03/10/2016
ಅಷ್ಟಮಠಾಧೀಶರ ಮಾಹಾತ್ಮ್ಯ ಶ್ರೀಮದಾಚಾರ್ಯರಿಂದ ಸಂನ್ಯಾಸವನ್ನು ಸ್ವೀಕರಿಸಿದ ಮಹಾಮಹಿಮಾಶಾಲಿಗಳಾದ, ಧನ್ಯಸಂನ್ಯಾಸಿವರ್ಯರಾದ ತಮ್ಮ ಪಾದಸ್ಪರ್ಶದಿಂದ ಭೂಮಿಗೆ ಪಾವಿತ್ರ್ಯವನ್ನು ನೀಡುತ್ತಿದ್ದ, ಭೂಮಿಭೂಷಾಮಣಿಗಳಾದ, ಜ್ಞಾನಸಮುದ್ರರಾದ ಶ್ರೀಹೃಷೀಕೇಶತೀರ್ಥರು, ಶ್ರೀಜನಾರ್ದನತೀರ್ಥರು, ಶ್ರೀನರಸಿಂಹತೀರ್ಥರು, ಶ್ರೀ ಉಪೇಂದ್ರತೀರ್ಥರು, ಶ್ರೀವಾಮನತೀರ್ಥರು, ಶ್ರೀರಾಮತೀರ್ಥರು, ಶ್ರೀ ಅಧೋಕ್ಷಜತೀರ್ಥರು ಇವರೆಲ್ಲರ ಮಾಹಾತ್ಮ್ಯವನ್ನು ಇಲ್ಲಿ ಚಿಂತಿಸಲಾಗಿದೆ. ಮಧ್ವಪ್ರಶಿಷ್ಯರ ಮಾಹಾತ್ಮ್ಯ ಆಚಾರ್ಯರ ಶಿಷ್ಯರ ಶಿಷ್ಯರ ಮಾಹಾತ್ಮ್ಯವನ್ನು ನಾವಿಲ್ಲಿ ಕೇಳುತ್ತೇವೆ. ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಸಂಶೋಧಿಸಿರುವ ಒಂದು ಅಪೂರ್ವ ದಾಖಲೆಯ ಉಲ್ಲೇಖದೊಂದಿಗೆ ಮೊದಲ ಏಳೆಂಟು ತಲೆಮಾರಿನ ಶ್ರೀಮದುಡುಪಿಮಠಾಧೀಶರ ಅದ್ಭುತ ಯೋಗಶಕ್ತಿಯ ಕುರಿತು ಇಲ್ಲಿ ತಿಳಿಸಲಾಗಿದೆ. ಮಧ್ವದಾಸ್ಯದ ಮಹಿಮೆ ಶ್ರೀತ್ರಿವಿಕ್ರಮಪಂಡಿತಾಚಾರ್ಯರೇ ಮೊದಲಾದ ನೂರಾರು ಗೃಹಸ್ಥಶಿಷ್ಯರು ಆಚಾರ್ಯರಿಂದ ಅನುಗ್ರಹ ಪಡೆದ ಬಗೆಯನ್ನು ತಿಳಿಸಿ ಮಧ್ವದಾಸ್ಯದ, ಮಧ್ವದಾಸರ ದಾಸ್ಯದ ಮಹಿಮೆಯನ್ನು ಪಂಡಿತಾಚಾರ್ಯರು ತಿಳಿಸುತ್ತಾರೆ. ಆ ಮಾತುಗಳನ್ನು ವಿವರಿಸಿ ಆಚಾರ್ಯರು ಕಣ್ವತೀರ್ಥದ ಬಳಿಯಲ್ಲಿ ಚಾತುರ್ಮಾಸ್ಯಕ್ಕಾಗಿ ಕುಳಿತರು ಎಂಬ ಘಟನೆಯನ್ನು ತಿಳಿಸುವದರೊಂದು ಈ ಉಪನ್ಯಾಸ ಮುಕ್ತಾಯಗೊಂಡು ಗುರ್ವಂತರ್ಗತನಿಗೆ ಸಮರ್ಪಿತವಾಗಿದೆ.
Play Time: 24:18
Size: 4.33 MB