03/10/2016
ಶ್ರೀ ವಿಷ್ಣುತೀರ್ಥರ ಶಾಸ್ತ್ರವ್ಯಾಖ್ಯಾನಕೌಶಲ ಶ್ರೀಮದಾಚಾರ್ಯರ ಸಿದ್ಧಾಂತದ ಪುನಃಪ್ರತಿಷ್ಠಾಪನಾಜವಾಬ್ದಾರಿಯನ್ನು ಆಚಾರ್ಯರಿಂದ ಪಡೆದ ಆ ಮಹಾನುಭಾವರ ಪ್ರವಕ್ತೃತ್ವದ ಸಾಮರ್ಥ್ಯವನ್ನು ಇಲ್ಲಿ ಈಷತ್ ನಿರೂಪಿಸಲಾಗಿದೆ. ಅವರ ಮಂತ್ರಸಿದ್ಧಿಯ ಎತ್ತರದ ಚಿಂತನೆಯೊಂದಿಗೆ. ಸರ್ವಶ್ರೇಷ್ಠ ಮಧ್ವದಾಸರು ವಿಷ್ಣುತೀರ್ಥರು ಮಧ್ವದಾಸ್ಯದಲ್ಲಿ, ಶ್ರೀಮದಾಚಾರ್ಯರ ಸೇವೆಯಲ್ಲಿ ಶ್ರೀವಿಷ್ಣುತೀರ್ಥರಿಗಿದ್ದ ನಿಷ್ಠೆ ಅಪಾರವಾದದ್ದು. ಮಧ್ವದಾಸರ ಮಧ್ಯದಲ್ಲಿ ನಾನು ಮೊದಲಿಗನಾಗಬೇಕು ಎಂದು ನಿಶ್ಚಯ ಮಾಡಿ ಅವರು ಆಚಾರ್ಯರ ಸೇವೆ ಮಾಡುತ್ತಿದ್ದ ಕ್ರಮ ಅನನ್ಯವಾದದ್ದು ಎಂಬ ತತ್ವದ ವಿವರಣೆ ಇಲ್ಲಿದೆ. ಶ್ರೀವಿಷ್ಣುತೀರ್ಥರ ತೀರ್ಥಯಾತ್ರೆ ಶ್ರೇಷ್ಠಸಂನ್ಯಾಸಧರ್ಮಗಳನ್ನು ಪಾಲಿಸುತ್ತಿದ್ದ ಶ್ರೀವಿಷ್ಣುತೀರ್ಥರು ಆಚಾರ್ಯರ ಆಜ್ಞೆಯನ್ನು ಪಡೆದು ಸರ್ವತೀರ್ಥಕ್ಷೇತ್ರಗಳ ಯಾತ್ರೆಯನ್ನು ಮಾಡಿ ಬಂದ ಘಟನೆಯನ್ನು ನಾವಿಲ್ಲಿ ಕೇಳುತ್ತೇವೆ. ಆ ವಿಷ್ಣುತೀರ್ಥರು ಸ್ನಾನ ಮಾಡಿದ್ದರಿಂದ ಗಂಗಾದಿತೀರ್ಥಗಳು ಪರಿಶುದ್ಧವಾದವು ಎಂಬ ಆವರ ಅದ್ಭುತ ಮಾಹಾತ್ಮ್ಯವನ್ನು ಕೇಳುವದರೊಂದಿಗೆ.
Play Time: 25:23
Size: 4.52 MB