03/10/2016
ಶೂನ್ಯವಾದ ಮತ್ತು ಮಾಯಾವಾದಗಳ ಸಾಮ್ಯ ವೇದವ್ಯಾಸದೇವರು ಬ್ರಹ್ಮಸೂತ್ರಗಳಲ್ಲಿ ಪ್ರತಿಪಾದಿಸಿರುವ ಬೌದ್ಧ ಮತ್ತು ಮಾಯಾವಾದಗಳ ಸಾಮ್ಯವನ್ನು ಆಚಾರ್ಯರು ತಮ್ಮ ಗ್ರಂಥಗಳಲ್ಲಿ, ಬೌದ್ಧರ ಮತ್ತು ಅದ್ವೈತಿಗಳ ವಾಕ್ಯಗಳನ್ನೇ ಉಲ್ಲೇಖಿಸಿ ವಿಸ್ತಾರವಾಗಿ ನಿರೂಪಿಸುತ್ತಾರೆ. ಆವೈದಿಕವಾದ ಬೌದ್ಧರ ಶೂನ್ಯವಾದವೇ ಅದ್ವೈತಿಗಳಿಂದ ವೈದಿಕತ್ವದ ಲೇಪವನ್ನು ಪಡೆದು ಮಾಯಾವಾದ ಎಂದು ಹೆಸರಾಯಿತು ಎಂದು ಪ್ರತಿಪಾದಿಸುತ್ತಾರೆ. ಬೌದ್ಧರ ಶೂನ್ಯತತ್ವವೇ, ಅದ್ವೈತಿಗಳ ಬ್ರಹ್ಮತತ್ವ, ಬೌದ್ಧರ ಸಂವೃತಿಯೇ ಅದ್ವೈತಿಗಳ ಮಾಯೆ, ಬೌದ್ಧರು ಹೇಳಿದ ವೇದಗಳ ಅಪ್ರಾಮಾಣ್ಯವನ್ನೇ ಅದ್ವೈತಿಗಳು ವೇದಗಳ ಅತತ್ವಾವೇದಕತ್ವವನ್ನು ಪ್ರತಿಪಾದಿಸುವ ಮುಖಾಂತರ ಹೇಳಿದರು ಮುಂತಾಗಿ ಬೌದ್ಧ ಮತ್ತು ಅದ್ವೈತಸಿದ್ಧಾಂತಗಳ ಸಾಮ್ಯವನ್ನು ಈ ಭಾಗದಲ್ಲಿ ನಾವು ಕೇಳುತ್ತೇವೆ. ಇಬ್ಬರೂ ತಮ್ಮ ಪರತತ್ವಗಳನ್ನು ನಿರ್ವಿಶೇಷ (Propertyless) ಎಂದು ಒಪ್ಪಿರುವದರಿಂದ ಎರಡರಲ್ಲಿಯೂ ಭೇದವಿರಲು ಸಾಧ್ಯವೇ ಇಲ್ಲ ಎಂದು ಇಲ್ಲಿ ಸಮರ್ಥವಾಗಿ ಪ್ರತಿಪಾದಿಸಲಾಗಿದೆ.
Play Time: 37:11
Size: 6.55 MB