Upanyasa - VNU331

MV131 ಶ್ರೀ ವಿಷ್ಣುತೀರ್ಥರ ಸಂನ್ಯಾಸ

03/10/2016

ಶ್ರೀವಿಷ್ಣುತೀರ್ಥರ ಶ್ರೇಷ್ಠ ಯೋಗ್ಯತೆ

ಪರಿಶುದ್ಧಕುಲದಲ್ಲಿ ಅವತರಿಸಿಬಂದ ಶ್ರೀ ಮಧ್ವಾನುಜಾಚಾರ್ಯರು, ವೇದ ವೇದಾಂತಗಳ ಅಧ್ಯಯನವನ್ನು ಮಾಡಿ, ಪರಿಶುದ್ಧವಾದ ಧರ್ಮಗಳನ್ನು ಆಚರಿಸುತ್ತ, ನಿತಾಂತವಾದ ದೈಹಿಕ ಮಾನಸಿಕಶುದ್ಧಿಯನ್ನು ಸಂಪಾದಿಸಿ, ವೈರಾಗ್ಯದಿಂದ ಭೂಷಿತರಾಗಿ ಸಂನ್ಯಾಸಸ್ವೀಕಾರಕ್ಕೆ ಯೋಗ್ಯತೆಯನ್ನು ಗಳಿಸಿದ್ದರು ಎಂಬ ಪಂಡಿತಾಚಾರ್ಯರ ಮಾತಿನ ವಿವರಣೆ ಈ ಭಾಗದಲ್ಲಿದೆ.

ಶ್ರೀಮಧ್ವಾನುಜಾಚಾರ್ಯರು ಗೃಹಸ್ಥರು

ಶ್ರೀ ವಿಷ್ಣುತೀರ್ಥರು ಪೂರ್ವಾಶ್ರಮದಲ್ಲಿ ಗೃಹಸ್ಥರಾಗಿದ್ದರು ಎಂಬ ವಿಷಯವನ್ನು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ.

ಶ್ರೀವಿಷ್ಣುತೀರ್ಥರ ಸಂನ್ಯಾಸ ಮತ್ತು ಸ್ವರೂಪ

ಸಂನ್ಯಾಸಾಶ್ರಮವನ್ನು ಸ್ವೀಕರಿಸಲಿಕ್ಕೆ ಎಲ್ಲ ರೀತಿಯ ಯೋಗ್ಯತೆಯನ್ನು ಗಳಿಸಿದ್ದ ಶ್ರೀಮಧ್ವಾನುಜಾಚಾರ್ಯರಿಗೆ ಆಚಾರ್ಯರು ಸಂನ್ಯಾಸವನ್ನು ನೀಡುವ ಘಟನೆಯನ್ನು ವಿವರಿಸಿ, ಶ್ರೀ ಮಧ್ವವಿಜಯದ ವಚನಗಳಿಂದ ಶ್ರೀವಿಷ್ಣುತೀರ್ಥರು ಶ್ರೇಷ್ಠ ಯೋಗ್ಯತೆಯ ಋಷಿಗಳು ಎಂದು ನಿರ್ಣಯವಾಗುತ್ತದೆ, ಅವರು ದೇವತಾಸ್ವರೂಪರಲ್ಲ, ಇಂದ್ರನ ಅವತಾರವಂತೂ ಸರ್ವಥಾ ಅಲ್ಲ ಎಂಬ ಮಾತನ್ನು ಇಲ್ಲಿ ಸಮರ್ಥಿಸಲಾಗಿದೆ.


