03/10/2016
ಮಧ್ವಚರಿತ್ರೆ ಮೋಕ್ಷಪ್ರದ ಕಣ್ವತೀರ್ಥದಲ್ಲಿ ಆಚಾರ್ಯರು ಚಾತುರ್ಮಾಸ್ಯಕ್ಕಾಗಿ ಕುಳಿತಿದ್ದಾಗ, ಸಜ್ಜನರು ಆಚಾರ್ಯರ ಶಿಷ್ಯರ ಬಳಿ ಮಧ್ವಚರಿತ್ರೆಯನ್ನು ಹೇಳಲು ಪ್ರಾರ್ಥಿಸುತ್ತಾರೆ. ಬೇರೆ ಬೇರೆ ಪ್ರದೇಶಗಳಲ್ಲಿ ನಡೆದ ಆಚಾರ್ಯರ ಅದ್ಭುತ ಸಾಮರ್ಥ್ಯಗಳನ್ನು ಜಗತ್ತಿಗೆ ಪರಿಚಯಿಸಿದ ಅಪೂರ್ವ ಘಟನೆಗಳನ್ನು ಹೇಳ ಹೊರಟ ಆ ಧನ್ಯಮಧ್ವಶಿಷ್ಯರು ಮೊದಲಿಗೆ ಆಚಾರ್ಯರ ಚರಿತ್ರೆ ಮೋಕ್ಷಪ್ರದ ಎಂದು ಪ್ರತಿಪಾದಿಸುತ್ತಾರೆ. ಆ ಭಾಗದ ವಿವರಣೆ ಇಲ್ಲಿದೆ. ಆಚಾರ್ಯರ ಮಂತ್ರಸಿದ್ಧಿಯ ಸಾಮರ್ಥ್ಯ ವೇದಗಳೆಲ್ಲ ನಿರರ್ಥಕ, ಅದರಲ್ಲಿ ಹೇಳಿದ್ದು ಆಗುವುದಿಲ್ಲ ಎಂದು ಬಡಬಡಿಸುವ ಮಂದಿ ಅನಾದಿಕಾಲದಿಂದಲೂ ಇದ್ದಾರೆ. ಇಂದಿಗೂ ಇದ್ದಾರೆ. ಮುಂದೆಯೂ ಇರುತ್ತಾರೆ. ಶ್ರೀಮದಾಚಾರ್ಯರ ಕಾಲಕ್ಕೂ ಆ ರೀತಿಯ ರಾಜನೊಬ್ಬನಿದ್ದ. ಗೋಮತೀ ನದಿಯ ತೀರದಲ್ಲಿ ಆಚಾರ್ಯರಿದ್ದಾಗ ದುಷ್ಟರಾಜನೊಬ್ಬ ಬಂದು ವೇದಗಳು ಅಪ್ರಮಾಣ, ವೈದಿಕ ಕರ್ಮಗಳೆಲ್ಲ ನಿರರ್ಥಕ ಎಂದು ಬಡಬಡಿಸಿದಾಗ ಆಚಾರ್ಯರು ಕೈಯಲ್ಲಿ ಹೆಸರುಕಾಳುಗಳನ್ನು ಹಿಡಿದು ಕೇವಲ ಓಷಧಿಸೂಕ್ತಪಠಣದಿಂದ ಅದನ್ನು ಮೊಳಕೆಯೊಡಿಸಿ, ಅದರಲ್ಲಿ ಪುಷ್ಪಬೀಜಗಳನ್ನು ಸೃಷ್ಟಿಸಿದ ಅಪೂರ್ವ ಪ್ರಸಂಗದ ವಿವರ ಇಲ್ಲಿದೆ. ಇಂದಿನ ಜನ ಅವಶ್ಯವಾಗಿ ತಿಳಿಯಬೇಕಾಗ ತತ್ವಗಳ ವಿವರಣೆಯೊಂದಿಗೆ. ಇದು ನಮಗೆ ಸಾಧ್ಯವೇ? ಎಂಬ ಪ್ರಶ್ನೆಗೂ ಈ ಉಪನ್ಯಾಸದಲ್ಲಿ ವಿಸ್ತೃತ ಉತ್ತರವಿದೆ. ನೀವೂ ಕೇಳಿ, ನಿಮ್ಮ ಮಕ್ಕಳಿಗೂ ತಪ್ಪದೇ ಕೇಳಿಸಿ.
Play Time: 32:55
Size: 5.82 MB