03/10/2016
ಶ್ರೀಮಧ್ವಾನುಜಾಚಾರ್ಯರ ವೈರಾಗ್ಯ ಶ್ರೀಮಧ್ಯಗೇಹಾರ್ಯದಂಪತಿಗಳ ನಿರ್ಯಾಣದ ನಂತರ ಶ್ರೀಮಧ್ವಾನುಜಾಚಾರ್ಯರು ತಮ್ಮ ಬಳಿ ಇದ್ದ ಸಮಸ್ತ ಸಂಪತ್ತನ್ನು ಕಳೆದುಕೊಳ್ಳುತ್ತಾರೆ, ಆ ಮೂಲಕ ತಮ್ಮ ಸ್ವಾಭಾವಿಕವಾದ ಪೂರ್ಣವಾದ ವೈರಾಗ್ಯವನ್ನು ಪಡೆಯುತ್ತಾರೆ. ಈ ಸಂದರ್ಭದಲ್ಲಿ ತಿಳಿಯಬೇಕಾದ ಮಹತ್ತ್ವದ ಅಂಶಗಳ ವಿವರಣೆಯೊಂದಿಗೆ ಭಗವಂತನಲ್ಲಿ ಭಕ್ತಿ ಇದ್ದಾಗ ನಾವು ಮಾಡುವ ಸಂಪತ್ತಿನ ಭೋಗವೂ ಸಾಧನೆಯಾಗುತ್ತದೆ, ದಾನವೂ ಸಾಧನೆಯಾಗುತ್ತದೆ, ಹಣದ ವಿನಾಶವೂ ನಮಗೆ ವೈರಾಗ್ಯವನ್ನು ನೀಡುತ್ತದೆ ಎಂಬ ಮಾತಿನ ವಿವರಣೆ ಇಲ್ಲಿದೆ. ಆಚಾರ್ಯರ ಬಳಿಬಂದ ಮಧ್ವಾನುಜಾಚಾರ್ಯರು ಪೂರ್ಣ ವೈರಾಗ್ಯದಿಂದ ಯುಕ್ತರಾದ ಶ್ರೀ ಮಧ್ವಾನುಜಾಚಾರ್ಯರು ಸಂನ್ಯಾಸವನ್ನು ಪಡೆಯಲಿಕ್ಕಾಗಿ ಆಚಾರ್ಯರ ಬಳಿ ಬಂದು ಪ್ರಾರ್ಥನೆ ಮಾಡಿದ ಘಟನೆಯ ವಿವರ ಇಲ್ಲಿದೆ. ಅವರ ಆಧ್ಯಾತ್ಮಿಕ ಸಾಮರ್ಥ್ಯ ಸಂನ್ಯಾಸವನ್ನು ಪ್ರಾರ್ಥಿಸಿದ ತಮ್ಮ ತಮ್ಮನಿಗೆ ‘‘ನಂತರ ನೀಡುತ್ತೇನೆ’’ ಎಂದು ಹೇಳಿ ಆಚಾರ್ಯರು ಅವರನ್ನು ಪಾಜಕಕ್ಕೆ ಕೊಟ್ಟು ಕಳುಹಿಸುತ್ತಾರೆ. ಪಾಜಕದ ಮನೆಯಲ್ಲಿ ಹಸಿವು, ನೀರಡಿಕೆ, ನಿದ್ರೆಗಳನ್ನು ಬಿಟ್ಟು ಆಚಾರ್ಯರನ್ನು ಪ್ರತೀಕ್ಷೆ ಮಾಡುತ್ತಿರುತ್ತಾರೆ. ಟೀಕಾಕೃತ್ಪಾದರ ನ್ಯಾಯಸುಧೆಯ ‘‘ಆಧ್ಯಾತ್ಮಿಕಶಕ್ತಿಸಂಪನ್ನೇನೈವ ಲಭ್ಯತೇ ನಾನ್ಯೇನ’’ ಎಂಬ ಮಾತಿಗೆ ದೃಷ್ಟಾಂತವನ್ನು ನಾವು ಶ್ರೀ ಮಧ್ವಾನುಜಾಚಾರ್ಯರ ಜೀವನದಲ್ಲಿ ಕಾಣುವದನ್ನು ಇಲ್ಲಿ ವಿವರಿಸಲಾಗಿದೆ. ಪಾಜಕಕ್ಕೆ ಬಂದ ಆಚಾರ್ಯರು ತಮ್ಮ ತಮ್ಮನ ಪೂರ್ಣ ವೈರಾಗ್ಯವನ್ನು ತಿಳಿದ ಸರ್ವಜ್ಞರಾದ ಶ್ರೀಮದಾಚಾರ್ಯರು ಅವರ ಉದ್ಧಾರಕ್ಕಾಗಿ ಪಾಜಕಕ್ಕೆ ಸ್ವಯಂ ತಾವೇ ಬಂದು ಅವರನ್ನು ಉದ್ಧರಿಸಿದ ದಿವ್ಯ ಘಟನೆಯ ಚಿತ್ರಣದೊಂದಿಗೆ ಈ ಉಪನ್ಯಾಸ ಮುಕ್ತಾಯವಾಗುತ್ತದೆ.
Play Time: 41:00
Size: 7.21 MB