03/10/2016
ನೈಯಾಯಿಕರ ಖಂಡನೆ ತಾರ್ಕಿಕರು ಪರಮಾತ್ಮನಿಗೆ ಸುಖವನ್ನು ಒಪ್ಪುವದಿಲ್ಲಘಿ. ಅನಂತಗುಣಪೂರ್ಣತ್ವವವನ್ನೂ ಒಪ್ಪುವದಿಲ್ಲಘಿ. ಕೇವಲ ಸರ್ವಜ್ಞತ್ವವವನ್ನು ಒಪ್ಪುತ್ತಾರೆ. ಅವರ ಸಿದ್ಧಾಂತವನ್ನು ಅನುವಾದ ಮಾಡಿ ಶ್ರೀಮದಾಚಾರ್ಯರು ಅದನ್ನು ಖಂಡನೆ ಮಾಡಿರುವ ರೀತಿಯನ್ನು ಇಲ್ಲಿ ನಿರೂಪಿಸಲಾಗಿದೆ. ಸಮವಾಯ ಎನ್ನುವ ಸಂಬಂಧವನ್ನು ಒಪ್ಪುವ ಅವರ ಸಿದ್ಧಾಂತದ ಪ್ರಕಾರ ಪರಮಾತ್ಮನಲ್ಲಿ ಅವನಿಗೆ ಅನಭಿಮತವಾದ ದುಃಖವನ್ನೂ ಪರಮಾತ್ಮನಲ್ಲಿ ಒಪ್ಪಬೇಕು, ನಮಗೆ ಅಭಿಮತವಾದ ಅನಂತಗುಣಪೂರ್ಣತ್ವವನ್ನೂ ಒಪ್ಪಬೇಕಾಗುತ್ತದೆ ಎಂದು ಇಲ್ಲಿ ಪ್ರತಿಪಾದಿಸಲಾಗಿದೆ. ಪರಮಾತ್ಮನ ಅನಂತಗುಣಪೂರ್ಣತ್ವ ಶ್ರೀಮದಾಚಾರ್ಯರ ಸಿದ್ಧಾಂತದ ‘ವಿಶೇಷ’ ಇದು ಎಲ್ಲ ವಾದಿಗಳೂ ಅನಿವಾರ್ಯವಾಗಿ ಒಪ್ಪಬೇಕಾದ್ದುಘಿ. ಸರ್ವರ ಅನುಭವಕ್ಕೂ ಬರುವಂಥದ್ದುಘಿ. ಆ ವಿಶೇಷದ ಅಸ್ತಿತ್ವವನ್ನು ಪ್ರತಿಪಾದಿಸಿ ಪರಮಾತ್ಮನ ಅನಂತಗುಣಪೂರ್ಣತ್ವ ಒಪ್ಪಲೇಬೇಕಾದ ತತ್ವ ಎಂದು ಪ್ರತಿಪಾದಿಸಿ ಉಪನ್ಯಾಸವನ್ನು ಗುರ್ವಂತರ್ಗತನಿಗೆ ಸಮರ್ಪಿಸಲಾಗಿದೆ.
Play Time: 31:50
Size: 5.63 MB