03/10/2016
1. ಪಾಶುಪತದರ್ಶನ ಶಿವ, ಗಣಪತಿ, ಸೂರ್ಯ, ಸ್ಕಂದ, ಶಕ್ತಿ ಮುಂತಾದವರನ್ನು ದೇವರು ಎಂದು ಸಾಧಿಸುವ ಪಾಶುಪತ ಮುಂತಾದ ಆಗಮಗಳ ಪ್ರತಿಪಾದನೆಯನ್ನು ನಾವಿಲ್ಲಿ ಕೇಳುತ್ತೇವೆ. ನಾರಾಯಣನನ್ನು ದೇವರು ಎಂದು ಒಪ್ಪುವ ಮಾಧ್ವಾಗಮದಲ್ಲಿ ಪೂರ್ವಾಗ್ರಹವಿಲ್ಲ ಎಂಬ ಮಹತ್ತ್ವದ ಪ್ರಮೇಯದ ಪ್ರತಿಪಾದನೆಯೊಂದಿಗೆ. 2. ಪಾಶುಪತಾಗಮದ ಅಪ್ರಾಮಾಣ್ಯ ಪಾಶುಪತ ಆಗಮ ಪ್ರಮಾಣವೇ ಅಲ್ಲಘಿ, ಅದನ್ನು ರಚನೆ ಮಾಡಿದ ಶಿವ ಮೊದಲಾದವರಿಗೆ ಸರ್ವಜ್ಞತ್ವವನ್ನು ಸಾಧಿಸಲು ಸಾಧ್ಯವಿಲ್ಲಘಿ ಎನ್ನುವದನ್ನು ಇಲ್ಲಿ ಪ್ರತಿಪಾದಿಸಲಾಗಿದೆ. 3. ರುದ್ರದೇವರು ದೇವರಲ್ಲ ರುದ್ರದೇವರು ಯಾಕೆ ಪರಬ್ರಹ್ಮನಲ್ಲಘಿ, ದೇವರಲ್ಲಘಿ, ಜಗಜ್ಜನ್ಮಾದಿಕಾರಣನಲ್ಲ ಎಂಬ ಪ್ರಶ್ನೆಗೆ ವೇದವ್ಯಾಸದೇವರು ಕೊಟ್ಟ ಉತ್ತರ — ದೇವರು ಎಂದು ಕರೆಸಿಕೊಳ್ಳಬೇಕಾದ ಚೇತನನಲ್ಲಿ ಯಾವ ಗುಣಗಳಿರಬೇಕೋ ಆ ಗುಣಗಳು ರುದ್ರನಲ್ಲಿ ಇಲ್ಲ, ಯಾವ ದೋಷಗಳು ಇರಬಾರದೋ ಆ ದೋಷಗಳು ರುದ್ರನಲ್ಲಿ ಇವೆ ಎಂದು. ಸೃಷ್ಟಿಯಾಗಲಿಕ್ಕಿಂತ ಮುಂಚೆ ರುದ್ರದೇವರು ಇರಲಿಲ್ಲಘಿ, ಸ್ವಯಂ ರುದ್ರನಿಗೇ ಸೃಷ್ಟಿಯಿದೆ, ರುದ್ರದೇವರ ಮಾಹಾತ್ಮ್ಯವೆಲ್ಲವೂ ಲಕ್ಷ್ಮೀಪ್ರಾಣದೇವರ ಅಧೀನವಾದದ್ದು ಮುಂತಾದ್ದರಿಂದ ಶಿವನು ದೇವರಾಗಲಿಕ್ಕೆ ಸಾಧ್ಯವಿಲ್ಲ ಎಂಬ ತತ್ವದ ವಿವರಣೆ ಇಲ್ಲಿದೆ.
Play Time: 39:26
Size: 6.94 MB