್ನು ಒಪ್ಪುತ್ತೇನೆ ಎಂಬ ಅವನ ನಿಲುವನ್ನು ಇಲ್ಲಿ ದೃಷ್ಟಾಂತಗಳೊಂದಿಗೆ ಸಮರ್ಥವಾಗಿ ನಿರಾಕರಿಸಲಾಗಿದೆ. ವೇದಗಳನ್ನು ಬಿಟ್ಟು ಕೇವಲ ಯುಕ್ತಿಗಳಿಂದ ಈಶ್ವರತತ್ವವನ್ನು ತಿಳಿಯಲು ಸಾಧ್ಯವಿಲ್ಲ ಎಂಬ ಮತ್ತೊಂದು ತತ್ವದ ಪ್ರತಿಪಾದನೆಯೊಂದಿಗೆ.

Play Time: 17:48

Size: 3.21 MB


Download Upanyasa Share to facebook View Comments
3188 Views

Comments

(You can only view comments here. If you want to write a comment please download the app.)
  • No Comment