Upanyasa - VNU326

MV126 ಸರ್ವಮೂಲದ ಮಾಹಾತ್ಮ್ಯ

03/10/2016

ತತ್ವಪ್ರದೀಪದ ರಚನೆಗೆ ಪಂಡಿತಾಚಾರ್ಯರ ಸಿದ್ಧತೆ

ಆಚಾರ್ಯರ ಬಳಿಯಲ್ಲಿ ಶಾಸಾಧ್ಯಯನ ಮಾಡಿದ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು, ಶ್ರೀಮದ್ ಭಾಷ್ಯಕ್ಕೆ ಟೀಕೆಯನ್ನು ರಚಿಸಲು ಆಚಾರ್ಯರಿಂದ ಆಜ್ಞಪ್ತರಾಗುತ್ತಾರೆ. ಆ ವ್ಯಾಖ್ಯಾನವನ್ನು ರಚಿಸಲು ಭೂರಿ ಸಿದ್ಧತೆಯನ್ನು ಮಾಡಿಕೊಳ್ಳುವ ಶ್ರೀ ಪಂಡಿತಾಚಾರ್ಯರು ಮತ್ತೊಮ್ಮೆ ಸಮಸ್ತಶಾಸಗಳ, ಎಲ್ಲ ದರ್ಶನಗಳ ಅಧ್ಯಯನಕ್ಕೆ ತೊಡಗುತ್ತಾರೆ. ಆ ಸಂದರ್ಭದಲ್ಲಿ ಆ ದರ್ಶನಗಳಲ್ಲಿನ ಪ್ರತಿಯೊಂದು ದುರ್ವಾದದ ಖಂಡನೆಯನ್ನು ಮಾಡುವ ಗ್ರಂಥದ ಆವಶ್ಯಕತೆಯನ್ನು ಅವರು ಮನಗಾಣುತ್ತಾರೆ. ಮನಗಂಡು, ಶ್ರೀಮದಾಚಾರ್ಯರ ಬಳಿ ಬಂದು ಆಚಾರ್ಯರು ರಚಿಸಿದ ಗ್ರಂಥಗಳ ಮಾಹಾತ್ಮ್ಯದ ಚಿಂತನೆಯನ್ನು ಮಾಡಿಸ ಶ್ರೀಮದನುವ್ಯಾಖ್ಯಾನದ ರಚನೆಗಾಗಿ ಪ್ರಾರ್ಥಿಸುತ್ತಾರೆ. ಆ ಪ್ರಸಂಗದ ವಿವರಣೆ ಇಲ್ಲಿದೆ. 

ಶ್ರೀಮತ್ ಸೂತ್ರಭಾಷ್ಯದ ಮಾಹಾತ್ಮ್ಯ

ಮಿತವಾದ ಶಬ್ದಗಳಿಂದ ಅಮಿತವಾದ ಅರ್ಥವನ್ನು ತಿಳಿಸುವ ಶ್ರೀಮದ್ ಬ್ರಹ್ಮಸೂತ್ರಭಾಷ್ಯದ ಮಾಹಾತ್ಮ್ಯದ ಚಿಂತನೆ ಇಲ್ಲಿದೆ.

ಉಪನಿಷದ್‌ಭಾಷ್ಯಗಳ ಮಾಹಾತ್ಮ್ಯ

ಪರಮಾತ್ಮನನ್ನು ನಮ್ಮ ಮನೋಮಂದಿರದಲ್ಲಿ ಶಾಶ್ವತವಾಗಿ ಪ್ರತಿಷ್ಠಾಪಿಸುವ ಆಚಾರ್ಯರ ಹತ್ತು ಉಪನಿಷದ್‌ಭಾಷ್ಯಗಳು ಅದೆಷ್ಟು ಸುಂದರವಾಗಿ ಉಪನಿಷತ್ತುಗಳಿಗೆ ಅರ್ಥವನ್ನು ಹೇಳುತ್ತವೆ ಎಂಬ ಮಾತಿನ ಚಿಂತನೆ ಇಲ್ಲಿದೆ.

ಗೀತಾಭಾಷ್ಯ-ಗೀತಾತಾತ್ಪರ್ಯಗಳ ಮಾಹಾತ್ಮ್ಯ

ಸಮಸ್ತ ತತ್ವಗಳನ್ನು ಪರಿಶುದ್ಧವಾಗಿ ತಿಳಿಸುವ, ಸರ್ವಶಾಸಗಳ ಸಂಕ್ಷಿಪ್ತರೂಪವಾದ ಶ್ರೀಮದ್ ಭಗವದ್ಗೀತೆಯ ವ್ಯಾಖ್ಯಾನಗಳಾದ ಗೀತಾಭಾಷ್ಯ-ತಾತ್ಪರ್ಯಗಳ ಮಾಹಾತ್ಮ್ಯದ ಚಿಂತನೆ ಇಲ್ಲಿದೆ. 