ಶ್ರೀವಿಷ್ಣುತೀರ್ಥ ಎಂಬ ಹೆಸರಿನ ಪ್ರಾಪ್ತಿ

ಸಂನ್ಯಾಸವನ್ನು ನೀಡಿ, ಬ್ರಹ್ಮತತ್ವವನ್ನು ಉಪದೇಶಿಸಿ, ಆಚಾರ್ಯರು ಆ ತಮ್ಮ ಪ್ರೇಮದ ಶಿಷ್ಯ ಶ್ರೀ ಮಧ್ವಾನುಜಾಚಾರ್ಯರಿಗೆ ಶ್ರೀ ವಿಷ್ಣುತೀರ್ಥರು ಎಂದು ನಾಮಕರಣವನ್ನು ಮಾಡಿದ, ಘಟನೆಯ ವಿವರವನ್ನು ನಾವಿಲ್ಲಿ ಕೇಳುತ್ತೇವೆ. ಆಚಾರ್ಯರು ಆ ವಿಷ್ಣುತೀರ್ಥರು ಮೇಲೆ ಮಾಡಿದ ಅನುಗ್ರಹದ ವರ್ಣನೆಯೊಂದಿಗೆ.

 ಶ್ರೀವಿಷ್ಣುತೀರ್ಥರ ಸಾಧನೆ

ಸಂನ್ಯಾಸವನ್ನು ಸ್ವೀಕರಿಸಿದ ಕ್ಷಣದಿಂದ ಶ್ರೇಷ್ಠವಾದ ರೀತಿಯಲ್ಲಿ ಶ್ರೀ ವಿಷ್ಣುತೀರ್ಥರು ತಮ್ಮ ಸಾಧನೆಯನ್ನು ಆರಂಭಿಸುತ್ತಾರೆ. ನಿರಂತರ ಶಾಸದ ಅಧ್ಯಯನ, ಅಧ್ಯಾಪನ, ಮನನಗಳಲ್ಲಿ ಆಸಕ್ತರಾಗಿ ಒಂದು ಕ್ಷಣದ ಕಾಲವನ್ನೂ ಅವರು ವ್ಯರ್ಥಗೊಳಿಸಿಕೊಳ್ಳುವದಿಲ್ಲ. ತಮ್ಮ ಇಂದ್ರಿಯ ನಿಗ್ರಹ, ಗುರುದೇವತಾಭಕ್ತಿ, ಗುರುಸೇವೆ, ಮಾಧುರ್ಯ ಮುಂತಾದ ಗುಣಗಳಿಂದ ತಮ್ಮಲ್ಲಿದ್ದ ಆಚಾರ್ಯರ ಕೃಪಾಂಕುರವನ್ನು ಹೆಮ್ಮರವನ್ನಾಗಿ ಮಾಡಿಕೊಂಡರು ಎಂಬ ಮಾತಿನ ವಿವರ ಇಲ್ಲಿದೆ. ಆಚಾರ್ಯರ ಕಾರುಣ್ಯಕಲ್ಪವೃಕ್ಷವನ್ನು ಆಶ್ರಯಿಸಿದ ಆ ಮಹಾಮಹಿಮರ ಮಾಹಾತ್ಮ್ಯವನ್ನು ವರ್ಣಿಸುವ ಯೋಗ್ಯತೆ ನನ್ನದಲ್ಲ ಎಂಬ ಪಂಡಿತಾಚಾರ್ಯರ ಮಾತಿನ ವಿವರಣೆಯೊಂದಿಗೆ ಈ ಉಪನ್ಯಾಸವನ್ನು ಗುರ್ವಂತರ್ಗತನಿಗೆ ಸಮರ್ಪಿಸಲಾಗಿದೆ.

Play Time: 51:26

Size: 9.01 MB


Download Upanyasa Share to facebook View Comments
3106 Views

Comments

(You can only view comments here. If you want to write a comment please download the app.)
 • Nv.padmanabha,Bangalore

  6:48 PM , 10/12/2017

  Not covered all slokas

  Vishnudasa Nagendracharya

  Can you please which shloka is omitted. 
  
  All 1006 shlokas (Except 8 shlokas in first sarga) of Sri Madhwa Vijaya are explained in detail in these upanyasas. Please listen to all upanyasas firs and then comment.