Upanyasa - VNU328

MV128 ಶ್ರೀಮದನುವ್ಯಾಖ್ಯಾನದ ರಚನೆ

03/10/2016

ಶ್ರೀಮದನುವ್ಯಾಖ್ಯಾನದ ರಚನೆ

ಆಚಾರ್ಯರ ಗ್ರಂಥಗಳ ಮಾಹಾತ್ಮ್ಯವನ್ನು ಆಚಾರ್ಯರ ಮುಂದೆ ನಿಂತು ನಿವೇದಿಸಿಕೊಂಡ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಸಮಸ್ತ ದುರ್ವಾದಗಳನ್ನು ಖಂಡಿಸುವ, ಬ್ರಹ್ಮಸೂತ್ರಭಾಷ್ಯದಲ್ಲಿ ಸೂಚಿತವಾದ ಯುಕ್ತಿಗಳನ್ನು ಪರಿಸ್ಪಷ್ಟವಾಗಿ ನಿರೂಪಿಸುವ ಮತ್ತೊಂದು ಗ್ರಂಥವನ್ನು ರಚಿಸಿ ನೀಡಿ ಎಂದು ಪ್ರಾರ್ಥನೆ ಮಾಡುತ್ತಾರೆ. ಆಚಾರ್ಯರು ಆ ದಿವಸವೇ ನಾಲ್ಕು ಜನ ಶಿಷ್ಯರನ್ನು ಕೂಡಿಸಿ ಅನುವ್ಯಾಖ್ಯಾನವನ್ನು ರಚಿಸಿ ತ್ರಿವಿಕ್ರಮಪಂಡಿತಾಚಾರ್ಯರಿಗೆ ನೀಡಿದ ಪರಮಾದ್ಭುತ ಘಟನೆಯ ವಿವರಣೆ ಇಲ್ಲಿದೆ.

ನ್ಯಾಯವಿವರಣದ ರಚನೆ

ಅನುವ್ಯಾಖ್ಯಾನದಲ್ಲಿ ಹೇಳಿದ ಯುಕ್ತಿಗಳನ್ನು ವಿವರಿಸುವ ಗ್ರಂಥ ನ್ಯಾಯವಿವರಣ. ಆ ಗ್ರಂಥದ ರಚನೆಯ ಕ್ರಮವನ್ನು ವಿವರಿಸಿ, ಈ ಗ್ರಂಥಗಳನ್ನು ಅವಲಂಬಿಸಿ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ತತ್ವಪ್ರದೀಪವನ್ನು ರಚಿಸಿದ ಘಟನೆಯ ವಿವರಣೆ ಇಲ್ಲಿದೆ.

ಆಚಾರ್ಯರಲ್ಲಿ ಪ್ರಾರ್ಥನೆ

ಶ್ರೀಮದಾಚಾರ್ಯರ ಗ್ರಂಥಗಳ ಸಕಲಾರ್ಥವನ್ನು ತಿಳಿಯುವ ಯೋಗ್ಯತೆ ಸರ್ವಥಾ ನಮ್ಮದಲ್ಲ ಎಂಬ ತತ್ವವನ್ನು ಮನಗಾಣಿಸಿ, ಆಚಾರ್ಯರಲ್ಲಿ ನಾವು ಸಲ್ಲಿಸಬೇಕಾದ ಪ್ರಾರ್ಥನೆಯನ್ನು ತಿಳಿಸಿ ಹೇಳುವದರೊಂದಿಗೆ ಈ ಉಪನ್ಯಾಸ ಮುಕ್ತಾಯವಾಗುತ್ತದೆ.

Play Time: 22:46

Size: 4.07 MB


Download Upanyasa Share to facebook View Comments
3013 Views

Comments

(You can only view comments here. If you want to write a comment please download the app.)
  • No Comment