Upanyasa - VNU322

MV122 ಶೂನ್ಯ-ಮಾಯಾವಾದಗಳ ವಿಮರ್ಶೆ

03/10/2016

ಶೂನ್ಯ-ಬ್ರಹ್ಮರ ಜಗತ್ಕಾರಣತ್ವದ ಖಂಡನೆ

ಶೂನ್ಯತತ್ವ ಮತ್ತು ಬ್ರಹ್ಮತತ್ವಗಳು ಸರ್ವಧರ್ಮರಹಿತವಾದ್ದರಿಂದ ಅಸತ್ಯವಾದ ಪದಾರ್ಥ ಎಂದಾಯಿತು. ಅಸತ್ಯವಾದ ವಸ್ತುವಿನಿಂದ ಎಂದಿಗೂ ಯಾವ ಕಾರ್ಯವೂ ಆಗಲಿಕ್ಕೆ ಸಾಧ್ಯವಿಲ್ಲ. ಹೀಗಾಗಿ ಬೌದ್ಧರ ಮತ್ತು ಅದ್ವೈತಿಗಳ ಶೂನ್ಯ ಬ್ರಹ್ಮರಿಂದ ಜಗತ್ತು ಹುಟ್ಟಿಬರಲು ಸಾಧ್ಯವಿಲ್ಲ ಎಂಬ ಮಾತಿನ ಪ್ರತಿಪಾದನೆ ಇಲ್ಲಿದೆ. ಜಗತ್ತಿನ ಭ್ರಾಂತಿಗೆ ಆ ಶೂನ್ಯಬ್ರಹ್ಮರು ಅಧಿಷ್ಠಾನವಾಗಲೂ ಸಾಧ್ಯವಿಲ್ಲ ಎನ್ನುವ ಮಾತಿನ ಸಮರ್ಥನೆಯೊಂದಿಗೆ.

ಮಾಯಾ‘ವಾದ’ಗಳ ಖಂಡನೆ

ಅದ್ವೈತಿಗಳೇನು, ವೇದಗಳಲ್ಲಿ ತತ್ವಾವೇದಕ ಮತ್ತು ಅತತ್ವಾವೇದಕ ಎಂಬ ವಿಭಾಗವನ್ನು ಒಪ್ಪುತ್ತಾರೆ, ಪರಬ್ರಹ್ಮನನ್ನು ವೇದಾಂತವಾಕ್ಯಗಳಿಂದ ಲಕ್ಷ್ಯ ಎಂದು ಒಪ್ಪುತ್ತಾರೆ, ಆ ಮಾತುಗಳ ಖಂಡನೆ ಇಲ್ಲಿದೆ. ಅವರ ಸಿದ್ಧಾಂತದ ಪ್ರಕಾರ ಪರಬ್ರಹ್ಮನು ಭಾವಸ್ವರೂಪನೂ ಅಗಲಿಕ್ಕೆ ಸಾಧ್ಯವಿಲ್ಲ ಅಭಾವಸ್ವರೂಪನೂ ಅಗಲಿಕ್ಕೆ ಸಾಧ್ಯವಿಲ್ಲ ಎನ್ನುವ ಪ್ರತಿಪಾದನೆಯೊಂದಿಗೆ.

ಶೂನ್ಯ ಬ್ರಹ್ಮರು ಅಸತ್‌ಪದಾರ್ಥಗಳು

ಬೌದ್ಧರ ಶೂನ್ಯತತ್ವ ಮತ್ತು ಅದ್ವೈತಿಗಳ ಬ್ರಹ್ಮತತ್ವ ನಿರ್ವಿಶೇಷವಾದ್ದರಿಂದಲೇ ಅಸತ್ಯವಾದ ಪದಾರ್ಥಗಳು ಎನ್ನುವದನ್ನು ಪ್ರತಿಪಾದಿಸಿ ಆ ಅಸತ್ಯವಾದ ವಸ್ತುಗಳನ್ನು ಧ್ಯಾನ ಮಾಡಲೂ ಸಾಧ್ಯವಿಲ್ಲ, ಅವುಗಳಿಂದ ಮೋಕ್ಷಾದಿಗಳೂ ಉಂಟಾಗಲಿಕ್ಕೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸುವದರೊಂದಿಗೆ ಈ ಉಪನ್ಯಾಸ ಮುಕ್ತಾಯವಾಗುತ್ತದೆ.

Play Time: 33:46

Size: 5.96 MB


Download Upanyasa Share to facebook View Comments
3156 Views

Comments

(You can only view comments here. If you want to write a comment please download the app.)
  • No Comment