ಮಹಾಭಾರತತಾತ್ಪರ್ಯನಿರ್ಣಯದ ಮಾಹಾತ್ಮ್ಯ

ಸಮಸ್ತಶಾಸಗಳು ಎಂಬ ಸಮುದ್ರವನ್ನು, ಶ್ರೀಮದಾಚಾರ್ಯರು ತಮ್ಮ ಪರಮಾದ್ಭುತವಾದ ಬುದ್ಧಿಯೆಂಬ ಮಂದರಪರ್ವತವನ್ನಿಟ್ಟು ಕಡೆದಾಗ ಹುಟ್ಟಿ ಬಂದ ಅಮೃತ ಶ್ರೀಮನ್ ಮಹಾಭಾರತತಾತ್ಪರ್ಯನಿರ್ಣಯ. ಅದರ ಅಧ್ಯಯನ ಭಗವಂತನ ಪರಮಪ್ರೇಮವನ್ನು ನಮಗೆ ಕರುಣಿಸುತ್ತದೆ. ನಮ್ಮ ಸಾಧನೆಗೆ ಪ್ರತಿಬಂಧಕವಾದ ದುರಿತಗಳನ್ನು ಪರಿಹರಿಸುತ್ತದೆ. ಆ ತಾತ್ಪರ್ಯನಿರ್ಣಯದ ಮಾಹಾತ್ಮ್ಯಗಳ ಚಿಂತನೆ ಇಲ್ಲಿದೆ.

ಭಾಗವತತಾತ್ಪರ್ಯನಿರ್ಣಯದ ಮಾಹಾತ್ಮ್ಯ

ದೂರದ ಯಾತ್ರೆಯಲ್ಲಿ ನಮ್ಮ ಹತ್ತಾರು ತೊಂದರೆಗಳನ್ನು ಪರಿಹರಿಸುವ ಗೆಳೆಯನಂತೆ ಪುರಾಣಗಳ ಅಧ್ಯಯನಯಾತ್ರೆಯಲ್ಲಿ ತೋರುವ ಸಮಸ್ತ ಸಮಸ್ಯೆಗಳನ್ನು ಪರಿಹರಿಸುವ ಆಪ್ತಮಿತ್ರನಂತಹ ಗ್ರಂಥ ಶ್ರೀಮದ್ ಭಾಗವತ ತಾತ್ಪರ್ಯನಿರ್ಣಯ. ಹದಿನೆಂಟು ಪುರಾಣಗಳನ್ನು ಅರ್ಥ ಮಾಡಿಕೊಳ್ಳುವ ಯೋಗ್ಯತೆಯನ್ನು ದಯಪಾಲಿಸುವ, ಸಾವಿರ ಸಾವಿರ ಪ್ರಮೇಯಗಳನ್ನು ಪುಂಖಾನುಪುಂಖವಾಗಿ ನಿರೂಪಿಸುವ ಆ ಗ್ರಂಥದ ಮಾಹಾತ್ಮ್ಯ ಇಲ್ಲಿದೆ.

ತಂತ್ರಸಾರಸಂಗ್ರಹ ಮುಂತಾದ ಗ್ರಂಥಗಳ ಮಾಹಾತ್ಮ್ಯ

ಸರ್ವಾಭೀಷ್ಟಪ್ರದವಾದ ತಂತ್ರಸಾರಸಂಗ್ರಹ, ತತ್ವಶಾಸವನ್ನು ಅಧ್ಯಯನ ಮಾಡುವ ಯೋಗ್ಯತೆಯನ್ನು ಕರುಣಿಸುವ ಪ್ರಮಾಣಲಕ್ಷಣ, ಕಥಾಲಕ್ಷಣಗ್ರಂಥಗಳು, ಶತ್ರುಗಳನ್ನು ಕೆಡವಿ ಹಾಕುವ ಅರ್ಜುನನಂತೆ ದುರ್ವಾದಗಳನ್ನು ಕತ್ತರಿಸಿ ಹಾಕುವ ವಿಷ್ಣುತತ್ವವಿನಿರ್ಣಯ, ಮಾಯಾವಾದದ ಕಾಡನ್ನು ಸುಟ್ಟುಹಾಕುವ ಪ್ರಕರಣಗ್ರಂಥಗಳು, ಶ್ರೀಕೃಷ್ಣನ ಬಾಯಲ್ಲಿ ಬ್ರಹ್ಮಾಂಡವಿದ್ದಂತೆ, ಸಮಸ್ತ ಶಾಸಾರ್ಥವನ್ನು ಹುದುಗಿಸಿಟ್ಟಿಕೊಂಡ ಅಣುಭಾಷ್ಯ, ಸಂಸ್ಕೃತಸಾಹಿತ್ಯ ಪ್ರಪಂಚದ ಅಚ್ಚರಿಯ ವಸ್ತುವಾದ ಯಮಕಭಾರತ ಮುಂತಾದ ಗ್ರಂಥಗಳ ಮಾಹಾತ್ಮ್ಯವನ್ನು ನಾವಿಲ್ಲಿ ಕೇಳುತ್ತೇವೆ. 

Play Time: 29:05

Size: 5.16 MB


Download Upanyasa Share to facebook View Comments
3196 Views

Comments

(You can only view comments here. If you want to write a comment please download the app.)
  • No Comment