03/10/2016
ಅಗಮ್ಯಮಹಿಮರು ಶ್ರೀವಿಷ್ಣುತೀರ್ಥರು ಶ್ರೀಮದಾಚಾರ್ಯರ ಸೇವೆಯ ಲವಾಗಿ ಭಗವಂತನ ಸಾಕ್ಷಾತ್ಕಾರವನ್ನು ಪಡೆದ ಶ್ರೀ ವಿಷ್ಣುತೀರ್ಥರ ಮೇಲೆ ಪರಮಾತ್ಮ ಅದೆಷ್ಟು ಅನುಗ್ರಹವನ್ನು ಮಾಡಿದ ಎನ್ನುವದನ್ನು ನಿಮಗೆ ತಿಳಿಯುವ ಯೋಗ್ಯತೆ ಇಲ್ಲವಾದ್ದರಿಂದ ಆ ಮಾಹಾತ್ಮ್ಯಗಳನ್ನು ನಾನು ಹೇಳುವಿದಲ್ಲ ಎಂದು ನಾರಾಯಣಪಂಡಿತಾಚಾರ್ಯರು ಹೇಳುತ್ತಾರೆ! ಆ ಅದ್ಭುತ ಉದ್ಗಾರದ ವಿವರಣೆಯನ್ನು ನಾವಿಲ್ಲಿ ಕೇಳುತ್ತೇವೆ. ಶಿಷ್ಯರ ಮೇಲೆ ಅನುಗ್ರಹ ಶ್ರೀ ಅನಿರುದ್ಧತೀರ್ಥರು ಹಾಗೂ ಶ್ರೀ ವೇದವ್ಯಾಸತೀರ್ಥರು ಇವರಿಬ್ಬರ ಮೇಲೆ ಶ್ರೀ ವಿಷ್ಣುತೀರ್ಥರು ಮಾಡಿದ ಮಹಾನುಗ್ರಹಗಳ ಕುರಿತು ನಾವಿಲ್ಲಿ ಕೇಳುತ್ತೇವೆ. ಕುಮಾರಪರ್ವತದ ಆರೋಹಣ ಶ್ರೀಮಧ್ವಶಾಸವನ್ನು ಪುನಃಪ್ರತಿಷ್ಠಾಪನೆಯ ಕಾರ್ಯವನ್ನು ಮಾಡಲೋಸುಗ, ಶ್ರೀಮದಾಚಾರ್ಯರ ಆಜ್ಞೆಯಂತೆ ಕುಮಾರಪರ್ವತದಲ್ಲಿದ್ದು ಇಂದಿಗೂ ತಪಸ್ಸು ಮಾಡುತ್ತಿರುವ ಶ್ರೀ ವಿಷ್ಣುತೀರ್ಥರ ಮಹಾಮಾಹಾತ್ಮ್ಯದ ಚಿಂತನೆಯೊಂದಿಗೆ ಈ ಉಪನ್ಯಾಸ ಮುಕ್ತಾಯವಾಗುತ್ತದೆ.
Play Time: 31:19
Size: 5.54 MB