03/10/2016
ತ್ರಿವಿಕ್ರಮಪಂಡಿತಾಚಾರ್ಯರ ವಾದಕ್ರಮ ಶ್ರೀಮದಾಚಾರ್ಯರ ಸರ್ವಜ್ಞತ್ವವನ್ನು, ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಅಪಾರ ಬುದ್ಧಿಕೌಶಲವನ್ನು ಮನವರಿಕೆ ಮಾಡಿಸುವ ಮಾತುಗಳ ಅನುಸಂಧಾನ ಮಾಡಿ ಅವರಿಬ್ಬರ ಮಧ್ಯದಲ್ಲಿ ನಡೆದ ರೋಚಕವಾದ ವಾದದ ಕ್ರಮವನ್ನು ಇಲ್ಲಿ ನಿರೂಪಿಸಲಾಗಿದೆ. ಬನ್ನಂಜೆಯ ವ್ಯಾಖ್ಯಾನದ ವಿಮರ್ಶೆ ಬನ್ನಂಜೆ ಗೋವಿಂದಾಚಾರ್ಯರು ತನ್ನ ತತ್ವಚಂದ್ರಿಕೆಯಲ್ಲಿ, ಆಚಾರ್ಯರಿಗೂ ಪಂಡಿತಾಚಾರ್ಯರಿಗೂ ವಾದ ನಡೆದದ್ದು ಹದಿನೈದು ದಿವಸಗಳಲ್ಲ, ಏಳೆಂಟು ದಿವಸಗಳು ಎಂದು ಬರೆಯುತ್ತಾರೆ. ‘‘ಸಪ್ತಾಷ್ಟಾನಿ’’ ಎನ್ನುವ ಮಧ್ವವಿಜಯದ ಶಬ್ದಕ್ಕೆ ಹದಿನೈದು ಎಂಬ ಅರ್ಥ ಕೇವಲ ವ್ಯಾಕರಣಾನುಸಾರಿಯಷ್ಟೇ ಅಲ್ಲ, ಅದೇ ಅರ್ಥವನ್ನು ಒಪ್ಪುವ ಅನಿವಾರ್ಯತೆ ಇದೆ ಎಂಬ ಮಾತನ್ನು ಇಲ್ಲಿ ಸಮರ್ಥವಾಗಿ ಪ್ರತಿಪಾದಿಸಲಾಗಿದೆ. ನಾರಾಯಣಪಂಡಿತಾಚಾರ್ಯರು ‘‘ಏಳೋ ಎಂಟೋ’’ ಎಂದು ಪೇಲವವಾಗಿ, ಸಂಮುಗ್ಧವಾಗಿ ಮಾತನಾಡುವವರೇ ಅಲ್ಲ, ಅವರ ಮಧ್ವವಿಜಯ ‘‘ಶಾಸ್ತ್ರ’’. ಅಲ್ಲಿ ಸಂದೇಹಕ್ಕೆ ಎಡೆಯೇ ಇರುವದಿಲ್ಲ, ಟೀಕಾಕೃತ್ಪಾದರೂ ಸಹಿತ ಯಾವ ರೀತಿ ಮಧ್ವವಿಜಯದ ಮಾತನ್ನು ನ್ಯಾಯಸುಧೆಯಲ್ಲಿ ಸಮರ್ಥಿಸುತ್ತಾರೆ ಎಂಬ ಮಹತ್ತ್ವದ ಅಂಶಗಳ ವಿವರಣೆಯೊಂದಿಗೆ. ತ್ರಿವಿಕ್ರಮಪಂಡಿತಾಚಾರ್ಯರ ಉದ್ಧಾರ ಆಚಾರ್ಯರೊಂದಿಗೆ ಹದಿನೈದು ದಿವಸಗಳ ಕಾಲ ನಿರಂತರ ವಾದ ಮಾಡಿದ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ತಮ್ಮ ಎಲ್ಲ ಸಂದೇಹಗಳನ್ನು ಕಳೆದುಕೊಂಡು, ಪ್ರಶ್ನೆಗಳನ್ನೂ ಪರಿಹರಿಸಿ ಕೊಂಡು, ಆಚಾರ್ಯರ ಕಾಲಿಗೆರಗಿ ಆಚಾರ್ಯರ ಪಾದದಾಸ್ಯವನ್ನು ಬೇಡಿದ ಸುಂದರ ಘಟನೆಯ ಮನೋಜ್ಞ ಚಿತ್ರಣ ಇಲ್ಲಿದೆ. ಪಂಡಿತಾಚಾರ್ಯರ ಮಹಾಮಹಾತ್ಮ್ಯದ ಚಿಂತನೆಯೊಂದಿಗೆ. ಪಂಡಿತಾಚಾರ್ಯರ ಭಾಷ್ಯಾಧ್ಯಯನ ಶ್ರೀಮದಾಚಾರ್ಯರು ತ್ರಿವಿಕ್ರಮಪಂಡಿತಾಚಾರ್ಯರಿಗೆ ವೈಷ್ಣವದೀಕ್ಷೆಯನ್ನು ನೀಡಿ ಶ್ರೀಮದ್ಭಾಷ್ಯವನ್ನು ಉಪದೇಶಿಸಲು ಆರಂಭಿಸಿದಾಗ ದುರ್ಜನರು ಕುದ್ದು ಹೋದ, ಸಜ್ಜನರು ಸಂತುಷ್ಟರಾದ ಘಟನೆಯ ವಿವರಣದೊಂದಿಗೆ ಈ ಉಪನ್ಯಾಸ ಮುಕ್ತಾಯವಾಗುತ್ತದೆ.
Play Time: 54:36
Size: 9.56 MB